Asianet Suvarna News Asianet Suvarna News

5 States Elections: ಪಂಚರಾಜ್ಯ ಎಲೆಕ್ಷನ್‌ಗೆ ಮೈಲ್ಯಾಕ್‌ ಸಂಸ್ಥೆಯಿಂದ 5 ಲಕ್ಷ ಬಾಟಲಿ ಶಾಯಿ

ಭಾರತೀಯ ಚುನಾವಣಾ ಆಯೋಗದ ಬೇಡಿಕೆಯಂತೆ ಪಂಚರಾಜ್ಯಗಳ ಚುನಾವಣೆಗೆ ಮೈಸೂರಿನ ಪ್ರತಿಷ್ಠಿತ ಮೈಲ್ಯಾಕ್‌ ಸಂಸ್ಥೆಯಿಂದ 5 ಲಕ್ಷ ಅಳಿಸಲಾಗದ ಶಾಯಿ ಬಾಟಲ್‌ ಕಳುಹಿಸಲಾಗುತ್ತಿದೆ. ಈ ಶಾಯಿಯು ಫೆ.10ರಿಂದ ಮಾ.10ರವರೆಗೆ ಉತ್ತರಪ್ರದೇಶ, ಗೋವಾ, ಪಂಜಾಬ್‌, ಉತ್ತರಾಖಂಡ್‌ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಳಸಲ್ಪಡಲಿದೆ.

MPVL Dispatches 5 Lakh Bottles of Indelible Ink to Poll Bound States gvd
Author
Bangalore, First Published Jan 16, 2022, 2:15 AM IST

ಮೈಸೂರು (ಜ. 16): ಭಾರತೀಯ ಚುನಾವಣಾ ಆಯೋಗದ (Indian Election Commission) ಬೇಡಿಕೆಯಂತೆ ಪಂಚರಾಜ್ಯಗಳ ಚುನಾವಣೆಗೆ (Election) ಮೈಸೂರಿನ (Mysuru) ಪ್ರತಿಷ್ಠಿತ ಮೈಲ್ಯಾಕ್‌ ಸಂಸ್ಥೆಯಿಂದ 5 ಲಕ್ಷ ಅಳಿಸಲಾಗದ ಶಾಯಿ ಬಾಟಲ್‌ ಕಳುಹಿಸಲಾಗುತ್ತಿದೆ. ಈ ಶಾಯಿಯು ಫೆ.10ರಿಂದ ಮಾ.10ರವರೆಗೆ ಉತ್ತರಪ್ರದೇಶ, ಗೋವಾ, ಪಂಜಾಬ್‌, ಉತ್ತರಾಖಂಡ್‌ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಳಸಲ್ಪಡಲಿದೆ.

ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅಲ್ಲಿಗೆ ಅಗತ್ಯವಿರುವ ಅಳಿಸಲಾಗದ ಶಾಯಿಯನ್ನು ಚುನಾವಣಾ ಆಯೋಗದ ಬೇಡಿಕೆಯಂತೆ ಕಳುಹಿಸಲಾಗುತ್ತದೆ. 2021ರ ನವೆಂಬರ್‌ನಲ್ಲಿ ಉತ್ತರಪ್ರದೇಶದಿಂದ 10 ಸಿಸಿಯ 4 ಲಕ್ಷ ಬಾಟಲ್‌, ಪಂಜಾಬ್‌ಗೆ 62 ಸಾವಿರ ಬಾಟಲ್‌, ಗೋವಾಗೆ 5 ಸಾವಿರ ಬಾಟಲ್‌, ಮಣಿಪುರಕ್ಕೆ 7,400 ಬಾಟಲ್‌ ಹಾಗೂ ಉತ್ತರಖಂಡ್‌ಗೆ 30 ಸಾವಿರ ಬಾಟಲ್‌ ಸೇರಿದಂತೆ ಒಟ್ಟು 5,04,000 ಇಂಕ್‌ ಬಾಟಲ್‌ಗೆ ಬೇಡಿಕೆ ಪಟ್ಟಿಬಂದಿದೆ. ಅದರಂತೆ ಈಗಾಗಲೇ ಗೋವಾ, ಪಂಜಾಬ್‌, ಉತ್ತರಖಾಂಡ್‌ ಮತ್ತು ಮಣಿಪುರಕ್ಕೆ ಅಳಿಸಲಾಗದ ಶಾಯಿ ಕಳುಹಿಸಲಾಗಿದೆ. ಸೋಮವಾರದೊಳಗೆ ಉತ್ತರ ಪ್ರದೇಶಕ್ಕೆ ಶಾಯಿ ಕಳುಹಿಸಲಾಗುತ್ತದೆ. ಇದರಿಂದ ಒಟ್ಟು 8.96 ಕೋಟಿ ವಹಿವಾಟನ್ನು ಮೈಲ್ಯಾಕ್‌ ಮಾಡಿದಂತಾಗಿದೆ.

ಚುನಾವಣೆ ಮುಂದೂಡಿ, ಪಂಜಾಬ್ ಮುಖ್ಯಮಂತ್ರಿಯಿಂದ ಚುನಾವಣಾ ಆಯೋಗಕ್ಕೆ ಪತ್ರ!

ಮಾರ್ಕರ್‌ ಪೆನ್‌ಗೆ ಬೇಡಿಕೆ: ಭಾರತೀಯ ಚುನಾವಣಾ ಆಯೋಗವು ಮುಂದಿನ ದಿನಗಳಲ್ಲಿ ಇಂಕ್‌ ಬಾಟಲ್‌ ಬದಲಿಗೆ ಮಾರ್ಕರ್‌ ಪೆನ್‌ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದೆ. ಅವರ ಬೇಡಿಕೆಯಂತೆ ನಮ್ಮ ಸಂಸ್ಥೆಯು ಸುದೀರ್ಘ ಪ್ರಯೋಗ ನಡೆಸಿ ಗುಣಮಟ್ಟದ ಮಾರ್ಕರ್‌ ಪೆನ್‌ ತಯಾರಿಕೆಗೆ ಪ್ರಾಯೋಗಿಕ ಪರೀಕ್ಷೆ ಅಂತಿಮ ಹಂತದಲ್ಲಿದ್ದು, ಇದು ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಮೈಲ್ಯಾಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಮಾವೇಶ, ಪಾದಯಾತ್ರೆ ಮೇಲಿನ ನಿಷೇಧ ಮುಂದುವರಿಸಿದ ಚುನಾವಣಾ ಆಯೋಗ!: ದೇಶದಲ್ಲಿ ಕೊವಿಡ್-19 ಪ್ರಕರಣಗಳಲ್ಲಿ (Covid-19 Cases) ಸಂಖ್ಯೆಗಳಲ್ಲಿ ವ್ಯಾಪಕವಾಗಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಚುನಾವಣಾ ಆಯೋಗ (Election Commission ) ಚುನಾವಣೆಗೆ ಸಿದ್ಧವಾಗಿರುವ ಪಂಚ ರಾಜ್ಯಗಳಲ್ಲಿ ಸಮಾವೇಶ (Rally), ಪಾದಯಾತ್ರೆ ಹಾಗೂ ರೋಡ್ ಶೋ (RoadShow) ಗಳ ಮೇಲಿನ ನಿಷೇಧವನ್ನು ಜನವರಿ 22ರವರೆಗೆ ಮುಂದುವರಿಕೆ ಮಾಡಿದ್ದಾಗಿ ಘೋಷಣೆ ಮಾಡಿದೆ. 

ಇದಕ್ಕೂ ಮುನ್ನ ಕೋವಿಡ್ -19 ಕಾರಣದಿಂದಾಗಿ ಈ ರಾಜ್ಯಗಳಲ್ಲಿ ಜನವರಿ 15ರವರೆಗೆ ಇವುಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು. ಈ ನಡುವೆ ಈ ರಾಜ್ಯಗಳಲ್ಲಿ ಕೊರೋನಾ ಪ್ರಕರಣದಲ್ಲಿ ಸಾಕಷ್ಟು ಏರಿಕೆ ಆಗಿರುವುದರಿಂದ ಈ ತೀರ್ಮಾನ ಮಾಡಲಾಗಿದೆ. ಈ ನಡುವೆ ಒಳಾಂಗಣ ಸಭೆಗಳನ್ನು (Indoor Meeting) ನಡೆಸಲು ಅನುಮತಿ ನೀಡಿದೆ. ಗರಿಷ್ಠ 300 ಮಂದಿಯನ್ನು ಸೇರಿಸಿ ರಾಜಕೀಯ ಪಕ್ಷಗಳು ಸಭೆಗಳನ್ನು ನಡೆಸಬಹುದಾಗಿದೆ ಅಥವಾ ಒಳಾಂಗಣ ಸಭೆಯ ನಡೆಯುವ ಹಾಲ್ ನಲ್ಲಿ ಶೇ. 50ರಷ್ಟು ಜನರನ್ನು ಸೇರಿಸಿ ಸಭೆಗಳನ್ನು ನಡೆಸಲು ಅನುಮತಿ ನೀಡಿದೆ. ಕೋವಿಡ್-19 ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪ್ರತಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. 

ನ್ಯಾಯಾಲಯದ ಕೆಲಸವಲ್ಲ, ಚುನಾವಣೆ ಮುಂದೂಡಲು ಹೈಕೋರ್ಟ್ ನಕಾರ!

ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ, ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯದರ್ಶಿ, ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಸಾಧ್ಯವಾದಷ್ಟು ಸುರಕ್ಷಿತವಾಗಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ ಚುನಾವಣಾ ಆಯೋಗ, 16 ಅಂಶಗಳ ಪಟ್ಟಿಯ ಭಾಗವಾಗಿ ಸಮಾವೇಶ ಹಾಗೂ ರೋಡ್ ಶೋಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕಾರ ಮಾಡಲಾಗಿದೆ.

Follow Us:
Download App:
  • android
  • ios