Asianet Suvarna News Asianet Suvarna News

Pulwama Attack ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಸ್ಮರಿಸಿ ಗೌರವ ನಮನ ಸಲ್ಲಿಸಿದ ಮೋದಿ

  • ಅದೆಷ್ಟೇ ವರ್ಷ ಉರುಳಿದರೂ ಎಂದೂ ಮರೆಯದ ವೀರಪುತ್ರರಿಗೆ ನಮನ
  • 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿ
  • ಬಲಿಷ್ಠ ಭಾರತಕ್ಕೆ ಯೋಧರ ತ್ಯಾಗ ಬಲಿದಾನ ಪ್ರೇರಣೆ
Pulwama Attack martyrs bravery supreme sacrifice motivates every Indian PM Modi pays homage brave hearts ckm
Author
Bengaluru, First Published Feb 14, 2022, 5:26 PM IST

ನವದೆಹಲಿ(ಫೆ. 14): ಪುಲ್ವಾಮಾ ಭಯೋತ್ಪಾದನಾ(pulwama terror attack) ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್(CRPF) ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ(PM narendra Modi) ಗೌರವ ನಮನ ಸಲ್ಲಿಸಿದ್ದಾರೆ. ವೀರ ಯೋಧರು ದೇಶಕ್ಕೆ ನೀಡಿದ ಅತ್ಯುತ್ತಮ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಅವರ ಕಾರ್ಯ ಬಲಿಷ್ಠ ಭಾರತಕ್ಕೆ ಪ್ರೇರಣೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭಾರತದ ಸಿಆರ್‌ಪಿಎಫ್ ಯೋಧರ ಮೇಲೆ ಪಾಕಿಸ್ತಾನ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ   40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಭಾರತದ ಸೇನೆ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದನಾ ದಾಳಿ ಇದಾಗಿದೆ. ಈ ಕರಾಳ ದಿನಕ್ಕೆ ಮೂರು ವರ್ಷ ಸಂದಿದೆ. ಇಂದು ಮೋದಿ ಟ್ವಿಟರ್ ಮೂಲಕ ಪುಲ್ವಾಮಾ ವೀರ ಯೋಧರಿಗೆ ಗೌರವ ನಮನ (Tribute)ಸಲ್ಲಿಸಿದ್ದಾರೆ.

Pulwama Attack: ಪುಲ್ವಾಮಾ ದಾಳಿಯ ಕಡೆಯ ಉಗ್ರನೂ ಯೋಧರಿಗೆ ಬಲಿ?

2019ರ ಈ ದಿನ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಭಾರತದ ದೇಶದ ಭದ್ರತೆಗೆ ನೀಡಿದ ಅತ್ಯುನ್ನತ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಪುಲ್ವಾಮಾ ವೀರ ಯೋಧರ ಶೌರ್ಯ, ತ್ಯಾಗ, ಬಲಿದಾನ ಪ್ರತಿಯೊಬ್ಬರ ಭಾರತೀಯನನ್ನು ಬಲಿಷ್ಠ ಹಾಗೂ ಸಮೃದ್ಧ ಭಾರತಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 

ಪಾಕಿಸ್ತಾನ(Pakistan) ಪ್ರಾಯೋಜಿತ ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.ಜಮ್ಮು ಮತ್ತು ಶ್ರೀನಗರ ರಾಷ್ಟೀಯ ಹೆದ್ದಾರಿ ಮೂಲಕ  ಭಾರತೀಯ ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದರು. ಪುಲ್ವಾಮಾ ಜಿಲ್ಲೆಯ ಲೆತಪೋರಾ ಬಳಿ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ  ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ, ಸ್ಥಳೀಯ ಆದಿಲ್ ಅಹಮ್ಮದ್ ದಾರ್ ಯುವಕನ ಬಳಸಿಕೊಂಡು ಈ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿತು.

ಬಾಲಾಕೋಟ್‌ ಏರ್‌ಸ್ಟ್ರೈಕ್ ನಿಜ, ಒಪ್ಪಿಕೊಂಡ ಪಾಕಿಸ್ತಾನ: ರಾಹುಲ್‌, ಕೇಜ್ರಿಗೆ ಮುಖಭಂಗ!

ಪುಲ್ವಾಮಾ ದಾಳಿಯ ಹಿಂದಿದ್ದ 6  ಉಗ್ರರನ್ನು ಭಾರತೀಯ ಸೇನೆ ಹೊಡೆದುರಳಿದೆ . ಇನ್ನು 7 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ದಾಳಿಯಲ್ಲಿ ಮಡಿದ 40 ಸಿಆರ್‌ಪಿಎಫ್ ಯೋಧರ ಪೈಕಿ ಓರ್ವ ಕರ್ನಾಟಕದ ಯೋಧನು ಹುತಾತ್ಮರಾಗಿದ್ದರು. 

ಈ ದಾಳಿಗೆ ಪ್ರತೀಕಾರ ತೀರಿಸಲು ಭಾರತದಲ್ಲಿ ಒಕ್ಕೊರಲ ಆಗ್ರಹ ಕೇಳಿಬಂದಿತ್ತು. ಪಾಕಿಸ್ತಾನದ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಇತ್ತ ಭಾರತೀಯ ವಾಯುಸೇನೆ ಪಾಕಿಸ್ತಾನ ಬಾಲಾಕೋಟ್‌ನಲ್ಲಿ ಅಡಗುತಾಣವಾಗಿ ಮಾಡಿಕೊಂಡಿದ್ದ ಉಗ್ರರ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಇನ್ನು ಫೆಬ್ರವರಿ 27 ರ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿತ್ತು. ಪಾಕಿಸ್ತಾನ ಯುದ್ಧ ವಿಮಾನ ಹಿಮ್ಮೆಟ್ಟಿಸಿದ ಭಾರತ ಮಿಗ್ 21 ಯುದ್ಧವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಈ ವೇಳೆ ಕ್ಯಾಪ್ಯನ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಕ್ಷಣ ಅಂತಾರಾಷ್ಟ್ರೀಯ ಒತ್ತಡ ಹೇರಿ ಮಾರ್ಚ್ 1 ರಂದು ಅಭಿನಂದನ್ ವರ್ಧಮಾನ್ ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

ಈ ದಾಳಿಯಿಂದ ಪಾಕಿಸ್ತಾನ ಜೊತೆಗೆ ಬಹುತೇಕ ಎಲ್ಲಾ ಸಂಬಂಧಗಳಿಗೆ ಭಾರತ ಬ್ರೇಕ್ ಹಾಕಿತು. ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಮುಜುಗರಕ್ಕೆ ಒಳಗಾಗಿತ್ತು. 
 

Follow Us:
Download App:
  • android
  • ios