ಶ್ರೀಹರ್ಷ ಅವರ ಶ್ರೀರಾಮ ಹಾಡಿಗೆ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಗಲಾಟೆ, ಪ್ರತಾಪ್ ಸಿಂಹ ಆಕ್ರೋಶ!
ಖ್ಯಾತ ಗಾಯಕ ಶ್ರೀಹರ್ಷ ಹಾಡಿಗೆ ಮನಸೋಲದವರು ಯಾರಿದ್ದಾರೆ? ಆದರೆ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಶ್ರೀಹರ್ಷ ಹಾಡಿದ ಜೈಶ್ರೀರಾಮ ಹಾಡಿನಿಂದ ಕಾಲೇಜು ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದೆ. ಬಳಿಕ ವಿದ್ಯಾರ್ಥಿಯೊಬ್ಬನಿಗೆ ಥಳಿಸಲಾಗಿದೆ. ಈ ಘಟನೆ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು(ಮೇ.09) ಸಾಂಸ್ಕೃತಿಕ ನಗರಿ ಮೈಸೂರಿನ ಕಾಲೇಜಿನಲ್ಲಿ ಧರ್ಮ ದಂಗಲ್ ಕಿಡಿ ಹೊತ್ತಿಕೊಂಡಿದೆ. ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದೆ. ಮೈಸೂರಿನ ಖ್ಯಾತ ಗಾಯಕ, ದೇಶ ವಿದೇಶದಲ್ಲಿ ಕಾರ್ಯಕ್ರಮ ನಡೆಸಿಕೊಡುವ ಶ್ರೀಹರ್ಷ ಹಾಡಿದ ಈ ಹಾಡಿನಿಂದ ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದೆ. ಕಾರ್ಯಕ್ರಮದ ನಡುವೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಿಂದೂ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಕುರಿತು ಕೆಲ ವಿಡಿಯೋಗಳನ್ನು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಇಂತಹ ಘಟನೆಗಳು ನಡೆದಾಗ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು "ಜಯತು ಜಯತು ಜೈ ಶ್ರೀರಾಮ್" ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ: ಸಚಿವ ವೆಂಕಟೇಶ್ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು
ಕಾರ್ಯಕ್ರಮದಲಲಿ ಖ್ಯಾತ ಗಾಯ ಶ್ರೀಹರ್ಷ ಜಯತು ಜಯತು ಜೈಶ್ರೀರಾಮ ಹಾಡು ಹಾಡಿದ್ದಾರೆ. ಈ ಹಾಡಿನಿಂದ ವಿದ್ಯಾರ್ಥಿಗಳ ಗುಂಪು ಕೆರಳಿದೆ. ಕಾರ್ಯಕ್ರಮದ ನಡುವೆ ಗಲಾಟೆ ಶುರುವಾಗಿದೆ. ಜೈಶ್ರೀರಾಮ ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್ ಕಿಡಿ ಹೊತ್ತಿಕೊಂಡಿದೆ. ಘಟನೆ ಕುರಿತ ಮೂರು ವಿಡಿಯೋಗಳನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.
ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು "ಜಯತು ಜಯತು ಜೈ ಶ್ರೀರಾಮ್" ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ? pic.twitter.com/FJTEPwKWWe
— Pratap Simha (Modi Ka Parivar) (@mepratap) May 9, 2024
ಶ್ರೀಹರ್ಷ ಹಾಡಿನ ಸಣ್ಣ ತುಣುಕನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲಾಗಿದೆ. ಬಳಿಕ ಇನ್ನೆರಡು ವಿಡಿಯೋ ಕಾರ್ಯಕ್ರಮದಲ್ಲಿ ನಡೆದ ಗಟಾಲೆ ವಿಡಿಯೋವನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ. ಪ್ರತಾಪ್ ಸಿಂಹ ಹಂಚಿಕೊಂಡಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಬೇಡಿ ಎಂಬ ಬರಹದಡಿ ಶ್ರೀಹರ್ಷ ಹಾಡನ್ನು ಪೋಸ್ಟ್ ಮಾಡಲಾಗಿದೆ. ಇನ್ನು ಹಾಡಿನ ಬಳಿಕ ಕಾಲೇಜಿನಲ್ಲಿ ಶುರುವಾದ ಗಲಾಟೆ, ಹಿಂದೂ ವಿದ್ಯಾರ್ಥಿಗೆ ಥಳಿಸಿದ ವಿಡಿಯೋವನ್ನು ಮುಸ್ಲಮರ ಶಕ್ತಿ ಎಂಬ ಬರಹಡದಿ ಪೋಸ್ಟ್ ಮಾಡಲಾಗಿದೆ.
ರಾತ್ರಿವೇಳೆ ಹಿಂದೂ ಮನೆ ಮುಂದೆ ಅನ್ಯಕೋಮಿನ ಗುಂಪು ಗಲಾಟೆ; ವಿಡಿಯೋ ಸಮೇತ ಟ್ವೀಟ್ ಮಾಡಿದ ಪ್ರತಾಪ್ ಸಿಂಹ
ಘಟನೆ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಮೈಸೂರಿನ ಗಾಯಕನ ಕಾರ್ಯಕ್ರಮದಲ್ಲಿ ಈ ರೀತಿ ಗಲಾಟೆ, ಅದು ಕೂಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಆಘಾತ ಎಂದು ಹಲವರು ಪ್ರತಿಕ್ರೆಯ ನೀಡಿದ್ದಾರೆ. ಇದೇ ವೇಳೆ ಕಲವರು ಕಾಲೇಜಿನಲ್ಲಿ ಜೈ ಶ್ರೀರಾಮ ಹಾಡು ಹಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.