ಶಾಸಕರು 59 ತಿಂಗಳು ಅಭಿವೃದ್ಧಿ ಮಾಡಿ: ಸಿಎಂ ಬೊಮ್ಮಾಯಿ

  • ಶಾಸಕರು 59 ತಿಂಗಳು ಅಭಿವೃದ್ಧಿ ಮಾಡಿ: ಸಿಎಂ
  •  ಐದು ವರ್ಷಗಳ ಅವಧಿಯಲ್ಲಿ ರಾಜಕಾರಣಕ್ಕೆ 1 ತಿಂಗಳು ಮಾತ್ರ ಮೀಸಲಿಡಲು ಸಿಎಂ ಬೊಮ್ಮಾಯಿ ಕಿವಿಮಾತು
  • ಚಿತ್ರದುರ್ಗ ಸರಸ್ವತಿ ಕಾನೂನು ಮಹಾವಿದ್ಯಾಲಯದ ಸುವರ್ಣ ಸಮಾರಂಭ - ಕಾನೂನು ಸೌಧ ಉದ್ಘಾಟನೆ
MLAs should develop in 59 months says  CM Bommai

ಚಿತ್ರದುರ್ಗ (ನ.23) : ಶಾಸಕರಿಗೆ ಅಧಿಕಾರ ನಡೆಸಲು 60ತಿಂಗಳು ಅವಕಾಶ ಸಿಗಲಿದ್ದು 59 ತಿಂಗಳು ಅಭಿವೃದ್ಧಿ ಕೆಲಸ ಮಾಡಿ, ಒಂದು ತಿಂಗಳು ಮಾತ್ರ ರಾಜಕಾರಣಕ್ಕೆ ಸಮಯ ವ್ಯಯಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.

ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಸುವರ್ಣ ಸಮಾರಂಭ ಹಾಗೂ ಕಾನೂನು ಸೌಧವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಚಾಲಿ ್ತಯಲ್ಲಿರುವ ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಇದನ್ನು ಅರಿಯಬೇಕು. ರಾಜಕಾರಣಿಯಾದವನು ಮುಂದಿನ ಚುನಾವಣೆಯತ್ತ ಕಣ್ಣುಹಾಯಿಸಿದರೆ, ಮುತ್ಸದ್ದಿ ದೃಷ್ಟಿಮುಂದಿನ ಜನಾಂಗದ ಮೇಲೆ ಇರುತ್ತದೆ. ಭವಿಷ್ಯದ ಪೀಳಿಗೆಗೆ ಮೌಲ್ಯಗಳ ತಿಳಿಸುವ ಕೆಲಸವಾಗಬೇಕು. ಸಮಸ್ಯೆ ಸೃಷ್ಟಿಸುವಂತಹ ರಾಜಕಾರಣ ಒಂದೆಡೆಯಾದರೆ, ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಉತ್ತಮ ರಾಜಕಾರಣ ಮಾಡಿದವರಲ್ಲಿ ಮುತ್ಸದ್ದಿ ಹಾಗೂ ಮಾಜಿ ಸಂಸದ ಚಿತ್ರದುರ್ಗದ ಹನುಮಂತಪ್ಪ ಪ್ರಮುಖರು ಎಂದು ಬಣ್ಣಿಸಿದರು.

Chitradurga: ಮುರುಘಾ ಮಠ ಆಡಳಿತ ಡಿಸಿ ವರದಿ ಆಧರಿಸಿ ತೀರ್ಮಾನ: ಸಿಎಂ ಬೊಮ್ಮಾಯಿ

ವಕೀಲರ ಸಂಘಗಳು ಕೇವಲ ನ್ಯಾಯವಾದಿಗಳ ಸಂಘಟನೆಗಳ ಬಗ್ಗೆ ಮಾತ್ರ ಸೀಮಿತಗೊಳ್ಳದೆ ದೇಶದಲ್ಲಿ ನಡೆಯುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಸೂಕ್ತ ಚಿಂತನೆ ನಡೆಸಿ ಪರಿಹಾರದ ನಿಟ್ಟಿನಲ್ಲಿ ದಿಕ್ಸೂಚಿಯಾಗಬೇಕು. ಸರ್ವೋಚ್ಚ, ಉಚ್ಚ ಹಾಗೂ ಕೆಳ ಹಂತದ ನ್ಯಾಯಾಲಯಗಳೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಕಾನೂನು ನೆರವಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಒದಗಿಸಬಹುದು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು.

