Asianet Suvarna News Asianet Suvarna News

ಉಡುಪಿ ವಿಡಿಯೋ ಘಟನೆ: ಸಿದ್ದರಾಮಯ್ಯ ಸರ್ಕಾರದಿಂದ ತುಷ್ಟೀಕರಣ, ರಾಜೀವ್‌ ಚಂದ್ರಶೇಖರ್‌

ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು, ತಪ್ಪು ನಡೆದಿದೆ ಎಂದು ಹೇಳಿದವರನ್ನು ಬೆದರಿಸುತ್ತಿದ್ದೀರಿ. ಈ ಮೂಲಕ ಕರ್ನಾಟಕವನ್ನು ಕ್ರಿಮಿನಲ್‌ಗಳ ಸ್ವರ್ಗ ಮಾಡುತ್ತಿದ್ದೀರಿ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಬಿಜೆಪಿ ಇದರ ವಿರುದ್ಧ ಹೋರಾಟ ನಡೆಸಲಿದೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

Appeasement by the Siddaramaiah Government Says Union Minister Rajeev Chandrashekhar grg
Author
First Published Jul 27, 2023, 8:00 AM IST

ನವದೆಹಲಿ(ಜು.27): ಉಡುಪಿ ಕಾಲೇಜೊಂದರ ಶೌಚಾಲಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಮಾಡಲಾಗಿದೆ ಎಂಬ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ. ತಪ್ಪು ಮಾಡಿದವರನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರ ಆಡಳಿತದಲ್ಲಿರುವ ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಏನು ನಡೆಯುತ್ತಿದೆಯೋ ಅದು ತುಷ್ಟೀಕರಣ ರಾಜಕೀಯ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಈ ಘಟನೆಯಲ್ಲಿ ಒಂದು ಸಮುದಾಯದ ವಿದ್ಯಾರ್ಥಿನಿಯರು ವಿಡಿಯೋ ರೆಕಾರ್ಡರ್‌ನಂತಹ ವಸ್ತುಗಳನ್ನು ಬಳಸಿ ಹಿಂದೂ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಚಿತ್ರೀಕರಿಸಿದ್ದಾರೆ. ಆದರೆ ಇದು ಪೊಲೀಸರ ಗಮನಕ್ಕೆ ಬಂದಾಗ ವಿಡಿಯೋವನ್ನು ಸಾರ್ವಜನಿಕಗೊಳಿಸಿದ ರಶ್ಮಿ ಸಾವಂತ್‌ ಅವರನ್ನು ಬೆದರಿಸುವ ಕೆಲಸ ನಡೆದಿದೆ ಎಂದಿದ್ದಾರೆ. 

ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಪ್ರಕರಣ, ಸಮಗ್ರ ತನಿಖೆ ಸಿಟಿ ರವಿ ಒತ್ತಾಯ

ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು, ತಪ್ಪು ನಡೆದಿದೆ ಎಂದು ಹೇಳಿದವರನ್ನು ಬೆದರಿಸುತ್ತಿದ್ದೀರಿ. ಈ ಮೂಲಕ ಕರ್ನಾಟಕವನ್ನು ಕ್ರಿಮಿನಲ್‌ಗಳ ಸ್ವರ್ಗ ಮಾಡುತ್ತಿದ್ದೀರಿ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಬಿಜೆಪಿ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಹೇಳಿದರು.

Follow Us:
Download App:
  • android
  • ios