* ಕಾಶ್ಮೀರ-ಕನ್ಯಾಕುಮಾರಿವರೆಗೆ 1.25 ಲಕ್ಷ ಕಿ.ಮೀ. ನಡಿಗೆ* ದೆಹಲಿಯಲ್ಲಿ ಸ್ಮಾರಕ ನಿರ್ಮಿಸಲು ಜಾಧವ್ ವಿಶಿಷ್ಟ ಯತ್ನ* ಈ ಮಣ್ಣಿನಿಂದ ದೆಹಲಿಯಲ್ಲಿ ಸ್ಮಾರಕ ನಿರ್ಮಾಣ
ಬೆಂಗಳೂರು(ಫೆ.16): ದೆಹಲಿಯಲ್ಲಿ ಸ್ಮಾರಕ ನಿರ್ಮಿಸಲು ಮತ್ತು ಯೋಧರ ಕುಟುಂಬದ ಸ್ಥಿತಿಗತಿಯನ್ನು ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಇಲಾಖೆಗೆ(Department of Defense) ತಿಳಿಸಲು 144 ಹುತಾತ್ಮ ಯೋಧರ(Martyred Soldiers) ಸಮಾಧಿ(Grave) ಮಣ್ಣು ಸಂಗ್ರಹಿಸಿರುವುದಾಗಿ ಸಂಗೀತ ಶಿಕ್ಷಕ ಉಮೇಶ್ ಗೋಪಿನಾಥ್ ಜಾಧವ್(Umesh Gopinath Jadhav) ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ(Bengaluru) ಉಮೇಶ್, ಕಾರ್ಗಿಲ್(Kargil), ಪುಲ್ವಾಮಾ(Pulwama) ಮತ್ತು ಮುಂಬೈ ಭಯೋತ್ಪಾದಕರ ದಾಳಿಗೆ(Terrorist Attack) ತುತ್ತಾಗಿದ್ದ ಯೋಧರ ಕುಟುಂಬಗಳನ್ನು ಭೇಟಿಯಾಗಿ ಅಧ್ಯಯನ ಮಾಡಿದ್ದೇನೆ. ಸರ್ಕಾರದ ಅನುಮತಿ ಸಹಿತ ಕಾಶ್ಮೀರ-ಕನ್ಯಾಕುಮಾರಿವರೆಗೆ 1.25 ಲಕ್ಷ ಕಿ.ಮೀ. ಕ್ರಮಿಸಿದ್ದೇನೆ. ಹುತಾತ್ಮ ಯೋಧರ ಪತ್ನಿಗೆ ಶೇ.70ರಷ್ಟು ಮತ್ತು ವೃದ್ಧ ತಂದೆ-ತಾಯಿಗಳಿಗೆ ಶೇ.30ರಷ್ಟು ಪರಿಹಾರ ನೀಡುತ್ತಿರುವ ಸರ್ಕಾರ ಇನ್ನಷ್ಟು ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.
Martyrs Calendar ಬಿಪಿನ್ ರಾವತ್ ಸ್ಮರಣಾರ್ಥ ವಿಶೇಷ ಹುತಾತ್ಮ ಕ್ಯಾಲೆಂಡರ್ ಬಿಡುಗಡೆ ಮಾಡಿದ ಗಡ್ಕರಿ!
