Asianet Suvarna News Asianet Suvarna News

ರಾಜ್ಯದಲ್ಲಿ 6 ಸಾವಿರ ದಾಟಿದ ಸಾವಿನ ಸಂಖ್ಯೆ : ಉಚಿತ ಔಷಧ ನೀಡಲು ನಿರ್ಧಾರ

ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 6 ದಾವಿರದ ಗಡಿ ದಾಟಿದೆ. ಇದರಿಂದ ಸರ್ಕಾರ ಉಚಿತ ಔಷಧ ನೀಡಲು ನಿರ್ಧರಿಸಿದೆ. 

More Than 6 Thousand Corona Death Cases In Karnataka
Author
Bengaluru, First Published Sep 4, 2020, 9:03 AM IST

ಬೆಂಗಳೂರು (ಸೆ.04): ರಾಜ್ಯದಲ್ಲಿ ಕೋವಿಡ್‌-19 ರ ಕಾರಣದಿಂದ ಗುರುವಾರ 104 ಮಂದಿ ಸತ್ತಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ ನಿಂದ ಮೃತರಾದವರ ಒಟ್ಟು ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೋನಾ ವೈರಸ್‌ ಗೆ 6054 ಮಂದಿ ಪ್ರಾಣ ಕಳೆದುಕೊಂಡಂತೆ ಆಗಿದೆ.

ರಾಜ್ಯದಲ್ಲಿ ಗುರುವಾರ 8,865 ಮಂದಿ ಹೊಸದಾಗಿ ಕೊರೋನಾ ಸೋಂಕು ಉಂಟಾಗಿದೆ. ಇದರೊಂದಿಗೆ ರಾಜ್ಯದಲ್ಲಿನ ಸಕ್ರೀಯ ಕೊರೋನಾ ಪ್ರಕರಣಗಳ ಸಂಖ್ಯೆ 96,099ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 3.70 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ಗುರುವಾರ 7,122 ಮಂದಿ ಕೊರೋನಾ ಮುಕ್ತರಾಗಿದ್ದು, ಕೊರೋನಾದಿಂದ ಬಿಡುಗಡೆ ಪಡೆದವರ ಸಂಖ್ಯೆ 2.68 ಲಕ್ಷಕ್ಕೇರಿದೆ. ಒಟ್ಟು ಸಕ್ರೀಯ ಪ್ರಕರಣಗಳಲ್ಲಿ 735 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುರುವಾರ ದಾಖಲೆಯ 85982 ಕೊರೋನಾ ಕೇಸ್ ಪತ್ತೆ..!

ರಾಜ್ಯದಲ್ಲಿ ಕೊರೋನಾವನ್ನು ಗೆಲ್ಲುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ಕೊರೋನಾ ಬಂದವರಲ್ಲಿ ಶೇ. 72.40 ಮಂದಿ ಕೊರೋನಾ ಮುಕ್ತರಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ರಾಜ್ಯದಲ್ಲಿ ಗುರುವಾರ 71,124 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 31.23 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರು ನಂ.1:

ಬೆಂಗಳೂರು ನಗರದಲ್ಲಿ 29 ಮಂದಿಯನ್ನು ಕೊರೋನಾ ಗುರುವಾರ ಬಲಿ ತೆಗೆದುಕೊಂಡಿದೆ. ಧಾರವಾಡದಲ್ಲಿ 9, ಮೈಸೂರು, ಶಿವಮೊಗ್ಗ, ಕೊಪ್ಪಳ ತಲಾ 8, ಬೆಂಗಳೂರು ಗ್ರಾಮಾಂತರ 7, ಹಾಸನ 5, ಉಡುಪಿ, ಹಾವೇರಿ, ಬಳ್ಳಾರಿ ತಲಾ 4, ದಕ್ಷಿಣ ಕನ್ನಡ, ಗದಗ, ರಾಯಚೂರು, ತುಮಕೂರು ತಲಾ 3, ವಿಜಯಪುರ 2, ಬಾಗಲಕೋಟೆ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ ತಲಾ 1 ಸಾವು ಕೊರೋನಾದಿಂದ ಸಂಭವಿಸಿದೆ.

ಬೆಂಗಳೂರು ನಗರದಲ್ಲಿ 3,189, ಮೈಸೂರು 475, ಬೆಳಗಾವಿ 454, ಬಳ್ಳಾರಿ 424, ಧಾರವಾಡ 342, ದಕ್ಷಿಣ ಕನ್ನಡದಲ್ಲಿ 316 ಹೊಸ ಪ್ರಕರಣಗಳು ದಾಖಲಾಗಿದೆ. ಹಾಸನ 252, ಶಿವಮೊಗ್ಗ 251, ಮಂಡ್ಯ 239, ಕೊಪ್ಪಳ 226, ದಾವಣಗೆರೆ 222, ಕಲಬುರಗಿ 195, ಗದಗ 183, ಉತ್ತರ ಕನ್ನಡ 182, ರಾಯಚೂರು 161, ಬೆಂಗಳೂರು ಗ್ರಾಮಾಂತರ 160, ಚಿತ್ರದುರ್ಗ 151, ಹಾವೇರಿ 139, ತುಮಕೂರು 132, ವಿಜಯಪುರ 131, ಬಾಗಲಕೋಟೆ 123, ಯಾದಗಿರಿ 112, ಕೋಲಾರ 103, ಕೊಡಗು 82, ರಾಮನಗರ 67, ಬೀದರ್‌ 56, ಚಾಮರಾಜನಗರ 43 ಹೊಸ ಪ್ರಕರಣಗಳು ಪತ್ತೆಯಾಗಿವೆ.

ರೆಸ್ಲಿಂಗ್ ಸೂಪರ್ ಸ್ಟಾರ್, ನಟ ರಾಕ್‌ ಜಾನ್ಸನ್‌ ಕುಟುಂಬಕ್ಕೆ ಕೊರೋನಾ ಪಾಸಿಟಿವ್

ರೆಮ್‌ಡೆಸಿರ್‌ ಚುಚ್ಚು ಮದ್ದು ಉಚಿತ

ರಾಜ್ಯದಲ್ಲಿ ಕೊರೋನಾದಿಂದ ಮೃತರಾಗುತ್ತಿರುವುದನ್ನು ತಡೆಯಲು ಮುಂದಾಗಿರುವ ಪರಿಗಣಿಸಿರುವ ರಾಜ್ಯ ಸರ್ಕಾರ ಕೋವಿಡ್‌ ನಿಂದಾಗಿ ಗಂಭೀರ, ಅತಿ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಚುಚ್ಚುಮದ್ದು ನೀಡುವ ನಿಯಮಾವಳಿಗಳ ಮಾರ್ಗದರ್ಶಿ ಸೂತ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಮೀಷನರೇಟ್‌ ಗುರುವಾರ ಬಿಡುಗಡೆ ಮಾಡಿದೆ. ಚುಚ್ಚುಮದ್ದನ್ನು ರೋಗಿಗೆ ನೀಡಬೇಕೇ, ಬೇಡವೇ ಎಂಬುದು ಚಿಕಿತ್ಸೆ ನೀಡುವ ವೈದ್ಯರ ವಿವೇಚನೆಗೆ ಬಿಡಲಾಗಿದೆ.

Follow Us:
Download App:
  • android
  • ios