Martyrs Calendar ಬಿಪಿನ್ ರಾವತ್ ಸ್ಮರಣಾರ್ಥ ವಿಶೇಷ ಹುತಾತ್ಮ ಕ್ಯಾಲೆಂಡರ್ ಬಿಡುಗಡೆ ಮಾಡಿದ ಗಡ್ಕರಿ!

  • ಹುತಾತ್ಮರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಗಡ್ಕರಿ
  • ಬಿಪಿನ್ ರಾವತ್ ಸ್ಮರಣಾರ್ಥ ಕ್ಯಾಲೆಂಡರ್ ಬಿಡುಗಡೆ
  • ಉತ್ತರಖಂಡದ ಹುತಾತ್ಮ ಸೈನಿಕರ ಭಾವಚಿತ್ರದ ಕ್ಯಾಲೆಂಡರ್
     
Nitin Gadkari releases martyrs Calendar dedicated to memory of Late General Bipin Rawat ckm

ನವದೆಹಲಿ(ಫೆ.11): ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಚೀಫ್ ಡೆಫೆನ್ಸ್ ಸ್ಟಾಪ್ ಜನರಲ್ ಬಿಪಿನ್ ರಾವತ್ (Bipin Rawat)ಸ್ಮರಣಾರ್ಥ ವಿಶೇಷ ಹುತಾತ್ಮರ ಕ್ಯಾಲೆಂಡರ್(martyrs Calendar) ಬಿಡುಗಡೆ ಮಾಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರ್‌ನಲ್ಲಿ ಬಿಪಿನ್ ರಾವತ್ ಜೊತೆಗೆ ಉತ್ತರಖಂಡದ(Uttarakhand) ಹುತಾತ್ಮ ಸೈನಿಕರ ಭಾವಚಿತ್ರಗಳನ್ನು ಒಳಗೊಂಡಿದೆ.

ಜನರಲ್ ಬಿಪಿನ್ ರಾವತ್ ಭಾವಚಿತ್ರದ ಜೊತೆಗೆ ಭಾರತ ಸ್ವಾತಂತ್ರ್ಯ ಬಳಿಕ ಹುತಾತ್ಮರಾದ ಉತ್ತರಖಂಡದದ ಸೈನಿಕರ ಭಾವಚಿತ್ರಗಳನ್ನು ಒಳಗೊಂಡಿದೆ. ಈ ವಿಶೇಷ ಕ್ಯಾಲೆಂಡರನ್ನು ಉತ್ತರಖಂಡದ ಡೆಹ್ರಡೂನ್‌ನಲ್ಲಿರುವ ವಾರ್ ಮೆಮೋರಿಯಲ್ ಶೌರ್ಯ ಸ್ಥಳದಲ್ಲಿ(Uttarakhand War Memorial Shaurya Sthal,) ವಿನ್ಯಾಸಗೊಳಿಸಲಾಗಿದೆ. 

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ಈ ವಿಶೇಷ ಕ್ಯಾಲೆಂಡರನ್ನು ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿ, ಬಳಿಕ ಉತ್ತರಖಂಡ ಯುದ್ಧ ಸ್ಮಾರಕದ ಅಧ್ಯಕ್ಷ ತರುಣ್ ವಿಜಯ್‌ಗೆ ಹಸ್ತಾಂತರಿಸಿದರು. ಈ ಹುತಾತ್ಮ ಕ್ಯಾಲೆಂಡರನ್ನು ಉತ್ತರಖಂಡದ ಸೈನಿಕರ ಮನೆಗೆ ತಲುಪಿಸಲಾಗುತ್ತದೆ. ಇಷ್ಟೇ ಅಲ್ಲ ಸೈನಿಕ ಕುಟುಂಬದ ಜೊತೆ ಉತ್ತರಖಂಡಗ ಹಲವು ಗ್ರಾಮಗಳಿಗೆ ಈ ಕ್ಯಾಲೆಂಡರ್ ವಿತರಿಸಲಾಗುತ್ತಿದೆ.

 

ಬಿಪಿನ್ ರಾವತ್ ಹಾಗೂ ಉತ್ತರಖಂಡ ನಂಟು
ದೇಶದ ಚೀಫ್ ಡೆಫೆನ್ಸ್ ಸ್ಟಾಪ್ ಹುದ್ದೆ ಅಲಂಕರಿಸಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ ದಿವಂಗತ ಜನರಲ್ ಬಿಪಿನ್ ರಾವತ್ ಹುಟ್ಟೂರು ಉತ್ತರಖಂಡ. ಹೀಗಾಗಿ ಬಿಪಿನ್ ರಾವತ್ ಸ್ಮರಣಾರ್ಥ ಹುತಾತ್ಮರ ಕ್ಯಾಲೆಂಡರ್‌ನಲ್ಲಿ ಉತ್ತರಖಂಡ ಹುತಾತ್ಮ ಸೈನಿಕರ ಫೋಟೋಗಳನ್ನು ಬಳಸಲಾಗಿದೆ.