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನೀಕೃಷ್ಣನ್, ಪುಲ್ವಾಮಾ ದಾಳಿಯಲ್ಲಿ ಮಡಿದ 44 ಸಿಆರ್‌ಪಿಎಫ್ ಯೋಧರು, ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೇನಾನಿಗಳು ಸೇರಿದಂತೆ ಒಟ್ಟು 144 ಯೋಧರ ಸಮಾಧಿಯಿಂದ ಸಂಗ್ರಹಿಸಿದ ಮಣ್ಣನ್ನು ಅವರು ಪ್ರದರ್ಶಿಸಿದರು. ಈ ಮಣ್ಣಿನಿಂದ ದೆಹಲಿಯಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಸೈನಿಕರ ಕುಟುಂಬಸ್ಥರ ಆರ್ಥಿಕ ಸಂಕಷ್ಟ ಸೇರಿದಂತೆ ವಸ್ತುಸ್ಥಿತಿಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಕನ್ನಡಿಗ ಹುತಾತ್ಮ ಯೋಧ ಕಾಶಿರಾಯ್‌ಗೆ ಶೌರ್ಯ ಪ್ರಶಸ್ತಿ
ನವದೆಹಲಿ: 2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜತೆ ಹೋರಾಡಿಪ್ರಾಣತ್ಯಾಗ ಮಾಡಿದ ಕರ್ನಾಟಕದ(Karnataka) ಯೋಧ ಕಾಶಿರಾಯ್(Kashiraya) ಬಮ್ಮನಳ್ಳಿ ಅವರಿಗೆ ಕೇಂದ್ರ ಸರ್ಕಾರ(Central Government) ಮರಣೋತ್ತರವಾಗಿ ಶೌರ್ಯ(Shaurya Chakra Award) ಪ್ರಶಸ್ತಿ ಪ್ರಕಟಿಸಿತ್ತು.
ಹುತಾತ್ಮ ಕಾಶಿರಾಯ್‌ಗೆ ಶೌರ್ಯ ಪುರಸ್ಕಾರ:
ಜಮ್ಮು- ಕಾಶ್ಮೀರದ(Jammu Kashmir) ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ 2021ರ ಜು.1ರಂದು ಸೇನಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆ ಮುಂದಾಳತ್ವವನ್ನು 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ನ 37 ವರ್ಷದ ಹವಾಲ್ದಾರ್ ಕಾಶಿರಾಯ್ ಬಮ್ಮನಳ್ಳಿ ಅವರು ವಹಿಸಿಕೊಂಡಿದ್ದರು.
ಈ ವೇಳೆ ಯೋಧರ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ಮೂಲಕ ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಆಗ ಕಾಶಿರಾಯ್ ಅವರು ಉಗ್ರರ ಮೇಲೆ ದಾಳಿ ನಡೆಸಿ, ಉಗ್ರರು ತಾವು ಅಡಗಿದ್ದ ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದ್ದರು. ಆದರೆ ಕೊನೆಗೆ ಭಯೋತ್ಪಾದಕರು ಹವಾಲ್ದಾರ್ ಕಾಶಿರಾಯ್ ಅವರನ್ನು ಗುರಿಯಾಗಿಸಿಕೊಂಡು ನಡೆಸಿದರು. ತೀವ್ರ ಗಾಯಗೊಂಡಿದ್ದರೂ ಅವರು ಓರ್ವ ಉಗ್ರನನ್ನು ಬಲಿಪಡೆದು, ಹುತಾತ್ಮರಾದರು.
Pulwama Attack ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಸ್ಮರಿಸಿ ಗೌರವ ನಮನ ಸಲ್ಲಿಸಿದ ಮೋದಿ
ತನ್ಮೂಲಕ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತನ್ನ ಪಡೆಯನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಕಾಶಿರಾಯ್ ಅವರ ಹೆಸರನ್ನು ಮರಣೋತ್ತರ ಶೌರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಕಾಶಿರಾಯ್ ಕರ್ನಾಟಕದ ವಿಜಯಪುರ(Vijayapura) ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಗ್ರಾಮದವರಾಗಿದ್ದಾರೆ. ಅವರಿಗೆ ಓರ್ವ ಮಗ, ಮಗಳು ಮತ್ತು ಪತ್ನಿಯಿದ್ದಾರೆ.
128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇಶ- ವಿದೇಶಗಳ 128 ಗಣ್ಯರಿಗೆ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 4 ಜನರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ, 107 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಪುರಸ್ಕೃತರಲ್ಲಿ 34 ಮಹಿಳೆಯರು, 10 ವಿದೇಶಿಯರು/ ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವಿದೇಶಿಯರು/ ಸಾಗರೋತ್ತರ ಭಾರತೀಯರು ಸೇರಿದ್ದಾರೆ. ಜೊತೆಗೆ 13 ಜನರಿಗೆ ಮರಣೋತ್ತರವಾಗಿ ಗೌರವ ಪ್ರಕಟಿಸಲಾಗಿದೆ.
