Asianet Suvarna News Asianet Suvarna News

ಬಲಿಷ್ಠ ದೇಶ ಕಟ್ಟುವ ಪಣ; ಮೋದಿ ಕನಸು ನನಸಾಗಿಸೋಣ: ಆರ್‌ಸಿ

 ‘ಪ್ರಧಾನಿ ನರೇಂದ್ರ ಮೋದಿ ಅವರದ್ದು ದೂರದೃಷ್ಟಿಯುಳ್ಳ ಚಿಂತನೆ. ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಪರಿಕಲ್ಪನೆಯಲ್ಲಿ ಭಾರತವನ್ನು ಸದೃಢ, ಸುರಕ್ಷಿತ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ಪಣ ತೊಟ್ಟಿದ್ದಾರೆ. ನಾವೆಲ್ಲರೂ ಅವರ ಕನಸು ನನಸು ಮಾಡಲು ಕೈಜೋಡಿಸಬೇಕಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಕರೆ ನೀಡಿದ್ದಾರೆ.

Lets make pm narendra modi's dream come true says rajeev chandrashekhar at bengaluru rav
Author
First Published Aug 14, 2023, 7:11 AM IST

ಬೆಂಗಳೂರು (ಆ.14) :  ‘ಪ್ರಧಾನಿ ನರೇಂದ್ರ ಮೋದಿ ಅವರದ್ದು ದೂರದೃಷ್ಟಿಯುಳ್ಳ ಚಿಂತನೆ. ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಪರಿಕಲ್ಪನೆಯಲ್ಲಿ ಭಾರತವನ್ನು ಸದೃಢ, ಸುರಕ್ಷಿತ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ಪಣ ತೊಟ್ಟಿದ್ದಾರೆ. ನಾವೆಲ್ಲರೂ ಅವರ ಕನಸು ನನಸು ಮಾಡಲು ಕೈಜೋಡಿಸಬೇಕಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಖಾತೆ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಕರೆ ನೀಡಿದ್ದಾರೆ.

76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಗರದ ಯಲಹಂಕ ಕೆರೆಯಲ್ಲಿ 76 ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯೋತ್ಸವ: ಯಲಹಂಕದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ರಾಜೀವ್‌ ಚಂದ್ರಶೇಖರ್‌ ಚಾಲನೆ

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮೊದಲು ಪ್ರಧಾನಿಯಾದಾಗ 2014ರಲ್ಲಿ ಭಾರತ ವಿಶ್ವದ 10ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಈಗ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. 2024ರ ವೇಳೆಗೆ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಅಂತಹ ಬದ್ಧತೆ ಹಾಗೂ ದೇಶಪ್ರೇಮದೊಂದಿಗೆ ಇದೀಗ ‘ಮೇರಾ ಮಾಟಿ ಮೇರಾ ದೇಶ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅವರ ಕನಸು ನನಸಾಗಿಸಲು ಎಲ್ಲರೂ ಕೈಜೋಡಿಸೋಣ ಎಂದರು.

ಯಲಹಂಕ ಕೆರೆ ಜತೆ ನನ್ನ ಒಡನಾಟ ಇದೆ. ಹತ್ತು ವರ್ಷದ ಹಿಂದೆ ಇದೇ ಕೆರೆಗೆ ಬಂದು ಗಿಡ ನೆಟ್ಟಿದ್ದೆ. ಆಗಿನ ಗಿಡಗಳೆಲ್ಲಾ ಈಗ ಹೆಮ್ಮರವಾಗಿವೆ. ಯಲಹಂಕ ಕೆರೆ ಹೇಗೆ ಅಭಿವೃದ್ಧಿ ಕಂಡಿದೆ ಎಂಬುದು ಕಣ್ಣ ಮುಂದಿದೆ ಎಂದು ಹೇಳಿದರು.

ಬಿಬಿಎಂಪಿ(BBMP) ಯಲಹಂಕ ವಲಯ ಕಚೇರಿಯಿಂದ 76ನೇ ಸ್ವಾತಂತ್ರ್ಯೋತ್ಸವ(Independence day 2023) ದಿನಾಚರಣೆ ಅಂಗವಾಗಿ 76 ಬಗೆಯ ಸಸಿಗಳನ್ನು ನೆಡಲಾಯಿತು. ಮಹಾಗಣಿ, ನೇರಳೆ, ಹಲಸು, ಹೊಳೆ ದಾಸವಾಳ ಸೇರಿದಂತೆ 76 ಬಗೆಯ ಗಿಡಗಳನ್ನು ನೆಡಲಾಯಿತು.

ಈ ವೇಳೆ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ಯಲಹಂಕ ನಾಗರಿಕರ ಪರ ಕೇಂದ್ರ ಸಚಿವರನ್ನು ಸನ್ಮಾನಿಸಿದರು. ಬಿಬಿಎಂಪಿ ಜಂಟಿ ಆಯುಕ್ತ ಮೊಹಮ್ಮದ್‌ ನಯೀನ್‌ ಹಾಜರಿದ್ದರು.

ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್

ಚಿತ್ರ: 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಗರದ ಯಲಹಂಕ ಕೆರೆಯಲ್ಲಿ 76 ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಚಾಲನೆ ನೀಡಿದರು. ಎಸ್‌.ಆರ್‌.ವಿಶ್ವನಾಥ್‌ ಹಾಜರಿದ್ದರು.

Follow Us:
Download App:
  • android
  • ios