* ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದ ಆಚರಣೆಗಳಲ್ಲಿ ಒಂದು ನಿಯಮ* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ ಫಾತಿಮಾ ಆರೋಪ* ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡುವ ಷಡ್ಯಂತ್ರ
ಬೆಂಗಳೂರು(ಫೆ.06): ಹಿಜಾಬ್ ಧರಿಸುವುದಕ್ಕೆ ವಿರೋಧಿಸುವ ಮೂಲಕ ಬಲಪಂಥೀಯ ಹಿಂದುತ್ವವಾದಿ ಗುಂಪುಗಳು ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕುಗಳನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’(Campus Front of India) ರಾಷ್ಟ್ರೀಯ ಸಮಿತಿ ಸದಸ್ಯೆ ಕೆ.ಪಿ.ಫಾತಿಮಾ ಶೆರಿನ್(KP Fathima Sherin) ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸುವುದು ಮುಸ್ಲಿಂ(Muslim) ಧರ್ಮದ ಆಚರಣೆಗಳಲ್ಲಿ ಒಂದು ನಿಯಮ. ಆದರೆ, ಶಾಲಾ ಕಾಲೇಜುಗಳಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡುವ ಷಡ್ಯಂತ್ರ ನಡೆಸಲಾಗುತ್ತಿದೆ. ಬಿಜೆಪಿಯ(BJP) ಶಾಸಕರು ಉಡುಪಿ ಸರ್ಕಾರಿ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿದ್ದು, ಬಿಜೆಪಿ ಪಕ್ಷದ ಒತ್ತಡದಿಂದ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಕ್ಕೆ ಅವಕಾಶ ನಿರಾಕರಿಸುವಂತೆ ಸೂಚನೆ ನೀಡಿದ್ದಾರೆ. ಇದೇ ಕಾರಣ ಕಾಲೇಜಿನ ಪ್ರಾಂಶುಪಾಲರು ಶಿರವಸ್ತ್ರ ಧರಿಸಿ ಕಾಲೇಜು ಆವರಣ ಪ್ರವೇಶಿಸಬಾರದು ಎಂದು ಆದೇಶಿಸಿದ್ದಾರೆ. ಇದು ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರು ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
Karnataka Hijab Row ಹಿಜಾಬ್ ಹೆಸರಲ್ಲಿ ಕುತಂತ್ರ, 6 ವಿದ್ಯಾರ್ಥಿನಿಯರಿಗೆ ಮಾತ್ರ ಸಮಸ್ಯೆ ಯಾಕಾಯ್ತು? ಸಚಿವ ಕೋಟ!
ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಪ್ರವೇಶಿಸುವುದಕ್ಕೆ ಅಡ್ಡಿಯಿರಲಿಲ್ಲ. ಉಡುಪಿಯಲ್ಲಿ ನಡೆಯುತ್ತಿರುವ ಪಿತೂರಿಯಿಂದ ಚಿಕ್ಕಮಗಳೂರು ಮತ್ತು ಕುಂದಾಪುರದಲ್ಲಿಯೂ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಸಂಘ ಪರಿವಾರದಿಂದ ಪ್ರೇರಣೆಗೊಂಡಿರುವ ಯುವಕರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರಲು ಮುಂದಾಗುತ್ತಿದ್ದಾರೆ. ಕಾಲೇಜುಗಳಲ್ಲಿ ಕೋಮುದ್ವೇಷ ಬಿತ್ತುವ ಕಾರ್ಯಗಳು ನಡೆಯುತ್ತಿವೆ ಎಂದರು.
