ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ವಿಚಾರದಲ್ಲಿ ಶಿವಕುಮಾರ್ ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 

ಬೆಂಗಳೂರು (ಆ.30): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜವಾಬ್ದಾರಿ ಮರೆತು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೂಕ್ಷ್ಮತೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡು ಶಿವಕುಮಾರ್‌ ಮಾತನಾಡಬೇಕು. ಈಗಾಗಲೇ ಈ ವಿಚಾರದಲ್ಲಿ ಪ್ರಮೋದಾದೇವಿ, ಯದುವೀರ್, ಪ್ರತಾಪ್ ಸಿಂಹ ಮಾತಾಡಿದ್ದಾರೆ. ದಸರಾ ಸಾಂಸ್ಕೃತಿಕ ಹಬ್ಬವೂ ಹೌದು, ಧಾರ್ಮಿಕ ಹಬ್ಬವೂ ಹೌದು ಎಂದರು.

ಇದನ್ನೂ ಓದಿ: ಕನ್ನಡಾಂಬೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಲಿ..' ಬಾನು ಮುಷ್ತಾಕ್ ಆಯ್ಕೆಗೆ ಸಂಸದ ಯದುವೀರ್ ಯು-ಟರ್ನ್?

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ಸಿಗರು ಎಲ್ಲಿ ಸೆಕ್ಯುಲರ್‌ ತೋರಿಸಬೇಕೋ ಅಲ್ಲಿ ತೋರಿಸಲಿ. ನಂಬಿಕೆ ಇಲ್ಲದವರಿಂದ ದಸರಾ ಉದ್ಘಾಟಿಸಲು ಹೊರಟ್ಟಿದ್ದಾರೆ. ಎಲ್ಲಾ ಹಂತಗಳಲ್ಲೂ ಈ ಸರ್ಕಾರ ಅಪಪ್ರಚಾರಕ್ಕೆ ಕಾರಣವಾಗಿದೆ. ಶಿವಕುಮಾರ್‌ ಜನರ ಭಾವನೆಗಳಿಗೆ ನೋವು ತಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: 'ಮುಸ್ಲಿಂರ ಧಾರ್ಮಿಕ ಕಾರ್ಯಕ್ರಮಗಳನ್ನ ಹಿಂದೂಗಳಿಂದ ಉದ್ಘಾಟಿಸಲಿ..'; ಕಾಂಗ್ರೆಸ್‌ ಸರ್ಕಾರಕ್ಕೆ ಶಾಸಕ ಸಮೃದ್ಧಿ ಮಂಜುನಾಥ ಸವಾಲು!

ಡಿಕೆಶಿ ಜನರ ಕ್ಷಮೆ ಕೇಳಲಿ:

ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆಗೆ ಬಂದ ಮೇಲೆ ಅದು ಹಿಂದೂಗಳ ಆಸ್ತಿ ಅಂತ ಆಗಿದೆ. ಬೇರೆ ಧರ್ಮದವರು ಅಲ್ಲಿ ವಸ್ತುಗಳ ಮಾರಾಟಕ್ಕೆ ನಿರ್ಬಂಧವಿದೆ. ಡಿ.ಕೆ.ಶಿವಕುಮಾರ್‌ಗೆ ಇಷ್ಟು ಪರಿಜ್ಞಾನ ಇಲ್ಲವೇ? ಹೇಳಿಕೆ ಕೊಡುವಾಗ ಜವಾಬ್ದಾರಿಯಿಂದ ಕೊಡಬೇಕು. ಕೂಡಲೇ ಅವರು ಈ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಅಶ್ವತ್ಥನಾರಾಯಣ ಆಗ್ರಹಿಸಿದರು.