Asianet Suvarna News Asianet Suvarna News

ಭಿನ್ನಮತೀಯ ಜೋಡಿ ಸುತ್ತಾಟ, ಭಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ

ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದ ಭಿನ್ನ ಧರ್ಮದ ಯುವಕ, ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು, ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ನಡೆದಿದೆ.

Moral policing again Bajrangadal warns to muslim man and hindu girl at mangaluru rav
Author
First Published Nov 28, 2023, 5:05 AM IST

ಮಂಗಳೂರು (ನ.28): ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದ ಭಿನ್ನ ಧರ್ಮದ ಯುವಕ, ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು, ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ನಡೆದಿದೆ.

ಮೋರ್ಗನ್ಸ್ ಗೇಟ್ ಬಳಿ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ಈ ಯುವಕ, ಯುವತಿ ಸ್ಕೂಟರ್ ನಲ್ಲಿ‌ ಜತೆಯಾಗಿ ಸುತ್ತಾಡುತ್ತಿದ್ದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ.

ಏನಿದು ಘಟನೆ?

ಮಂಕಿಸ್ಟ್ಯಾಂಡ್ ನಿವಾಸಿ ಅನ್ಯಕೋಮಿನ ಯುವಕನೊಂದಿಗೆ‌ ಸುತ್ತಾಡುತ್ತಿದ್ದ ಚಿಕ್ಕಮಗಳೂರಿನ‌ ಯುವತಿ. ಸ್ಕೂಟರ್ ನಲ್ಲಿ ಜೋಡಿ ಸಲುಗೆಯಿಂದ ಸುತ್ತಾಟ ನಡೆಸುತ್ತಿದ್ದುದನ್ನು ಗಮನಿಸಿ ಬೈಕ್ ನಲ್ಲಿ ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರು. ಮಂಕಿಸ್ಟ್ಯಾಂಡ್ ಬಳಿ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿರುವ ಬಜರಂಗದಳ ಕಾರ್ಯಕರ್ತರು.

ರಾಷ್ಟ್ರೀಯ ರನ್ನಿಂಗ್ ರೇಸ್ ಸೋಲು; ಪುತ್ತೂರಿನ ವಿದ್ಯಾರ್ಥಿನಿ ಆತ್ಮಹತ್ಯೆ !

ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಎರಡು ಕೋಮಿನ ಯುವಕರ ತಂಡದಿಂದ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಗುಂಪು ಚದುರಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದನ್ನು ತಿಳಿಗೊಳಿಸಿದ್ದಾರೆ. ಸದ್ಯ ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರೋಪಿಗಳ ಬಂಧನ:

ನೈತಿಕ ಪೊಲೀಸ್‌ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios