ಹಿಂದೂ ಮನೆಯೊಂದರ ಮುಂದೆ ಅನ್ಯಕೋಮಿನ ಗುಂಪು ಗಲಾಟೆ ನಡೆಸಿ ಬೆದರಿಕೆಯೊಡ್ಡಿದ್ದಾರೆನ್ನಲಾದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ಬೆಂಗಳೂರು (ಮಾ.25): ಹಿಂದೂ ಮನೆಯೊಂದರ ಮುಂದೆ ಅನ್ಯಕೋಮಿನ ಗುಂಪು ಗಲಾಟೆ ನಡೆಸಿ ಬೆದರಿಕೆಯೊಡ್ಡಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ರಾತ್ರಿ ವೇಳೆ ಹಿಂದೂಗಳ ಮನೆಯೊಂದರ ಮುಂದೆ ಗುಂಪು ಗುಂಪಾಗಿ ಅನ್ಯಕೋಮಿನ ಯುವಕರು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾತ್ರಿ ವೇಳೆ ಬಂದು ಹೀಗೆ ಗಲಾಟೆ ಮಾಡುವ ಮೂಲಕ ಭಯ ಹುಟ್ಟಿಸುತ್ತಿದ್ದಾರೆ 'ಹಿಂದುಗಳೇ ಎಚ್ಚೆತ್ತುಕೊಳ್ಳಿ' ಎಂದು ಬರೆದಿದ್ದಾರೆ. 

ಹನುಮಾನ್ ಚಾಲೀಸಾ ವಿಚಾರಕ್ಕೆ ಹಲ್ಲೆ ನಡೆದಿದ್ದರೆ ಕಠಿಣ ಕ್ರಮ ಜರುಗಿಸಿ: ಕೆಪಿಸಿಸಿ ವಕ್ತಾರ ಶಂಕರ ಗುಹ

ಗಲಾಟೆ ನಡೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಈ ಘಟನೆ ಬಗ್ಗೆ ಗಮನವಹಿಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸದ್ಯ ವಿಡಿಯೋ ಪರಿಶೀಲನೆ ನಡೆಸುತ್ತಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು.

Scroll to load tweet…

ಘಟನೆ ಬಗ್ಗೆ ಡಿಸಿಪಿ ಹೇಳಿದ್ದೇನು?

ಹಿಂದೂ ಮನೆ ಮುಂದೆ ಅನ್ಯಕೋಮಿ ಗುಂಪು ಗಲಾಟೆ ನಡೆಸಿರುವ ವಿಡಿಯೋ ಹರಿದಾಡುತ್ತಿರುವ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ದಕ್ಷಿಣ ವಲಯದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದು, ನಿನ್ನೆ ಸಂಜೆ ನಮಾಜ್ ಮುಗಿದ ಬಳಿಕ ಅಕ್ಕ ಪಕ್ಕದ ಮನೆಯವರ ಮಧ್ಯೆ ಗಲಾಟೆಯಾಗಿದೆ ಎಂಬ ಮಾಹಿತಿ ಇತ್ತು. ಕುಮಾರ್ ಮತ್ತು ಸೈಯದ್ ತಾಹ್ ಎಂಬುವವರ ಮಧ್ಯೆ ಆಟೋ ಪಾರ್ಕಿಂಗ್ ವಿಚಾರಕ್ಕೆ ಕುಮಾರಸ್ವಾಮಿ ಲೇಔಟ್‌ನಲ್ಲಿನ ಪ್ರಗತಿಪುರದಲ್ಲಿ ನಡೆದಿರುವ ಗಲಾಟೆಯಾಗಿದೆ.

ನಗರ್ತಪೇಟೆ ಹನುಮಾನ್ ಚಾಲೀಸಾ ರ್ಯಾಲಿ, ತೇಜಸ್ವಿ ಸೂರ್ಯ ಮೇಲೆ ಕಾಂಗ್ರೆಸ್ ದೂರು; ವಶಕ್ಕೆ ಪಡೆದ ಪೊಲೀಸ್!

ಮತ್ತೊಂದು ಕಡೆ ಎರಡು ಕೋಮಿನ ನಡುವೆ ಗಲಾಟೆ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಗಲಾಟೆ ವಿಚಾರವಾಗಿ ಮಾಹಿತಿ ಕಲೆಹಾಕಿ ದೂರು ದಾಖಲಿಸಿಕೊಳ್ತೇವೆ. ಸದ್ಯಕ್ಕೆ ಪೊಲೀಸರ ಪರಿಶೀಲನೆ ನಡೆಸಿದ್ದು ಯಾವುದೇ ಕೋಮ ಗಲಾಟೆ ಆದ ಬಗ್ಗೆ ಮಾಹಿತಿ ಇಲ್ಲ. ಘಟನಾ ಸ್ಥಳದಲ್ಲಿದ್ದವರನ್ನ ಸಂಪರ್ಕಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳೂತ್ತೇವೆ ಎಂದಿರುವ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.