Covid-19 Crisis: ರಾಜ್ಯದಲ್ಲಿ ಕೋವಿಡ್ ಸೋಂಕು, ಪಾಸಿಟಿವಿಟಿ ಎರಡೂ ಕುಸಿತ
ರಾಜ್ಯದಲ್ಲಿ ದಿನದಿನಕ್ಕೆ ಏರುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಸೋಮವಾರ ಲಗಾಮು ಬಿದ್ದಿದೆ. ರಾಜ್ಯದಲ್ಲಿ ಸೋಮವಾರ 27,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ 30 ಸಾವಿರ ಮೀರಿ ವರದಿಯಾಗಿದ್ದ ಹೊಸ ಪ್ರಕರಣಗಳು ಮತ್ತೆ 30 ಸಾವಿರದೊಳಕ್ಕೆ ಬಂದಿದೆ.
ಬೆಂಗಳೂರು (ಜ.18): ರಾಜ್ಯದಲ್ಲಿ ದಿನದಿನಕ್ಕೆ ಏರುತ್ತಿದ್ದ ಕೋವಿಡ್ ಪ್ರಕರಣಗಳ (Covid Cases) ಸಂಖ್ಯೆಗೆ ಸೋಮವಾರ ಲಗಾಮು ಬಿದ್ದಿದೆ. ರಾಜ್ಯದಲ್ಲಿ ಸೋಮವಾರ 27,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ 30 ಸಾವಿರ ಮೀರಿ ವರದಿಯಾಗಿದ್ದ ಹೊಸ ಪ್ರಕರಣಗಳು ಮತ್ತೆ 30 ಸಾವಿರದೊಳಕ್ಕೆ ಬಂದಿದೆ. ಭಾನುವಾರ ಶೇ. 19.29 ಇದ್ದ ಪಾಸಿಟಿವಿಟಿ ದರ ಶೇ. 12.45ಕ್ಕೆ ಇಳಿದಿದೆ.
ಈ ಮಧ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಬೆಂಗಳೂರು (Bengaluru) ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಭಾನುವಾರ 21,071 ಪ್ರಕರಣ ದಾಖಲಾಗಿದ್ದರೆ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ 15,947ಕ್ಕೆ ಕುಸಿದಿದೆ. ಆದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
266 ಮಂದಿಗೆ ಒಮಿಕ್ರೋನ್: ರಾಜ್ಯದಲ್ಲಿ ಸೋಮವಾರ 266 ಮಂದಿಗೆ ಒಮಿಕ್ರೋನ್ (Omicron) ಇರುವುದು ದೃಢಪಟ್ಟಿದ್ದು ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 766ಕ್ಕೆ ಏರಿದೆ. ಒಮಿಕ್ರೋನ್ ಸೋಂಕಿತರ ಹೆಚ್ಚಿನ ವಿವರವನ್ನು ಸರ್ಕಾರ ನೀಡಿಲ್ಲ. ಮೈಸೂರು 1,770, ತುಮಕೂರು 1,147, ಹಾಸನ 1,050, ಮಂಡ್ಯ 917, ಧಾರವಾಡ 784, ಬಳ್ಳಾರಿ 560, ಬೆಂಗಳೂರು ಗ್ರಾಮಾಂತರ 538, ದಕ್ಷಿಣ ಕನ್ನಡ 490, ಕಲಬುರಗಿ 479, ಉಡುಪಿ 442 ಪ್ರಕರಣ ಪತ್ತೆಯಾಗಿದೆ. ಯಾದಗಿರಿ 18, ಹಾವೇರಿ 27, ಗದಗ 71, ಬೀದರ್ 75, ಬಾಗಲಕೋಟೆ 82, ಕೊಪ್ಪಳ 89 ಮತ್ತು ರಾಮನಗರ ಜಿಲ್ಲೆಯಲ್ಲಿ 96 ಪ್ರಕರಣ ಹೊರತು ಪಡಿಸಿ ಉಳಿದೆಡೆ 100ಕ್ಕಿಂತ ಹೆಚ್ಚು ಹೊಸ ಪ್ರಕರಣ ದಾಖಲಾಗಿದೆ.
Covid-19 Crisis: ಭಾರತದಲ್ಲೀಗ ಕೋವಿಡ್ ಕೇಸ್ ಇಳಿಕೆ, ಪಾಸಿಟಿವಿಟಿ ದರ ಏರಿಕೆ
ರಾಜ್ಯದಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತ್ತಿದ್ದು ಸೋಮವಾರ 7,827 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಸದ್ಯ 2.17 ಲಕ್ಷ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 32.47 ಲಕ್ಷ ಮಂದಿಗೆ ಕೋವಿಡ್ ಬಂದಿದ್ದು 29.91 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ 3, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಕಲಬುರಗಿ, ತುಮಕೂರು ಮತ್ತು ರಾಮನಗರಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಈವರೆಗೆ ಒಟ್ಟು 38,445 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ: ರಾಜ್ಯದಲ್ಲಿ ಸೋಮವಾರ 2.16 ಲಕ್ಷ ಮಂದಿ ಕೋವಿಡ್ ಲಸಿಕೆ (Covid19 Vaccine) ಪಡೆದುಕೊಂಡಿದ್ದಾರೆ. 86,459 ಮಂದಿ ಮೊದಲ ಮತ್ತು 99,759 ಮಂದಿ ಎರಡನೇ ಹಾಗೂ 30,598 ಮಂದಿ ಮುನ್ನೆಚ್ಚರಿಕಾ ಡೋಸ್ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.16 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 5.06 ಕೋಟಿ ಮೊದಲ, 4.07 ಕೋಟಿ ಎರಡನೇ ಮತ್ತು 2.93 ಲಕ್ಷ ಮುನ್ನೆಚ್ಚರಿಕಾ ಡೋಸ್ ನೀಡಲಾಗಿದೆ.
Covid Crisis: ರಾಜ್ಯದಲ್ಲಿ 230 ದಿನಗಳ ಗರಿಷ್ಠ ಕೇಸ್: ಪಾಸಿಟಿವಿಟಿ ಪ್ರಮಾಣ ಶೇ.15ಕ್ಕೆ ಏರಿಕೆ
ರಾಜ್ಯದಲ್ಲಿ ಡಿಸೆಂಬರ್ 25ಕ್ಕೆ ಶೇ.0.27 ಇದ್ದ ಪಾಸಿಟಿವಿಟಿ ದರ ನಿರಂತರವಾಗಿ ಏರುತ್ತಲೇ ಸಾಗಿ ಭಾನುವಾರ ಶೇ.20ರ ಸಮೀಪಕ್ಕೆ ಬಂದಿತ್ತು. ಇದೀಗ ಮೊದಲ ಬಾರಿಗೆ ಪಾಸಿಟಿವಿಟಿ ದರ ಕುಸಿತ ಕಂಡಿದೆ. ಸಾಮಾನ್ಯವಾಗಿ ವಾರದ ಉಳಿದ ದಿನಗಳಿಗೆ ಹೋಲಿಸಿದರೆ ಸೋಮವಾರ ಕೋವಿಡ್ ಪರೀಕ್ಷೆಯ ಪ್ರಮಾಣ ಕಡಿಮೆ ನಡೆಯುವ ಹಿನ್ನೆಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವುದು ವಾಡಿಕೆ. ಆದರೆ ಈ ಸೋಮವಾರ 2.17 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಮತ್ತು ಸೋಂಕಿತರ ಸಂಖ್ಯೆ ಕಡಿಮೆ ಆಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.