Asianet Suvarna News Asianet Suvarna News

ಹನುಮಾನ್ ಚಾಲೀಸ್ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಸಂಸದ ತೇಜಸ್ವಿ ಸೂರ್ಯ ಆಗ್ರಹ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುಂಡರ ಉಪಟಳ ಹೆಚ್ಚಾಗಿದೆ. ಚಿಕ್ಕಪೇಟೆ ಮೊಬೈಲ್ ಅಂಗಡಿಯಲ್ಲಿ ಬ್ಲೂಟೂತ್ ಸ್ಪೀಕರ್ ನಲ್ಲಿ ಹನುಮಾನ್ ಚಾಲಿಸ ಹಾಕಿಕೊಂಡಿದ್ದನೆಂಬ ಕಾರಣಕ್ಕೆ ಕಿಡಿಗೇಡಿಗಳ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಾಳೆಯೊಳಗಾಗಿ ಅಷ್ಟು ಆರೋಪಿಗಳನ್ನ ಬಂಧಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ

mobile shop owner assault by muslim youths case MP Tejasvi surya reacts at bengaluru rav
Author
First Published Mar 18, 2024, 10:40 PM IST

ಬೆಂಗಳೂರು (ಮಾ.18) : ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುಂಡರ ಉಪಟಳ ಹೆಚ್ಚಾಗಿದೆ. ಚಿಕ್ಕಪೇಟೆ ಮೊಬೈಲ್ ಅಂಗಡಿಯಲ್ಲಿ ಬ್ಲೂಟೂತ್ ಸ್ಪೀಕರ್ ನಲ್ಲಿ ಹನುಮಾನ್ ಚಾಲಿಸ ಹಾಕಿಕೊಂಡಿದ್ದನೆಂಬ ಕಾರಣಕ್ಕೆ ಕಿಡಿಗೇಡಿಗಳ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸರ್ಕಾರದ ಮುಲಾಜಿಗೆ ಒಳಗಾಗದೆ ನಾಳೆಯೊಳಗಾಗಿ ಸಿಸಿಟಿವಿಯಲ್ಲಿ ದಾಖಲಾದ ಅಷ್ಟು ಆರೋಪಿಗಳನ್ನು ಬಂಧಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ ಸಂಸದರು, ಗಲಾಟೆ ಸಂಬಂಧ ಹಲ್ಲೆಗೊಳಗಾದ ಯುವಕ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಯುವಕ ದೂರಿನಲ್ಲಿ ಉಲ್ಲೇಖಿಸಿದ ಕಾರಣ ಬಿಟ್ಟು ಮಾಮೂಲಿ ಕಾರಣ ಹಾಕಿ ದೂರು ದಾಖಲಿಸಿಕೊಂಡಿದ್ದರು. ಹಲ್ಲೆಗೊಳಗಾದ ಯುವಕ ಕೊಟ್ಟ ದೂರನ್ನೇ ತಿರುಚಿ ದೂರು ಕೊಡಲಾಗಿತ್ತು. ದೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿರೋದನ್ನ ವಿರೋಧಿಸಿ ಹಲ್ಲೆ ಮಾಡಿರೋದನ್ನ ಬರೆಯದೇ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು. ಇದೀಗ ಮತ್ತೆ ಮುಖೇಶ್ ನಿಂದ ಬೇರೊಂದು ದೂರು ಕೊಡಿಸಲಾಗಿದೆ. ದೂರಿನಲ್ಲಿ ಪುಂಡರು ಅಜಾನ್ ಇರೋ ಸಮಯದಲ್ಲಿ ಹನುಮಾನ್ ಚಾಲೀಸ ಹಾಕಿರೋದನ್ನ ವಿರೋದಿಸೋ ವಿಷಯ ಹಾಕಿ ಎಫ್ ಐಆರ್ ನಲ್ಲಿ ಸೇರಿಸಲಾಗಿದೆ. ಪುಂಡರನ್ನು ಶಿಕ್ಷಿಸಬೇಕಾದ ಪೊಲೀಸರು ಸರ್ಕಾರದ ಮುಲಾಜಿಗೆ ಒಳಗಾಗಿ ಕೆಲಸ ಮಾಡಬಾರದು. ಸಿಸಿಟಿವಿಯಲ್ಲಿ ಆರೋಪಿಗಳ ಗುರುತು ಸ್ಪಷ್ಟವಾಗಿದೆ. ಬಂಧಿಸಲು ಯಾಕೆ ಹಿಂದೇಟು? ನಾಳೆಯೊಳಗಾಗಿ ಅಷ್ಟು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ; ಎಫ್‌ಐಆರ್‌ಗೆ ಪೊಲೀಸರು ಹಿಂದೇಟು?

ಘಟನೆ ಕುರಿತು ಕೇಂದ್ರ ವಿಭಾಗದ ಡಿಸಿಪಿ ಹೇಳೋದೇನು?

ಮೊಬೈಲ್ ಅಂಗಡಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್‌ಟಿ ಪ್ರತಿಕ್ರಿಯಿಸಿದ್ದು, ನೆನ್ನೆ ಸಾಯಂಕಾಲ 6:15 ರ ಸುಮಾರಿಗೆ ಐದು ಮಂದಿ ಹಲ್ಲೆ ಮಾಡಿದ್ದಾರೆ. ಅಂಗಡಿಯಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈ ದಿನ ಮೂವರನ್ನು ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದೇವೆ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಭಜನ್ ಸಾಂಗ್ ಹಾಕಿದ್ರು ಸೌಂಡ್ ಜಾಸ್ತಿಯಾಗಿತ್ತೆಂದು ಹಲ್ಲೆ ಮಾಡಿದ್ವಿ ಎಂದು ಆರೋಪಿಗಳು ಹೇಳಿದ್ದಾರೆ. ಆರೋಪಿಗಳಲ್ಲಿ ಎರಡು ಕೋಮಿನವರು ಇದ್ದಾರೆ. ಓರ್ವ ಆರೋಪಿ ಮೇಲೆ ಹಿಂದೆಯೇ ಎರಡು ಪ್ರಕರಣಗಳು ಇವೆ. ಹಲ್ಲೆ ಹಾಗೂ ಸುಲಿಗೆ ಮಾಡಿರುವ ಕೇಸ್ ಇದೆ. ಇದೀಗ ಹಲ್ಲೆ ಘಟನೆಯಲ್ಲೂ ಭಾಗಿಯಾಗಿದ್ದಾನೆ. 

Follow Us:
Download App:
  • android
  • ios