Asianet Suvarna News Asianet Suvarna News

Breaking: ಶಾಸಕ ಮಾಡಾಳು ವಿರುಪಾಕ್ಷಪ್ಪ ಜಾಮೀನು ರದ್ದು: ಚುನಾವಣೆಗೆ ಮುನ್ನ ಬಂಧನ ಭೀತಿ

ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಸಂಕಷ್ಟ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದನು. ಈಗ ಜಾಮೀನು ರದ್ದುಗೊಳಿಸಲಾಗಿದೆ.

MLA Virupakshappa canceled bail Fear of arrest at any moment sat
Author
First Published Mar 27, 2023, 3:25 PM IST

ಬೆಂಗಳೂರು (ಮಾ.27): ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಸಂಕಷ್ಟ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದನು. ಈಗ ಜಾಮೀನು ಜಾಮೂನು ರದ್ದುಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಶಾಸಕನ ಬಂಧನ ಆಗಲಿದೆ.

ಕಳೆದ ತಿಂಗಳು ಲೋಕಾಯುಕ್ತರು ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಬೆಂಗಳೂರಿನ ವೈಯಕ್ತಿಕ ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಶಾಸಕರ ಪುತ್ರ ಮಾಡಾಳು ಪ್ರಶಾಂತ ಅವರು 40 ಲಕ್ಷ ರೂ. ಹಣವನ್ನು ಪಡೆಯುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದರು. ಇನ್ನು ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಬರೋಬ್ಬರಿ 6 ಕೋಟಿ ರೂ. ಹಣ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಒಟ್ಟು 6 ಜನ ಆರೋಪಿಗಳನ್ನಾಗಿ ಚಾರ್ಜ್‌ ಶೀಟ್‌ ಸಿದ್ಧಪಡಿಸಿದ್ದರು. 

ಮಾಡಾಳ್ ವಿರುಪಾಕ್ಷಪ್ಪ ಬೇಲ್‌ ರದ್ದು ಮಾಡೋಕೆ ಅರ್ಜೆಂಟ್‌ ಯಾಕೆ?: ಲೋಕಾಯುಕ್ತಗೆ ಸುಪ್ರೀಂ ತರಾಟೆ

ಜಾಮೀನು ಸಿಕ್ಕ ನಂತರವೇ ಪ್ರತ್ಯಕ್ಷ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳು ವಿರುಪಾಕ್ಷಪ್ಪ ಖಾಸಗಿ ಕಂಪನಿಯೊಂದರ ಪ್ರಕರಣವನ್ನು ಖುಲಾಸೆ ಮಾಡುವ ಕಾರಣಕ್ಕೆ 40 ಲಕ್ಷ ರೂ. ಲಂಚ ಪಡೆಯುತ್ತಿದ್ದರು ಎಂದು ಆರೋಪಿಸಿ ಅವರನ್ನೇ ಎ1 ಆರೋಪಿಯನ್ನಾಗಿ ಮಾಡಲಾಗಿತ್ತು. ಉಳಿದಂತೆ ಅವರ ಪುತ್ರ ಮಾಡಾಳು ಪ್ರಶಾಂತ, ಹಣ ಕೊಡಲು ಬಂದಿದ್ದ ಕಂಪನಿಯ ಇಬ್ಬರು ವ್ಯಕ್ತಿಗಳು ಹಾಗೂ ಮಾಡಾಳು ವಿರುಪಾಕ್ಷಪ್ಪ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮಾಡಾಳು ವಿರುಪಾಕ್ಷಪ್ಪ ಮಾತ್ರ 6 ದಿನಗಳ ಕಾಲ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಇನ್ನು ಹೈಕೋರ್ಟ್‌ನಲ್ಲಿ ಜಾಮೀನು ಲಭ್ಯವಾದ ನಂತರವೇ ಬಹಿರಂಗವಾಗಿ ಪ್ರತ್ಯಕ್ಷ ಆಗಿದ್ದರು.

ಜಾಮೀನು ರದ್ದತಿಗೆ ಸುಪ್ರೀಂಗೆ ಮೊರೆ:  ಅಕ್ರಮ ಹಣ ಸಂಪಾದನೆ ಆರೋಪವಿದ್ದರೂ ಅದ್ಧೂರಿ ಮರವಣಿಗೆ ಮಾಡಿಕೊಂಡು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮಾಡಾಳು ವಿರುಪಾಕ್ಷಪ್ಪ ಅವರ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ಪೊಲೀಸರು ಸುಸಪ್ರೀಂ ಕೋರ್ಟ್‌ ಮೊರೆ ಆದರೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಈ ಅರ್ಜಿಯನ್ನ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಪೀಠಕ್ಕೆ‌ವರ್ಗಾವಣೆ ಮಾಡುತ್ತಿದ್ದೇನೆ. ಆ ಪೀಠದಲ್ಲಿ ಮನವಿ ಮಾಡಿಕೊಳ್ಳಿ ಎಂದು ತಿಳಿಸಿದ್ದರು. ಇನ್ನು ಲೋಕಾಯುಕ್ತ ಪರ ವಕೀಲರಿಗೆ ನ್ಯಾ.ಕೌಲ್ ಪೀಠದಲ್ಲಿ ಮನವಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲವು ದಿನಗಳ ನಂತರ ಅರ್ಜಿ ಕೈಗೆತ್ತಿಕೊಂಡ ನ್ಯಾ.ಕೌಲ್‌ ಅವರು ಇದರಲ್ಲಿ ಯಾವುದೇ ತಕರಾರು ಇಲ್ಲ, ಹೈಕೋರ್ಟ್‌ನಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಪ್ರಕರಣವನ್ನು ಇಲ್ಲಿಗೆ ವರ್ಗಾವಣೆ ಮಾಡಿತ್ತು. 

ಮಾಡಾಳ್‌ ಕೇಸ್‌: ಸಿನಿಮಾ ರೀತಿ ಥರ್ಡ್‌ ಡಿಗ್ರಿ ಟ್ರೀಟ್ಮೆಂಟ್‌ ಕೊಡ್ಬೇಕಾ?, ವಕೀಲರಿಗೆ ನ್ಯಾಯಾಧೀಶರ ಪ್ರಶ್ನೆ

ಜಾಮೀನು ರದ್ದುಗೊಳಿಸಿದ ನ್ಯಾ. ನಟರಾಜನ್:  ಲೋಕಾಯುಕ್ತರಿಂದ ಅಕ್ರಮ ಹಣ ಸಂಪಾದನೆ ