ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಮಕ್ಕಳು ಅಸ್ವಸ್ಥ: ಸಿಎಂ ಎಚ್ಚರಿಕೆ ನೀಡಿದ್ದರೂ ಮುಂದುವರಿದ ನಿರ್ಲಕ್ಷ್ಯ!

ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ತಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ

More than 20 children are sick due to consumption of contaminated water at yadgir rav

ಯಾದಗಿರಿ (ಸೆ.30): ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ತಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಕಸ್ತೂರಬಾ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಚಹ, ಬಿಸ್ಕಿಟ್ ತಿಂದಿದ್ದಾರೆ. ನೀರು ಕುಡಿದ ಬಳಿಕ ವಾಂತಿ ಭೇದಿ. ಕಲುಷಿತ ನೀರು ಕುಡಿದಿರೋದ್ರಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ತಕ್ಷಣ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಟಿಹೆಚ್ಒ ಡಾ.ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾದಗಿರಿ: ಕಲುಷಿತ ನೀರು ಸೇವನೆ, 10ಕ್ಕೂ ಅಧಿಕ ಜನರು ಅಸ್ವಸ್ಥ; ಮಹಿಳೆ ಸಾವು?

ಪದೇಪದೆ ನಡೆಯುತ್ತಿರುವ ಘಟನೆ:

ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿರುವುದು ಜನತೆಯಲ್ಲಿ ಆತಂಕದ ಛಾಯೆ ಮೂಡಿದೆ. ಕಳೆದ ಆಗಸ್ಟ್‌ ತಿಂಗಳಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆದಿತ್ತು. ತಾಲೂಕಿನ ಚಿಕ್ಕಿನಹಳ್ಳಿಯಲ್ಲಿ ಕೈಪಂಪ್‌ನ ನೀರು ಸೇವನೆಯಿಂದ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿತ್ತು. ಇದಕ್ಕೂ ಮೊದಲು ಹುಣಸಗಿ ತಾಲೂಕಿನ ಮಾರಲಭಾವಿ, ಗುರುಮಠಕಲ್‌ನ ಅನಪುರ, ಶಿವಪುರ, ಗಾಜರಕೋಟ್‌, 2022ರಲ್ಲಿ ಸುರಪುರದ ಮಾಚಗುಂಡಾಳ ಕುಲಷಿತ ನೀರು ಸೇವನೆ ಘಟನೆ ನಡೆದಿತು. ಇದೀಗ ಮತ್ತೆ ಕಲುಷಿತ ನೀರಿಗೆ ಮಕ್ಕಳ ಅಸ್ವಸ್ಥರಾಗಿರುವ ಘಟನೆ ಮರುಕಳಿಸಿದೆ.

ಕಲುಷಿತ ನೀರಿಂದ ಸಾವಾದರೆ ಸಿಇಒ ಸಸ್ಪೆಂಡ್‌: ಸಿದ್ದರಾಮಯ್ಯ ಎಚ್ಚರಿಕೆ

ಪಂಚಾಯತ ಅಧಿಕಾರಿಗಳ ನಿರ್ಲಕ್ಷಕ್ಕೆ ವಿದ್ಯಾರ್ಥಿಗಳ ಆರೋಗ್ಯ ಏರುಪೇರು.  ಈ ಹಿಂದೆಯೂ ಇದೇ ರೀತಿ ಘಟನೆಗಳು ನಡೆದಿವೆ. ಸ್ವತಃ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಮುಂದುವರಿದ ನಿರ್ಲಕ್ಷ್ಯ. 

Latest Videos
Follow Us:
Download App:
  • android
  • ios