ಮಾದೇವನ ಭಜಿಸಿದ ಮುಸ್ಲಿಂ ಯುವತಿ | ಹಿಜಾಬ್ ಧರಿಸಿಕೊಂಡೇ ಸುಮಧುವಾಗಿ ಹಾಡು | ಸೋಜಿಗದ ಸೂಜು ಮಲ್ಲಿಗೆ ಎಂದು ಹಾಡಿ ಮೋಡಿ ಮಾಡಿದಳು

ಸೋಜುಗದ ಸೂಜು ಮಲ್ಲಿಗೆ ಹಾಡು ಕೇಳಿದ್ದೀರಲ್ಲಾ..? ಈಗ ಇದೇ ವೈರಲ್ ಹಾಡು ಮತ್ತೊಮ್ಮೆ ವೈರಲ್ ಆಗಿದೆ. ಮುಸ್ಲಿಂ ಯುವತಿಯೊಬ್ಬಳು ಭಕ್ತಿಯಿಂದ ಮೈಮರೆತು ಹಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ನಜ್ಮಾ ನಝೀರ್ ಚಿಕ್ಕನೇರಳೆ ಎಂದ ಫೇಸ್‌ಬುಕ್ ಖಾತೆಯಲ್ಲಿ ಈ ಹಾಡಿನ ವಿಡಿಯೋ ಅಪ್ ಮಾಡಲಾಗಿದ್ದು, ಬಹಳಷ್ಟು ಜನರು ವಿಡಿಯೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್

ಹಾಡಿಗೆ 1 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ ಬಂದಿದ್ದು, ನೂರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಆದರೆ ಹಾಡಿರುವ ಹುಡುಗಿ ಯಾರು, ಎಲ್ಲಿಯವರೆಂಬ ಮಾಹಿತಿ ವಿಡಿಯೋ ಜೊತೆ ಶೇರ್ ಮಾಡಿಲ್ಲ.

ಈ ಹಿಂದೆ ಅನನ್ಯಾ ಭಟ್ ಅವರು ಈ ಹಾಡು ಹಾಡಿದಾಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಜುಗದ ಸೂಜಿಮಲ್ಲಿಗೆ ಎಂದು ಭಕ್ತಿಯಿಂದ ಹಾಡಿದ ಅನನ್ಯಾ ನಂತರ ಈಗ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ.