ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹರಪನಹಳ್ಳಿ (ಜೂ.22): ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ರಾಜಕೀಯ ಮನೆತನದಿಂದ ಬಂದಿದ್ದು, ಬಡವರ, ಶ್ರಮಿಕರ ಹಾಗೂ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ರಾಹುಲ್‌ ಗಾಂಧಿ ಜನ್ಮದಿನ ಉದ್ಘಾಟಿಸಿ ಮಾತನಾಡಿದರು.

ರಾಹುಲ್‌ ಗಾಂಧಿ ಏಳು, ಬೀಳು ಸಮಸ್ಯೆ ಕಷ್ಟ ಸಹಿಸಿಕೊಂಡು ಜನರ ಪರವಾಗಿ ಲೋಕಸಭೆಯಲ್ಲಿ ಕೆಲಸ ಮಾಡುತ್ತಿದ್ದು, ವಿಪಕ್ಷ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ದೇಶ ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿದೆ, ಸಂವಿಧಾನ ಇಕ್ಕಟ್ಟಿನಲ್ಲಿದೆ, ದೇಶ ಹಾಗೂ ಸಂವಿಧಾನ ಉಳಿಸುವ ಸಲುವಾಗಿ ರಾಹುಲ್‌ ಗಾಂಧಿ ಸಾವಿರಾರು ಕಿಮೀ ಪಾದಯಾತ್ರೆ ಮಾಡಿದ್ದರು ಎಂದು ಹೇಳಿದರು.

ದೇಶದ ಭವಿಷ್ಯದ ಮುಂಚೂಣಿ ನಾಯಕ ಹಾಗೂ ಜನರ ಧ್ವನಿಯಾಗಿ ಲೋಕಸಭೆಯಲ್ಲಿ ಕೆಲಸ ಮಾಡುತ್ತಿರುವ ರಾಹುಲ್‌ ಗಾಂಧಿ ಕೈ ನಾವು ನೀವು ಬಲಪಡಿಸಬೇಕಿದೆ ಎಂದು ನುಡಿದರು.

ಕಾಂಗ್ರೆಸ್‌ ಮುಖಂಡ ಬಸವರಾಜ ಸಂಗಪ್ಪನವರ್‌, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಬೇರಗೌಡ, ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಬಿ, ಪುರಸಭಾ ಹಿರಿಯ ಸದಸ್ಯ ಅಬ್ದುಲ್‌ ರಹಿಮಾನ್, ವಕೀಲರ ಸಂಘದ ಅಧ್ಯಕ್ಷ ಎಚ್‌.ವೆಂಕಟೇಶ, ಮತ್ತಿಹಳ್ಳಿ ಪಿ. ರಾಮಣ್ಣ ಮಾತನಾಡಿದರು.

ಈ ಸಂದರ್ಭ ಪೌರಕಾರ್ಮಿಕರು ಹಾಗೂ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರಾದ ಆಲದಹಳ್ಳಿ ಷಣ್ಮೂಖಪ್ಪ, ಪುರಸಭಾ ಉಪಾಧ್ಯಕ್ಷ ಎಚ್. ಕೊಟ್ರೇಶ, ಸದಸ್ಯರಾದ ಲಾಟಿದಾದಾಪೀರ್‌, ಜಾಕೀರ ಹುಸೇನ್, ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಗುಂಡಗತ್ತಿ ಕೊಟ್ರಪ್ಪ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಉದಯಶಂಕರ, ಕಣವಿಹಳ್ಳಿ ಬಿ. ಮಂಜುನಾಥ, ಇಸ್ಮಾಯಿಲ್‌ ಎಲಿಗಾರ, ಉಮಾಮಹೇಶ್ವರಿ, ಸುಮಾ ಜಗದೀಶ, ಕವಿತಾ ಸುರೇಶ, ಗಾಯತ್ರಮ್ಮ, ಕೂಲ್‌ ಇರ್ಫಾನ್, ಶಮಿ, ಮಂಜನಾಯ್ಕ, ಎನ್. ಶಂಕರ, ಹೇಮಣ್ಣ ಮೋರಗೇರಿ, ಮತ್ತೂರು ಬಸವರಾಜ, ಪ್ರಸಾದ್‌ ಕಾವಡಿ ಉಪಸ್ಥಿತರಿದ್ದರು.