Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,58,089 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು ಭಾನುವಾರದ 2.71 ಲಕ್ಷಕ್ಕಿಂತ 13 ಸಾವಿರದಷ್ಟುಕಡಿಮೆ ಆದರೂ ಪಾಸಿಟಿವಿಟಿ ದರ ಶೇ.3ರಷ್ಟುಏರಿದೆ.

258089 New Covid Cases In India Positivity Up From 16 28 To 19 65 gvd

ನವದೆಹಲಿ (ಜ.18): ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,58,089 ಕೋವಿಡ್‌ ಪ್ರಕರಣಗಳು (Covid Cases) ದಾಖಲಾಗಿದೆ. ಇದು ಭಾನುವಾರದ 2.71 ಲಕ್ಷಕ್ಕಿಂತ 13 ಸಾವಿರದಷ್ಟುಕಡಿಮೆ ಆದರೂ ಪಾಸಿಟಿವಿಟಿ ದರ ಶೇ.3ರಷ್ಟುಏರಿದೆ. ಭಾನುವಾರ ಶೇ.16.28ರಷ್ಟಿದ್ದ ಪಾಸಿಟಿವಿಟಿ ದರ ಸೋಮವಾರ ಶೇ. 19.65ಕ್ಕೆ ಏರಿದೆ. ಇದು ಆತಂಕಕಾರಿ ವಿಷಯ. 

ಇದೇ ಅವಧಿಯಲ್ಲಿ ಕೇರಳದ 158 ಮತ್ತು ಪಶ್ಚಿಮ ಬಂಗಾಳದ 36 ಸೋಂಕಿತರು ಸೇರಿ 385 ಜನ ಸಾವೀಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು 16.56 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 230 ದಿನಗಳ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 1.05 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ. ಗುಣಮುಖ ದರ ಶೇ.94.27ಕ್ಕೆ ಕುಸಿದಿದೆ. ವಾರದ ಪಾಸಿಟಿವಿಟಿ ದರ ಶೇ.14.41ರಷ್ಟಿದೆ.ಒಟ್ಟು ಪ್ರಕರಣಗಳು 3.73 ಕೋಟಿಗೆ ಮತ್ತು ಒಟ್ಟು ಸಾವು 4.86 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 157.20 ಕೋಟಿ ಡೋಸ್‌ (Vaccine) ವಿತರಿಸಲಾಗಿದೆ.

8209ಕ್ಕೇರಿದ ಒಮಿಕ್ರೋನ್‌ ಕೇಸು: ಸೋಮವಾರ ದೇಶದಲ್ಲಿ 466 ಒಮಿಕ್ರೋನ್‌ ಪ್ರಕರಣಗಳು (Omicron Cases) ದಾಖಲಾಗಿದ್ದು, ಒಟ್ಟು ಒಮಿಕ್ರೋನ್‌ ಪ್ರಕರಣಗಳು 8,209ಕ್ಕೆ ಏರಿಕೆಯಾಗಿದೆ. 29 ರಾಜ್ಯಗಳಲ್ಲೂ ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,738 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ 1,672, ರಾಜಸ್ಥಾನದಲ್ಲಿ 1,276, ದೆಹಲಿಯಲ್ಲಿ 549, ಕರ್ನಾಟಕದಲ್ಲಿ 548 ಮತ್ತು ಕೇರಳದಲ್ಲಿ 536 ಪ್ರಕರಣಗಳು ದಾಖಲಾಗಿವೆ.

Corona Crisis: ಪರಿಸ್ಥಿತಿ ಬದಲಾಗಬಹುದು, ಆಸ್ಪತ್ರೆ ದಾಖಲು ದರ ಏರಿಕೆ?: ಕೇಂದ್ರ

ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ: ಒಮಿಕ್ರೋನ್‌ (Omicron) ರೂಪಾಂತರಿ ಕೊರೋನಾ ವೈರಸ್‌ನ (Coronavirus) ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. ಹೀಗಾಗಿ ಭಾರತದಲ್ಲೀಗ ಸಮಾನಾಂತರಾವಾಗಿ ಎರಡು ಕೋವಿಡ್‌ ಅಲೆ ಕಾಣಿಸಿಕೊಂಡಿದೆ ಎಂದು ಹಿರಿಯ ವೈದ್ಯರೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಜಿ ಮುಖ್ಯಸ್ಥ, ಹಿರಿಯ ವೈರಾಣು ತಜ್ಞ ಡಾ. ಟಿ.ಜಾಕೋಬ್‌ ಜಾನ್‌ (T Jacob John) ಮಾತನಾಡಿ, ‘ವುಹಾನ್‌ನಲ್ಲಿ ಮೊತ್ತ ಮೊದಲಿಗೆ ಸೋಂಕಿಗೆ ಕಾರಣವಾದ ವುಹಾನ್‌-ಡಿ614ಜಿ, ನಂತರ ಕಾಣಿಸಿಕೊಂಡ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ, ಮು ಸೇರಿದಂತೆ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ ಸಂಬಂಧ ಹೊಂದಿಲ್ಲ. ಇದು ಸಂಪೂರ್ಣವಾಗಿ ಬೇರೆ ಮೂಲದಿಂದ ಉಗಮವಾಗಿರುವ ವೈರಸ್‌’ ಎಂದು ಹೇಳಿದ್ದಾರೆ.

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

‘ಕೋವಿಡ್‌ ಸಾಂಕ್ರಾಮಿಕದ ಬೆಳವಣಿಗೆಯ ಹಾದಿಯಲ್ಲಿ ಕಂಡುಬಂದ ಯಾವುದೇ ವೈರಸ್‌ ಜೊತೆಗೆ ಇದು ನಂಟು ಹೊಂದಿಲ್ಲ. ಹೀಗಾಗಿ ನಾವೀಗ ಭಾರತದಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎಂಬ ಎರಡು ಪ್ರತ್ಯೇಕ ಕೋವಿಡ್‌ ಅಲೆಯನ್ನು ಎದುರಿಸುತ್ತಿದ್ದೇವೆ ಎಂಬ ಚಿಂತನೆಯತ್ತ ಸಾಗಬೇಕಿದೆ’ ಎಂದು ಜಾನ್‌ ಹೇಳಿದ್ದಾರೆ.  ‘ಸಾಂಪ್ರದಾಯಿಕ ಕೋವಿಡ್‌ ವೈರಸ್‌ಗಳಿಗೆ ಹೋಲಿಸಿದರೆ ಒಮಿಕ್ರೋನ್‌ ಸಾಕಷ್ಟುಭಿನ್ನವಾಗಿದೆ. ಹೀಗಾಗಿಯೇ ಒಮಿಕ್ರೋನ್‌ ಅನ್ನು ಕೇವಲ ಜಿನೋಮ್‌ ಸೀಕ್ವೆನ್ಸಿಂಗ್‌ ಮೂಲಕ ಮಾತ್ರವೇ ಪತ್ತೆ ಹಚ್ಚಬಹುದು. ಇತರೆ ವೈರಸ್‌ ಶ್ವಾಸಕೋಶಕ್ಕೆ ತೊಂದರೆ ಮೂಡಿಸಿದರೆ, ಒಮಿಕ್ರೋನ್‌ ಕೇವಲ ಗಂಟಲು ಭಾಗದಲ್ಲಿ ಇರುತ್ತದೆ’ ಎಂದು ಜಾನ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios