'6 ತಿಂಗಳಲ್ಲಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಹೆಚ್ಚಳ'

  • ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಏರಿಕೆ 
  • ಮಧ್ಯಮ ವರ್ಗದ ವೇತನ ಹಾಗೂ ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟುಬಾರಿ ಏರಿಕೆ?
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸರ್ಕಾರವನ್ನು ಪ್ರಶ್ನೆ
More Than 40 Times Fuel Price Hikes in 6 Month Says DK Shivakumar snr

ಬೆಂಗಳೂರು (ಜೂ.12):  ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದೇ ರೀತಿ ಮಧ್ಯಮ ವರ್ಗದ ವೇತನ ಹಾಗೂ ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟುಬಾರಿ ಹೆಚ್ಚಿಸಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸರ್ಕಾರ ಇದೇ ರೀತಿ ಬೆಲೆ ಏರಿಕೆ ಮಾಡಿದರೆ ಪೆಟ್ರೋಲ್‌ ಬೆಲೆ 2022ರಲ್ಲಿ 120 ರು., 2023ರಲ್ಲಿ 160 ರು., 2024ರಲ್ಲಿ 200 ರು. ಆಗಲಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ನಾವು ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.

5,000 ಪೆಟ್ರೋಲ್‌ ಬಂಕ್‌ ಮುಂದೆ ಕೈ ನಾಯಕರ ‘100 ನಾಟೌಟ್‌’ ಪ್ರತಿಭಟನೆ!

ಕೇಂದ್ರ ಸರ್ಕಾರದ ಪೆಟ್ರೋಲ… ಹಾಗೂ ಡೀಸೆಲ್‌ ಬೆಲೆ ಏರಿಕೆ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ 800 ಪೆಟ್ರೋಲ್‌ ಬಂಕ್‌ಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, 2021ರಲ್ಲಿ ಬಿಜೆಪಿಯು 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಏರಿಕೆ ಮಾಡಿದೆ. ಆದರೆ, ಸರ್ಕಾರ ಮಧ್ಯಮ ವರ್ಗದವರ ಸಂಬಳವನ್ನು ಎಷ್ಟುಬಾರಿ ಹೆಚ್ಚಿಸಿದೆ? ಕನಿಷ್ಠ ವೇತನವನ್ನು ಎಷ್ಟುಬಾರಿ ಪರಿಷ್ಕರಿಸಲಾಗಿದೆ? ಉದ್ಯೋಗ ಖಾತ್ರಿ ವೇತನವನ್ನು ಎಷ್ಟುಬಾರಿ ಹೆಚ್ಚಿಸಲಾಗಿದೆ? ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟುಬಾರಿ ಹೆಚ್ಚಿಸಲಾಗಿದೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ-ಡಿಕೆಶಿ ಗೌಪ್ಯ ಚರ್ಚೆ : ಚುನಾವಣೆಗೆ ನಾವು ಸಿದ್ದವೆಂದ ನಾಯಕರು

ಬಿಜೆಪಿ ಸರ್ಕಾರ ಜನರ ಹಿತಕ್ಕಿಂತ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹಗಲು ದರೋಡೆಗಿಳಿದಿದೆ. ಆರ್ಥಿಕ ಹಿಂಜರಿತ ಹಾಗೂ ಇಂಧನ ದರ ಹೆಚ್ಚಳದಿಂದ ದೇಶದ ಪ್ರತಿಯೊಬ್ಬ ನಾಗರಿಕನು ತೊಂದರೆ ಅನುಭವಿಸುತ್ತಿದ್ದಾನೆ. ಇಂತಹ ಸಮಯದಲ್ಲಿ ಪೆಟ್ರೋಲ್‌ ತೆರಿಗೆ ಹೆಸರಿನಲ್ಲಿ ಬಿಜೆಪಿಯು ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios