ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ವೇಳೆ ಯಾವತ್ತೂ ಕಾಣದ ಮುಸಿಯಾ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ (ಜ.21): ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ವೇಳೆ ಯಾವತ್ತೂ ಕಾಣದ ಮುಸಿಯಾ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದಲ್ಲಿ ನಡೆದಿದೆ.

ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆ ತಣಿಗೆರೆ ಗ್ರಾಮಸ್ಥರು ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸಿದ್ದರು. ಸರಿಯಾಗಿ
ಅಂಜನೇಯನ ವಿಗ್ರಹ ಪ್ರತಿಷ್ಠಾಪನೆ ಸಮಯಕ್ಕೆ ಕಾಣಿಸಿಕೊಂಡ ಕೋತಿ. ಗ್ರಾಮದಲ್ಲಿ ಇತ್ತೀಚೆಗೆ ಎಲ್ಲೂ ಕೋತಿಗಳೇ ಕಾಣಿಸಿಕೊಂಡಿರಲಿಲ್ಲ. ಆದರೆ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ಸಮಯಕ್ಕೆ ಕಾಣಿಸಿಕೊಂಡಿರುವುದು ಸ್ವತಃ ಆಂಜನೇಯ ಗ್ರಾಮಕ್ಕೆ ಆಗಮಿಸಿದ್ದಾನೆಂದು ಸಂತಸಗೊಂಡಿರುವ ಗ್ರಾಮಸ್ಥರು.

'ಅದೇನು ದುರ್ಬುದ್ಧಿ ಬಂದಿದೋ ಗೊತ್ತಿಲ್ಲ; ದುರ್ಯೋಧನ ರೀತಿ ಆಡ್ತಾರೆ : ರಜೆ ಘೋಷಿಸದ ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ನಾಳೆ (ಜ.22) ರಂದು ಪ್ರತಿಷ್ಠಾಪನೆಯಾಗಲಿರುವ ಹನುಮಾನ ಮೂರ್ತಿ. ಗ್ರಾಮಸ್ಥರು ಉತ್ಸಾಹಗೊಂಡಿದ್ದಾರೆ. ಘಟನೆ ವಿಡಿಯೋ ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗಿದ್ದು, ಆಂಜನೇಯನೇ ಗ್ರಾಮಕ್ಕೆ ಆಗಮಿಸಿದ್ದಾನೆಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.