'ಅದೇನು ದುರ್ಬುದ್ಧಿ ಬಂದಿದೋ ಗೊತ್ತಿಲ್ಲ; ದುರ್ಯೋಧನ ರೀತಿ ಆಡ್ತಾರೆ : ರಜೆ ಘೋಷಿಸದ ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ
ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಆಗಲಿದೆ. ಈ ಕ್ಷಣಕ್ಕಾಗಿ ದೇಶಾದ್ಯಂತ ರಾಮಭಕ್ತರು ಕಾದಿದ್ದಾರೆ. ದೇಶಾದ್ಯಂತ ಸಂಭ್ರಮದ ವಾತಾವರಣವಿದೆ. ಪದ್ಮನಾಭನಗರದಲ್ಲೂ ರಾಮನ ಪ್ರತಿಷ್ಠಾಪನೆ ಆಗಿದೆ. ನಾಳಿನ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.
ಬೆಂಗಳೂರು (ಜ.21): ನಾಳೆ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಆಗಲಿದೆ. ಈ ಕ್ಷಣಕ್ಕಾಗಿ ದೇಶಾದ್ಯಂತ ರಾಮಭಕ್ತರು ಕಾದಿದ್ದಾರೆ. ದೇಶಾದ್ಯಂತ ಸಂಭ್ರಮದ ವಾತಾವರಣವಿದೆ. ಪದ್ಮನಾಭನಗರದಲ್ಲೂ ರಾಮನ ಪ್ರತಿಷ್ಠಾಪನೆ ಆಗಿದೆ. ನಾಳಿನ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.
ಇಂದು ಪದ್ಮನಾಭನಗರದಲ್ಲಿ ರಾಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಹಲವು ರಾಜ್ಯಗಳು ರಜೆ ಘೋಷಿಸಿವೆ. ಹಿಮಾಚಲ ಪ್ರದೇಶದಲ್ಲೂ ರಜೆ ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಅದೇನು ದುರ್ಬುದ್ಧಿ ಬಂದಿದೆಯೋ ಗೊತ್ತಿಲ್ಲಕ. ನಾಳೆ ರಜೆ ಕೊಟ್ಟಿದ್ರೆ ಲಕ್ಷಾಂತರ ಜನರು ರಾಮನ ಪೂಜೆ ಮಾಡ್ತಿದ್ರು. ಆದರೆ ರಜೆ ಘೋಷಣೆ ಮಾಡಿದ್ರೆ ಎಲ್ಲಿ ರಾಮನ ಪೂಜೆ ಜಾಸ್ತಿ ಆಗಿಬಿಡುತ್ತೋ ಅಂತಾ ಹೀಗೆ ಮಾಡಿದ್ದಾರೆ ಎಂದು ರಜೆ ಘೋಷಣೆ ಮಾಡದ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾಳೆ ಅಯೋಧ್ಯೆ ಬಾಲರಾಮ ಪ್ರಾಣಪ್ರತಿಷ್ಠೆ: ಕಾಫಿನಾಡು ಚಿಕ್ಕಮಗಳೂರಲ್ಲಿ ಸಂಭ್ರಮ!
ಅಯೋಧ್ಯಾ ರಾಮಮಂದಿರಕ್ಕಾಗಿ ಮೂರುನಾಲ್ಕು ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಜೆ ಘೋಷಿಸಿದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಆಂಜನೇಯ ಒಳ್ಳೆ ಬುದ್ದಿ ಕೊಡಲಿ. ಈಗಲೂ ಸಮಯ ಮಿಂಚಿಲ್ಲ ರಜೆ ಘೋಷಣೆ ಮಾಡ್ತಾರೆ ಅಂತ ನಂಬಿಕೆ ಇದೆ ಎಂದರು.
ರಾಮ ಎಲ್ಲರಿಗೂ ಸೀಮಿತವಾದ ವ್ಯಕ್ತಿ. ಎಲ್ಲೂ ಪ್ಲಕ್ಸ್ ಕೀಳುವ ಕೆಲಸ ಮಾಡಬೇಡಿ. ರಾಮ ಎಲ್ಲರಿಗೂ ಒಂದೆ. ಈಗಾಗಲೇ ರಜೆ ಕೊಡುವಂತೆ ಪತ್ರವನ್ನೂ ಸಹ ಕೊಟ್ಟಿದ್ದೇನೆ. ದುರ್ಯೋಧನನ ರೀತಿ ಹಠ ಮಾಡಬೇಡಿ. ರಾಮನ ಭಜನೆ ಮಾಡೋಕೆ ಅವಕಾಶ ಕೊಡಿ. 7 ಕೋಟಿ ಕನ್ನಡಿಗರ ಪರವಾಗಿ ಕೈಮುಗಿದು ವಿನಂತಿ ಮಾಡ್ತಿನಿ. ನಾಳೆ ರಾಮನ ಪೂಜೆ ಮಾಡಲು ಅವಕಾಶ ಮಾಡಿಕೊಡಿ ವಿನಂತಿಸಿದರು.
ಜ.22 ರಂದು ರಜೆ ಬೇಕೋ ಬೇಡ್ವೋ?: ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!