Vande Bharat Express: ರಾಜ್ಯದ 2ನೇ ವಂದೇಭಾರತ್‌ ರೈಲಿಗೆ ಇಂದು ಮೋದಿ ಚಾಲನೆ

ಬೆಂಗಳೂರಿನಿಂದ-ಹುಬ್ಬಳ್ಳಿ, ಧಾರವಾಡ ಅವಳಿ ನಗರಕ್ಕೆ ಸಂಚರಿಸುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಸಿಕ್ಕಂತಾಗಲಿದೆ. ಈಗಾಗಲೇ ಮೈಸೂರು-ಬೆಂಗಳೂರು- ಚೆನ್ನೈ ನಡುವೆ ಮೊದಲ ವಂದೇ ಭಾರತ್‌ ರೈಲು ಸಂಚಾರ ನಡೆಸುತ್ತಿದೆ.

Modi drive  the 2nd Vandebharat train of the state today dharwad bengaluru rav

ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಭೋಪಾಲ್‌ನಿಂದ ಚಾಲನೆ, ಮೈಸೂರು- ಚೆನ್ನೈ ಬಳಿಕ 2ನೇ ಐಷಾರಾಮಿ ರೈಲು

ಭೋಪಾಲ್‌ (ಜೂ.27): ಬೆಂಗಳೂರಿನಿಂದ-ಹುಬ್ಬಳ್ಳಿ, ಧಾರವಾಡ ಅವಳಿ ನಗರಕ್ಕೆ ಸಂಚರಿಸುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಸಿಕ್ಕಂತಾಗಲಿದೆ. ಈಗಾಗಲೇ ಮೈಸೂರು-ಬೆಂಗಳೂರು- ಚೆನ್ನೈ ನಡುವೆ ಮೊದಲ ವಂದೇ ಭಾರತ್‌ ರೈಲು ಸಂಚಾರ ನಡೆಸುತ್ತಿದೆ.

ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಮಂಗಳವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಈ ವೇಳೆ ಬೆಂಗಳೂರು-ಧಾರವಾಡ ನಡುವಿನ ರೈಲು ಸೇರಿದಂತೆ ಒಟ್ಟು 5 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 10.30ಕ್ಕೆ ಹೊಸ ರೈಲುಗಳಿಗೆ ಹಸಿರು ನಿಶಾನೆ ನೀಡುವ ಕಾರ್ಯಕ್ರಮ ನಡೆಯಲಿದೆ.

 

ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ಉಳಿದ 4 ರೈಲುಗಳೆಂದರೆ ಭೋಪಾಲ್‌- ಇಂದೋರ್‌, ಭೋಪಾಲ್‌-ಜಬಲ್ಪುರ, ರಾಂಚಿ-ಪಟನಾ, ಮತ್ತು ಗೋವಾ-ಮುಂಬೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌. ಈ ಪೈಕಿ ಗೋವಾ ಮೊದಲ ಬಾರಿಗೆ ವಂದೇ ಭಾರತ್‌ ರೈಲು ಸೇವೆ ಪಡೆಯುತ್ತಿದೆ.

ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್‌ ಇಡಲು ಅನುಕೂಲಕರ ಸ್ಥಳ ಸೇರಿದಂತೆ ಗುಣಮಟ್ಟದ ಸೇವೆ ನೀಡುತ್ತದೆ. ಆದರೆ ಇತರೆ ರೈಲುಗಳಿಗೆ ಹೋಲಿಸಿದರೆ ಇವುಗಳ ಟಿಕೆಟ್‌ ದರ ಸಾಕಷ್ಟುದುಬಾರಿ ಇದೆ. 

ನಾಳೆಯಿಂದ ಸಾರ್ವಜನಿಕರ ಸಂಚಾರ ಶುರು, ದರ 1165 ರು.

ಬೆಂಗಳೂರು  ರಾಜ್ಯದ ಬಹುನಿರೀಕ್ಷಿತ ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿಗೆ ಮಂಗಳವಾರ ಚಾಲನೆ ದೊರೆಯಲಿದ್ದು, ಜೂ.28ರಿಂದ ಅಧಿಕೃತವಾಗಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.

ಈ ರೈಲು (ರೈ.ಸಂ. 20661) ಬೆಳಗ್ಗೆ 5.45ಕ್ಕೆ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಟು 5.57ಕ್ಕೆ ಯಶವಂತಪುರ, 9.17ಕ್ಕೆ ದಾವಣಗೆರೆ, 11.35ಕ್ಕೆ ಹುಬ್ಬಳ್ಳಿ ಹಾಗೂ ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಹಿಂದಿರುಗುವಾಗ (ರೈ.ಸಂ. 20662) ಮಧ್ಯಾಹ್ನ 1.15ಕ್ಕೆ ಧಾರವಾಡ ಬಿಟ್ಟು 1.40ಕ್ಕೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, 7.13ಕ್ಕೆ ಯಶವಂತಪುರ, 7.45ಕ್ಕೆ ಕೆಎಸ್‌ಆರ್‌ ಬೆಂಗಳೂರು ತಲುಪಲಿದೆ.

