Asianet Suvarna News Asianet Suvarna News

ಕರ್ನಾಟಕದಲ್ಲಿರೋದು ಜನಪರ ಸರ್ಕಾರವಲ್ಲ ಇದು MNC Government: ರಾಜೀವ್ ಚಂದ್ರಶೇಖರ್‌ ವಾಗ್ದಾಳಿ

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಡಿಎಂಕೆ ಪಕ್ಷದ ಒತ್ತಡಕ್ಕೆ ಕರ್ನಾಟಕ ಸರ್ಕಾರ ಮಣಿಸಿದೆ. ಕಾಂಗ್ರೆಸ್‌ ಸರ್ಕಾರದ ಸುಳ್ಳಿನ ರಾಜಕಾರಣ ಹಾಗೂ ಸ್ಪಷ್ಟತೆ ಇಲ್ಲದ ಗ್ಯಾರಂಟಿಗಳಿಂದಾಗಿ ರೈತರು ತಮ್ಮ ಜೀವಕಳೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಟೀಕಿಸಿದ್ದಾರೆ.
 

MoS Rajeev Chandrasekhar slams Karnataka Congress says this is MNC Government san
Author
First Published Aug 21, 2023, 6:05 PM IST

ನವದೆಹಲಿ (ಆ.21): ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ  ರಾಜೀವ್ ಚಂದ್ರಶೇಖರ್ ಅವರು ಇಂದು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಕರ್ನಾಟಕದಲ್ಲಿ ಇರೋದು ಜನಪರ ಸರ್ಕಾರವಲ್ಲ. ಇದು ಎಂಎನ್‌ಸಿ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ಎಂ ಎಂದರೆ ಮಿಸ್‌ ಗವರ್ನೆನ್ಸ್‌ (ದುರಾಡಳಿತ), ನೋ ಡೆವಲಪ್‌ಮೆಂಟ್‌ (ಅಭಿವೃದ್ಧ ರಹಿತ) ಹಾಗೂ ಕರಪ್ಶನ್‌ (ಭ್ರಷ್ಟ) ಸರ್ಕಾರ ಎಂದು ಟೀಕಿಸಿದ್ದಾರೆ. ಅಧಿಕಾರಕ್ಕೆ ಬಂದಿರುವ ಎರಡೇ ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ಆರ್ಥಿಕತೆಯನ್ನು ನಾಶಪಡಿಸಿದೆ. ರಾಜ್ಯದ ರೈತರ ಹಿತವನ್ನು ನಿರ್ಲಕ್ಷ್ಯ ಮಾಡಿದ್ದು, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. 

'ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು MNC ಸರ್ಕಾರ ಎಂದೂ ಟೀಕೆ ಮಾಡಿದ್ದಾರೆ. ದುರಾಡಳಿತ,ಅಭಿವೃದ್ಧಿ ರಹಿತ ಮತ್ತು ಭಷ್ಟ ಸರ್ಕಾರ ಇದು ಎಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16 ಜಿಲ್ಲೆಗಳು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ ಮತ್ತು 85 ತಾಲೂಕುಗಳು ದೊಡ್ಡ ಮಟ್ಟದಲ್ಲಿ ಮಳೆಯ ಕೊರತೆಯನ್ನು ಎದುರಿಸುತ್ತಿದೆ. ನಮ್ಮ ರೈತರು ಎದುರಿಸುತ್ತಿರುವ ಈ ಸವಾಲಿನ ಪರಿಸ್ಥಿತಿಗಳ ನಡುವೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನ್ಯಾಯಾಲಯದ ಸಮಾಲೋಚನೆ ಅಥವಾ ಸರ್ವಪಕ್ಷ ಸಭೆಯಿಲ್ಲದೆ 10 ಟಿಎಂಸಿ ಕಾವೇರಿ ನೀರು ಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಕ್ರಮಕ್ಕೆ ಅವರ ಹಿರಿಯ ನಾಯಕ, 'ಘಮಂಡಿಯಾ ಘಟಬಂಧನ್' ಒಕ್ಕೂಟದ ಪಾಲುದಾರ ಡಿಎಂಕೆಯ ಒತ್ತಡದಿಂದ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್ ನಾಯಕರು ಡಿಎಂಕೆ ಒತ್ತಡಕ್ಕೆ ಸ್ಪಂದಿಸಿದ ಹಿರಿಮೆಯನ್ನು ಹೊಂದಿದ್ದಾರೆ. ನಾವು ಇತಿಹಾಸವನ್ನು ಕೆದಕಿದರೆ, 2ಜಿ ಹಗರಣದ ಸಮಯದಲ್ಲೂ ಅದೇ ವಿಷಯವಾಗಿತ್ತು. ಈ ರೀತಿಯ ಕಾಂಗ್ರೆಸ್ ರಾಜಕಾರಣಕ್ಕೆ ಇಂದು ರೈತರು ತಮ್ಮ ಪ್ರಾಣವನ್ನೇ ತೆರುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಮತ್ತು ಅವರೆಲ್ಲರೂ ಹೇಗೆ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ್ದಾರೆ ಎನ್ನುವುದನ್ನೂ ವಿವರಿಸಿದರು.