ಧಾರ್ಮಿಕ ಆಚರಣೆಗಳನ್ನು ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಕಾಲೇಜು ಪ್ರಾಂಶುಪಾಲರೊಬ್ಬರು ಸಂವಿಧಾನದ ಹಕ್ಕನ್ನು ಉಲ್ಲಂಘಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ತಕ್ಷಣ ಮಕ್ಕಳ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಕಾಲೇಜು ಆಡಳಿತ ಮಂಡಳಿ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಮುಸ್ಲಿಂ ಮಹಿಳಾ ಹೋರಾಟಗಾರರನ್ನು ಆನ್‌ಲೈನ್ ವೇದಿಕೆಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಈ ಬೆಳವಣಿಗೆ ಗಂಭೀರ ಅಪರಾಧವಾಗಿದ್ದರೂ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
Karnataka Hijab Row ಹಿಜಾಬ್ VS ಕೇಸರಿ ಪ್ರತಿಭಟನೆ, ಮಾರಕಾಸ್ತ್ರ ತಂದ ಇಬ್ಬರ ಬಂಧನ!
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೇರಳ ರಾಜ್ಯದ ಉಪಾಧ್ಯಕ್ಷ ಜೀಬಾ ಶಿರೀನ್, ಕರ್ನಾಟಕದ ಸದಸ್ಯರಾದ ಆಯಿಶಾ ಮುರ್ಷಿದಾ, ಫಾತಿಮಾ ಉಸ್ಮಾನ್, ಬೆಂಗಳೂರು ಜಿಲ್ಲಾ ಮುಖ್ಯಸ್ಥರಾದ ಮುದ್ದಸಿರ ಮತ್ತಿತರರಿದ್ದರು.
ಕಾಲೇಜು ಪ್ರವೇಶ ಪಡೆಯುವಾಗ ಸಮವಸ್ತ್ರ ಧರಿಸುತ್ತೇವೆ, ಶಿಸ್ತಿಗೆ ಭಂಗ ತರಲ್ಲ ಪತ್ರಕ್ಕೆ ಸಹಿ, ದಾಖಲೆಯಿಂದ ಸಂಕಷ್ಟ!
ಉಡುಪಿ: ಸರ್ಕಾರಿ ಬಾಲಕಿಯರ ಪಿಯು ಕಾಲೇಜಲ್ಲಿ ಸಮವಸ್ತ್ರದ ಜೊತೆಗೆ ಹಿಜಾಬ್(Hijab) ಧರಿಸುತ್ತೇವೆಂದು ಜಿದ್ದಿಗೆ ಬಿದ್ದಿರುವ 6 ವಿದ್ಯಾರ್ಥಿನಿಯರು(Students) ಕಾಲೇಜಿಗೆ ಪ್ರವೇಶ ಪಡೆಯುವಾಗ, ಕಾಲೇಜಿನ ನಿಗದಿತ ಸಮವಸ್ತ್ರ(Uniform) ಧರಿಸುತ್ತೇವೆ, ಶಿಸ್ತಿಗೆ(discipline) ಭಂಗ ತರಲ್ಲ ಎಂಬ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತ ದಾಖಲೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಕೆ.ರಘುಪತಿ ಭಟ್(Raghupathi Bhat ) ಬಿಡುಗಡೆ ಮಾಡಿದ್ದಾರೆ.
ಸಮವಸ್ತ್ರ ಧರಿಸುವುದು ಮತ್ತು ಶಿಸ್ತು ಪಾಲಿಸುವುದು ಸೇರಿದಂತೆ, 10 ನಿಮಯಗಳ ಬಗ್ಗೆ ನನಗೆ ನನ್ನ ಹೆತ್ತವರಿಗೆ ಸಂಪೂರ್ಣ ಅರಿವಿದೆ. ನನ್ನಿಂದ ಶಿಸ್ತು ಭಂಗ, ನಿಯಮ ಉಲ್ಲಂಘನೆಯಾದಲ್ಲಿ ಕಾಲೇಜಿನಿಂದ(College) ಟಿಸಿ ನೀಡಲಾಗುತ್ತದೆ ಎಂಬ ಬಗ್ಗೆ ನನಗೆ ತಿಳಿವಳಿಕೆ ಇದೆ ಎಂದು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದ್ದಾರೆ.
