Asianet Suvarna News Asianet Suvarna News

DIA Summit: ಜಿ-20 ಡಿಜಿಟಲ್‌ ಇನ್ನೋವೇಷನ್‌ ಸಭೆಗೆ ಇಂದು ಆರ್‌ಸಿ ಚಾಲನೆ

ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನ ನಡೆಯಲಿರುವ ‘ಜಿ-20 ಡಿಜಿಟಲ್‌ ಇನ್ನೋವೇಷನ್‌ ಅಲಯನ್ಸ್‌ ಸಮ್ಮಿಟ್‌ನ್ನು’ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ಉದ್ಘಾಟಿಸಲಿದ್ದಾರೆ.

MoS Rajeev Chandrasekhar to inaugurate G20-Digital Innovation Alliance Summit today in Bengaluru  rav
Author
First Published Aug 17, 2023, 6:24 AM IST

ಬೆಂಗಳೂರು (ಆ.17) :  ರಾಜಧಾನಿ ಬೆಂಗಳೂರಿನಲ್ಲಿ ಮೂರು ದಿನ ನಡೆಯಲಿರುವ ‘ಜಿ-20 ಡಿಜಿಟಲ್‌ ಇನ್ನೋವೇಷನ್‌ ಅಲಯನ್ಸ್‌ ಸಮ್ಮಿಟ್‌(G20-Digital Innovation Alliance summit)ನ್ನು’ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್‌ ಚಂದ್ರಶೇಖರ್‌(MoS Rajeev Chandrasekhar) ಅವರು ಗುರುವಾರ ಉದ್ಘಾಟಿಸಲಿದ್ದಾರೆ.

ಜಿ-20 ಡಿಜಿಟಲ್‌ ಆರ್ಥಿಕತೆ ಕಾರ್ಯಕಾರಿ ಗುಂಪು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಪರ್ಧೆಗೆ ಡಿಜಿಟಲ್‌ ಆವಿಷ್ಕಾರಗಳ ಕೊಡುಗೆಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ.

ಬಲಿಷ್ಠ ದೇಶ ಕಟ್ಟುವ ಪಣ; ಮೋದಿ ಕನಸು ನನಸಾಗಿಸೋಣ: ಆರ್‌ಸಿ

ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಉದ್ಘಾಟಿಸಲಿದ್ದಾರೆ. ಈ ವೇಳೆ ಜಿ-20 ಸದಸ್ಯ ದೇಶಗಳ ಪ್ರತಿನಿಧಿಗಳು, 29 ದೇಶಗಳಿಂದ 174 ನವ್ಯೋದ್ಯಮಗಳು ಭಾಗವಹಿಸಿವೆ. ಆ.18 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಈ ವೇಳೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ 30 ನವ್ಯೋದ್ಯಮಗಳಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.

ಡಿಜಿಟಲ್‌ ಪಬ್ಲಿಕ್‌ ಇನ್‌ಫ್ರಾಸ್ಟ್ರಕ್ಚರ್‌, ಡಿಜಿಟಲ್‌ ಎಕಾನಮಿ ಸೆಕ್ಯೂರಿಟಿ, ಡಿಜಿಟಲ್‌ ಸ್ಕಿಲ್ಲಿಂಗ್‌ ವಿಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ಸಮಾವೇಶ ನಡೆಯಲಿದೆ. ಆರು ವಿಭಾಗಗಳಾದ ಎಜು-ಟೆಕ್‌, ಹೆಲ್ತ್‌-ಟೆಕ್‌, ಅಗ್ರಿ-ಟೆಕ್‌, ಫಿನ್‌ -ಟೆಕ್‌, ಸೆಕ್ಯೂರ್‌್ಡ ವಿಭಾಗಗಳ ನವ್ಯೋದ್ಯಮಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿದುಬಂದಿದೆ.

ಉಡುಪಿ ವಿಡಿಯೋ ಘಟನೆ: ಸಿದ್ದರಾಮಯ್ಯ ಸರ್ಕಾರದಿಂದ ತುಷ್ಟೀಕರಣ, ರಾಜೀವ್‌ ಚಂದ್ರಶೇಖರ್‌

Follow Us:
Download App:
  • android
  • ios