“ಹಲವು ಜಿಲ್ಲೆಗಳಲ್ಲಿ ಸ್ಪಷ್ಟವಾದ ಕೃಷಿ ಸಂಕಷ್ಟದ ನಡುವೆ, ಬರಗಾಲದಂತಹ ಪರಿಸ್ಥಿತಿಗಳ ನಡುವೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೃಷಿ ಸಚಿವರು ಸೇರಿದಂತೆ ಯಾವುದೇ ಉನ್ನತ ಅಧಿಕಾರಿಗಳು ಈ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬೆಂಗಳೂರಿನಿಂದ ಆಚೆಗೆ ಪ್ರಯಾಣಿಸಿಲ್ಲ. ಬಿಕ್ಕಟ್ಟು ಅರಿಯಲು ಅಥವಾ ರೈತರ ನೋವನ್ನು ಅರಿಯಲು ಮುಂದಾಗದೆ ಅವರ ಪ್ರಯಾಣ ದೆಹಲಿ ಮತ್ತು ಬೆಂಗಳೂರಿಗೆ ಮಾತ್ರವೇ ಸೀಮಿತವಾಗಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು, ಕರ್ನಾಟಕ ಸರ್ಕಾರದ ಕೃಷಿ ಸಚಿವರು ಸ್ವತಃ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿದ್ದಾರೆ. ಕೃಷಿ ಸಚಿವಾಲಯದ ಅವರ ಸ್ವಂತ ಸಿಬ್ಬಂದಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ದುರಾಡಳಿತ, ಸುಳ್ಳುಗಳಲ್ಲಿಯೇ ಕಾಲ ಕಳೆಯುತ್ತಿದ್ದರೆ. ರೈತರು ಹಾಘೂ ಇತರ ಸಮುದಾಯಗಳ ಬಗ್ಗೆ ಅವರ ನಿರಾಸಕ್ತಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ರಾಜ್ಯದೊಳಗಿನ ಗುತ್ತಿಗೆದಾರರು ಬಾಕಿ ಇರುವ ಬಿಲ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಲಂಚ ಕೇಳುತ್ತಿರುವ ಬಗ್ಗೆ ಇವರುಗಳೇ ಆರೋಪ ಮಾಡಿದ್ದಾರೆ ಎಂದು ಹೇಳಿದರು.  ಡಿಕೆ ಶಿವಕುಮಾರ್ ಹಣಕ್ಕಾಗಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಗುತ್ತಿಗೆದಾರರು ಈ ಸರ್ಕಾರವನ್ನು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಕುತಂತ್ರ ಸೃಷ್ಟಿಸುತ್ತಿದೆ. ಒಂದೆಡೆ ಡಿ.ಕೆ.ಶಿವಕುಮಾರ್ ಅಭಿವೃದ್ಧಿಗೆ ಹಣ ಇಲ್ಲ ಎನ್ನುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅನುದಾನ ಬೇಕು ಎಂದು ಹೇಳುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.  ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಎಂಒಎಸ್ ರಾಜೀವ್ ಚಂದ್ರಶೇಖರ್, ಈ ನಿರ್ಧಾರವು ಯುವಜನರಿಗೆ ಅಗತ್ಯ ಕೌಶಲ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರದ ಹಣ ನೇರವಾಗಿ ಜನರ ಕೈಗೆ ಹೋಗ್ತಿದೆ; ಮೋದಿ ಸರ್ಕಾರದ ಡಿಜಿಟಲ್‌ ಕ್ಷೇತ್ರದ ಕ್ರಾಂತಿಯೇ ಕಾರಣ: ರಾಜೀವ್ ಚಂದ್ರಶೇಖರ್

"ಶಿಕ್ಷಣವನ್ನು ಸುಧಾರಿಸುವ ಗುರಿಯೊಂದಿಗೆ ಸರ್ಕಾರವು ಎನ್‌ಇಪಿಯನ್ನು ಪರಿಚಯಿಸಿದೆ, ಆದರೆ ಕಾಂಗ್ರೆಸ್‌ ಸರ್ಕಾರ ಇದನ್ನು ರದ್ದುಗೊಳಿಸಲು ನಿರ್ಧರಿಸಿದೆ ಮತ್ತು ಈ ಆಯ್ಕೆಗೆ ಪರಿಣಾಮಗಳಿವೆ. ಎನ್‌ಇಪಿಯ ಮುಖ್ಯ ಉದ್ದೇಶವೆಂದರೆ ಯಾವುದೇ ಮಗು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕೌಶಲ್ಯವಿಲ್ಲದೆ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. 6ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಕೌಶಲ್ಯದಿಂದ ಸಜ್ಜುಗೊಳಿಸಲು ಯೋಜನೆ ರೂಪಿಸಲಾಗಿತ್ತು. ಎನ್‌ಇಪಿ ಅನ್ನು ರದ್ದುಪಡಿಸುವ ಮೂಲಕ, ಅವರು ನಮ್ಮ ಯುವಕರ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ತೋರುತ್ತದೆ, ”ಎಂದು ಸಚಿವರು ಹೇಳಿದ್ದಾರೆ.

 

ದೇಶದ ವ್ಯಕ್ತಿಗಳಿಂದಲೇ ದೇಶದ ವಿರುದ್ಧ ಪಿತೂರಿ: ರಾಜೀವ್‌ ಚಂದ್ರಶೇಖರ್‌

Follow Us:
Download App:
  • android
  • ios