ಬೆಂಗಳೂರಿಂದ ಧಾರವಾಡಕ್ಕೆ .1165 ದರ

- ಹುಬ್ಬಳ್ಳಿ-ಧಾರವಾಡ, ಬೆಂಗಳೂರು-ಯಶವಂತಪುರ 410 ರು. ದರ

ಎಸಿ ಚೇರ್‌ಕಾರ್‌ನಲ್ಲಿ ಬೆಂಗಳೂರಿಂದ ಯಶವಂತಪುರಕ್ಕೆ .410, ದಾವಣಗೆರೆಗೆ .915, ಹುಬ್ಬಳ್ಳಿಗೆ .1135, ಧಾರವಾಡಕ್ಕೆ .1165 ಇದೆ. ಯಶವಂತಪುರದಿಂದ ದಾವಣಗೆರೆಗೆ .900, ಹುಬ್ಬಳ್ಳಿ .1135, ಧಾರವಾಡ .1165, ದಾವಣಗೆರೆಯಿಂದ ಹುಬ್ಬಳ್ಳಿ .500, ಧಾರವಾಡ .535, ಹುಬ್ಬಳ್ಳಿಯಿಂದ ಧಾರವಾಡ .410 ಇದೆ.

ಎಕ್ಸಿಕ್ಯೂಟಿವ್‌ ಕ್ಲಾಸ್‌:

ಬೆಂಗಳೂರು ಕೆಎಸ್‌ಆರ್‌ನಿಂದ ಯಶವಂತಪುರ .545, ದಾವಣಗೆರೆ .1740, ಹುಬ್ಬಳ್ಳಿ .2180, ಧಾರವಾಡಕ್ಕೆ .2010 ಇದೆ. ಯಶವಂತಪುರದಿಂದ ದಾವಣಗೆರೆಗೆ .1710, ಹುಬ್ಬಳ್ಳಿ .2180, ಧಾರವಾಡ .2245, ಹುಬ್ಬಳ್ಳಿ .985, ದಾವಣಗೆರೆಯಿಂದ ಧಾರವಾಡ .1055, ಹುಬ್ಬಳ್ಳಿಯಿಂದ ಧಾರವಾಡ .545.

ಧಾರವಾಡದಿಂದ ಬೆಂಗಳೂರು

ಎಸಿ ಚೇರ್‌ಕಾರ್‌ನಲ್ಲಿ ಧಾರವಾಡದಿಂದ ಕೆಎಸ್‌ಆರ್‌ ಬೆಂಗಳೂರು .1330, ಹುಬ್ಬಳ್ಳಿಯಿಂದ ಬೆಂಗಳೂರು .1300, ದಾವಣಗೆರೆ-ಬೆಂಗಳೂರು .860, ಯಶವಂತಪುರ-ಕೆಎಸ್‌ಆರ್‌ ಬೆಂಗಳೂರು .410, ದಾವಣಗೆರೆ-ಯಶವಂತಪುರ .845, ಹುಬ್ಬಳ್ಳಿ-ಯಶವಂತಪುರ .1300, ಧಾರವಾಡ- ಯಶವಂತಪುರ .1340, ಹುಬ್ಬಳ್ಳಿ- ದಾವಣಗೆರೆ .705, ಧಾರವಾಡ- ದಾವಣಗೆರೆ . 745, ಧಾರವಾಡ-ಹುಬ್ಬಳ್ಳಿ .410.

ಜೂನ್ 27ಕ್ಕೆ ಮಧ್ಯಪ್ರದೇಶಕ್ಕೆ ಮೋದಿ ಭೇಟಿ: ವಂದೇ ಭಾರತ್ ರೈಲಿಗೆ ಚಾಲನೆ ಸೇರಿ ಹಲವು ಕಾರ್ಯಕ್ರಮ!

ಎಕ್ಸಿಕ್ಯೂಟಿವ್‌ ಕ್ಲಾಸ್‌:

ಧಾರವಾಡ-ಕೆಎಸ್‌ಆರ್‌ ಬೆಂಗಳೂರು .2440, ಹುಬ್ಬಳ್ಳಿ- ಬೆಂಗಳೂರು .2375, ದಾವಣಗೆರೆ-ಬೆಂಗಳೂರು .1690, ಯಶವಂತಪುರ-ಕೆಎಸ್‌ಆರ್‌ ಬೆಂಗಳೂರು .545, ದಾವಣಗೆರೆ-ಯಶವಂತಪುರ .1660, ಹುಬ್ಬಳ್ಳಿ-ಯಶವಂತಪುರ .2375, ಧಾರವಾಡ- ಯಶವಂತಪುರ .2440, ಹುಬ್ಬಳ್ಳಿ- ದಾವಣಗೆರೆ .1215, ಧಾರವಾಡ-ದಾವಣಗೆರೆ .1282, ಧಾರವಾಡ-ಹುಬ್ಬಳ್ಳಿ .410 ಇದೆ.

ಮಧ್ಯಾಹ್ನ ಹೊರಟ ವೇಳೆ ಧಾರವಾಡ-ದಾವಣಗೆರೆ ಮಧ್ಯೆ ಊಟ, ಸ್ನಾ್ಯಕ್ಸ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಟಿಕೆಟ್‌ ದರ (ಊಟ ಒಳಗೊಂಡು) ಹಿಂದಿರುಗುವಾಗ ಹೆಚ್ಚಾಗಿದೆ.

Latest Videos
Follow Us:
Download App:
  • android
  • ios