Asianet Suvarna News Asianet Suvarna News

ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಬಜರಂಗದಳದ ಇಬ್ಬರು ಕಾರ್ಯಕರ್ತರ ಬಂಧನ

ಭಿನ್ನ ಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಸಂಬಂಧ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಬಜರಂಗದಳದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅಕ್ಷಯ್ ಮತ್ತು ಶಿಬಿನ್ ಬಂಧಿತ ಆರೋಪಿಗಳು.

moral policing case issue 2 bajrangadala activists arrested by pandeshwar police at mangaluru rav
Author
First Published Nov 28, 2023, 9:10 AM IST

ಮಂಗಳೂರು (ನ.28): ಭಿನ್ನ ಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಸಂಬಂಧ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಬಜರಂಗದಳದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಅಕ್ಷಯ್ ಮತ್ತು ಶಿಬಿನ್ ಬಂಧಿತ ಆರೋಪಿಗಳು. ಮಂಕಿಸ್ಟ್ಯಾಂಡ್ ಬಳಿಯ ಮಳಿಗೆಯೊಂದರಲ್ಲಿ ಉದ್ಯೋಗದಲ್ಲಿರುವ ಜೋಡಿ, ನಿನ್ನೆ ಸ್ಕೂಟರ್ ನಲ್ಲಿ ಸುತ್ತಾಟ ನಡೆಸುತ್ತಿರುವುದು ಗಮನಿಸಿ ಬೈಕ್ ನಲ್ಲಿ ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರು. ಅನ್ಯಕೋಮಿನ ಯುವಕನೊಂದಿಗೆ ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದ ಚಿಕ್ಕಮಗಳೂರಿನ ಯುವತಿ. ಸ್ಕೂಟರ್ ಹಿಂಬಾಲಿಸಿ ಅಡ್ಡಗಟ್ಟಿ ವಾರ್ನ್ ಮಾಡಿದ್ದರು.

ಭಿನ್ನಮತೀಯ ಜೋಡಿ ಸುತ್ತಾಟ, ಭಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ

 ಈ ವೇಳೆ ಸ್ಥಳದಲ್ಲಿ ಎರಡು ಕೋಮಿನ ಯುವಕರ ತಂಡ ಜಮಾಯಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ್ದ ಪಾಂಡೇಶ್ವರ ಠಾಣೆಯ ಪೊಲೀಸರು, ಗುಂಪು ಚದುರಿಸಿ ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲಿಸರು ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ರಾಷ್ಟ್ರೀಯ ರನ್ನಿಂಗ್ ರೇಸ್ ಸೋಲು; ಪುತ್ತೂರಿನ ವಿದ್ಯಾರ್ಥಿನಿ ಆತ್ಮಹತ್ಯೆ !

Follow Us:
Download App:
  • android
  • ios