ಶಾಸಕಾಂಗ ಹಾಗೂ ನ್ಯಾಯಾಂಗ ಪ್ರತ್ಯೇಕವಾಗಿದ್ದರೂ ಒಂದನ್ನೊಂದು ಅವಲಂಬಿಸಿವೆ. ಎರಡೂ ಜೊತೆ ಜೊತೆಯಾಗಿ ಸಾಗಬೇಕು. ಶಾಸಕಾಂಗದಿಂದ ಕಾನೂನು ರೂಪಿಸುವಾಗ ಹತ್ತು ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ರೂಪಿಸುವ ಕಾನೂನು ಸಂವಿಧಾನ ಬದ್ದವಾಗಿರಬೇಕು, ಸಮಾನತೆ ಸ್ವರೂಪ ಹೊಂದಿರಬೇಕು, ಕಾನೂನುಗಳು ಗೊಂದಲ ಮಯ ವಾಗಿರಬಾರದು. ಸ್ಪಷ್ಟಉದ್ದೇಶದಿಂದ ಕಾನೂನು ರೂಪಿಸಬೇಕು ಎಂದರು.

ವಕೀಲರು ಮಾನವೀಯತೆ ಮರೆಯಬಾರದು. ಪ್ರಾಕೃತಿಕ ನ್ಯಾಯ ಹಾಗೂ ಮಾನವ ರಚಿತ ಕಾನೂನುಗಳು ಭಿನ್ನವಾಗಿವೆ. ಪ್ರಾಕೃತಿಕ ನ್ಯಾಯ ಸತ್ಯ, ಧರ್ಮ, ಪರೋಪಕಾರದಿಂದ ಲಭಿಸುವ ಪುಣ್ಯ ಪ್ರಾಪ್ತಿಯ ಬಗ್ಗೆ ತಿಳಿಸುತ್ತದೆ. ಆದರೆ ಮಾನವ ನಿರ್ಮಿತ ಕಾನೂನು ಶಿಕ್ಷಾರ್ಹ ನೀತಿ ಹೊಂದಿದೆ. ಕಾನೂನು ಮೀರಿದರೆ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ನೀತಿಗಳ ಬೋಧಿಸುವ ಆಚಾರ್ಯರಿದ್ದಾರೆ. ಆದರೆ ನೀತಿಗಳ ಆಚರಣೆಯಾಗಬೇಕು ಎಂದರು.

ಸರಸ್ವತಿ ವಿದ್ಯಾಸಂಸ್ಥೆ ಮಧ್ಯ ಕರ್ನಾಟಕದಲ್ಲಿ ಜನರಿಗೆ ಕಾನೂನು ನೆರವು ಲಭಿಸುವ ನಿಟ್ಟಿನಲ್ಲಿ ಉತ್ತಮ ವಕೀಲರನ್ನು ರೂಪಿಸಿದೆ. ಸ್ವಾತಂತ್ರ್ಯ ಹಾಗೂ ರಾಜ್ಯ ಏಕೀಕರಣದಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಬ್ಯಾರಿಸ್ಟರ್‌ ಪದವಿ ಪಡೆದ ಮಹನೀಯರು ಸ್ವಾತಂತ್ರ್ಯ ಸಮಯದಲ್ಲಿ ಕಾನೂನು ರೂಪಿಸುವ ಸ್ಥಾನದಲ್ಲಿದ್ದರು. ಕಾಲಕ್ರಮೇಣ ಈ ಸಂಖ್ಯೆ ಇಳಿಮುಖವಾಗಿದೆ. ಇಂದು ಶೇ.25 ಕ್ಕಿಂತ ಕಡಿಮೆ ವಕೀಲರು ರಾಜಕಾರಣದಲ್ಲಿದ್ದಾರೆ ಎಂದರು.

Karnataka Politics: ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರ ‘ಭಾಗ್ಯ’: ಸಿಎಂ ಬೊಮ್ಮಾಯಿ

ಸರಸ್ವತಿ ಕಾನೂನು ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರು.2 ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವಿಧಾನ ಪರಿಷತ್‌ ಸದಸ್ಯರಾದ ರವಿಕುಮಾರ್‌, ಕೆ.ಎಸ್‌.ನವೀನ್‌, ನಗರ ಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ…, ಹುಬ್ಬಳ್ಳಿ ಕಾನೂನು ವಿವಿ ಕುಲಪತಿ ಡಾ.ಸಿ. ಬಸವರಾಜು, ಸರಸ್ವತಿ ಕಾನೂನು ಕಾಲೇಜು ಮುಖ್ಯಸ್ಥ ಎಚ್‌. ಹನುಮಂತಪ್ಪ, ಡಿ.ಕೆ.ಶೀಲಾ, ಸಿಇಒ ಎಂ.ಎಸ್‌.ದಿವಾಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಂ ಇದ್ದರು.

Latest Videos
Follow Us:
Download App:
  • android
  • ios