IAF Helicopter Crash : ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನಕ್ಕೆ ಪರಿಷತ್ ನಲ್ಲಿ ಸಂತಾಪ

ಉತ್ತರಖಂಡದ ಗರ್ಹವಾಲ್ ಜಿಲ್ಲೆಯ ಪೌರಿ ಪಟ್ಟಣದಲ್ಲಿ ಹುಟ್ಟಿದ ಬಿಪಿನ್ ರಾವತ್ ಭಾರತದ ಮೊದಲ ಚೀಫ್ ಡೆಫೆನ್ಸ್ ಸ್ಟಾಫ್ ಆಗಿದ್ದರು. ಜನವರಿ 2020ರಂದು CDS ಜವಾಬ್ದಾರಿ ವಹಿಸಿದ ರಾವತ್, ಡಿಸೆಂಬರ್ 8 ರಂದು ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾಗಿದ್ದಾರೆ. ಬಿಪಿನ್ ರಾವತ್ ಜೊತೆಗೆ ರಾವತ್ ಪತ್ನಿ, ಗ್ರೂಪ್ ಕ್ಯಾಪ್ಟನ್ ಸೇರಿದಂತೆ 14 ಮಂದಿ ಈ ಅಪಘಾತದಲ್ಲಿ ಹುತಾತ್ಮರಾಗಿದ್ದರು. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರ್ ಬಳಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. 

ಉತ್ತರಖಂಡದ ವೀರ ಪುತ್ರ ಎಂದೇ ಹೆಸರುವಾಸಿಯಾಗಿದ್ದ ಬಿಪಿನ್ ರಾವತ್ ತಂದೆ, ಅಜ್ಜ ಸೇರಿದಂತೆ ಕುಟುಂಬದ ತಲೆಮಾರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. 1978ರಲ್ಲಿ11  ಗೂರ್ಖಾ ರೈಫಲ್ಸ್ ಬೆಟಾಲಿಯನ್ ಮೂಲಕ ಬಿಪಿನ್ ರಾವತ್ ಮಿಲಿಟರ್ ಪಯಣ ಆರಂಭಗೊಂಡಿತ್ತು. ವಿಶೇಷ ಅಂದರೆ ರಾವತ್ ತಂದೆ ಕೂಡ ಇದೇ 11 ಗೂರ್ಖಾ ರೈಫಲ್ಸ್‌ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದ್ದರು. ಇದೇ ಬೆಟಾಲಿಯನ್ ಮೂಲಕ ರಾವತ್ ತಮ್ಮ ಮಿಲಿಟರಿ ಕರಿಯರ್ ಆರಂಭಿಸಿದ್ದರು.

CDS Helicopter Crash: ಕಾಡಿನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದ ಫೋನ್ ವಿಧಿವಿಜ್ಞಾನ ಪರೀಕ್ಷೆಗೆ!

ಸರ್ಜಿಕಲ್ ಸ್ಟೈರ್ಕ ಸೇರಿದಂತೆ ಹಲವು ಪ್ರತ್ಯುತ್ತರದ ನೇತೃತ್ವ ವಹಿಸಿದ್ದ ಜನರಲ್ ಬಿಪಿನ್ ರಾವತ್ ಭಾರತೀಯ ಸೇನೆಗೆ ಹೊಸ ಚೈತನ್ಯ ನೀಡಿದ್ದರು. ಭಾರತೀಯ ಸೇನೆಯ ಆಧುನಿಕರಣ, ಹೊಸ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಭಾರತೀಯ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ ಕೀರ್ತಿ ಇದೇ ಬಿಪಿನ್ ರಾವತ್‌ಗೆ ಸಲ್ಲಲಿದೆ.

ಇದೀಗ ಭಾರತದ ಕಂಡ ಧೀರ, ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಪಾಕಿಸ್ತಾನ, ಚೀನಾ ಸೇರಿದಂತೆ ಶತ್ರುಗಳು, ಭಯೋತ್ಪಾದಕರಿಗೆ ನಡುಕ ಹುಟ್ಟಿಸಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶ್ರಮಿಸಿದ ಬಿಪಿನ್ ರಾವತ್ ಸ್ಮರಣಾರ್ಥ ಇದೀಗ ಕೇಂದ್ರ ಸರ್ಕಾರ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.

Latest Videos
Follow Us:
Download App:
  • android
  • ios