ಮುಡಾ ಹಗರಣ: ತಪ್ಪು ಮಾಡಿಲ್ಲ ಎನ್ನುವ ಸಿದ್ದರಾಮಯ್ಯ ನಿವೇಶನ ವಾಪಸ್ ನೀಡಿದ್ದೇಕೆ: ಶಾಸಕ ಶ್ರೀವತ್ಸ ಪ್ರಶ್ನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ತರಾತುರಿಯಲ್ಲಿ 14 ನಿವೇಶನವನ್ನು ಮುಡಾಗೆ ವಾಪಸ್ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದ್ದಾರೆ.
ಮೈಸೂರು (ಅ.5): ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ತರಾತುರಿಯಲ್ಲಿ 14 ನಿವೇಶನವನ್ನು ಮುಡಾಗೆ ವಾಪಸ್ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡುತ್ತಿದೆ. ಅಕ್ರಮವಾಗಿ ನಿವೇಶನ ಪಡೆದಿಲ್ಲ ಎನ್ನುತ್ತಿದ್ದರು. ಹಾಗಾದರೆ, ಏಕಾಏಕಿ ನಿವೇಶನಗಳನ್ನು ವಾಪಸ್ ನೀಡುವ ಅವಶ್ಯಕತೆ ಏನಿತ್ತು? ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.
ಮುಡಾದಲ್ಲಿ ಹಗರಣದ ಕುರಿತು ತನಿಖೆ ಮಾಡಿದರೆ ಎಲ್ಲವೂ ಹೊರ ಬರಲಿದೆ. ಇಲ್ಲಿ ಆ ಪಕ್ಷ ಈ ಪಕ್ಷ ಎನ್ನುವುದಿಲ್ಲ. ನಮ್ಮ ಪಕ್ಷದವರು ತಪ್ಪು ಮಾಡಿದ್ದರೆ ಅವರ ಮೇಲೂ ಕ್ರಮವಾಗಲಿ. ಇದು ಕೇವಲ 14 ಸೈಟ್‌ಗಳ ಪ್ರಶ್ನೆ ಅಲ್ಲ, 4865 ಸೈಟ್‌ಗಳ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದರು.
ಸಿಎಂ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್: ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ ವ್ಯಂಗ್ಯ
ದಸರಾ ಉದ್ಘಾಟನೆಯ ವೇದಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಸಾಹಿತಿ ಹಂಪ ನಾಗರಾಜಯ್ಯ ಅವರು ರಾಜಕೀಯ ಮಾತನಾಡಿದ್ದು ಸರಿಯಲ್ಲ ಎಂದರು.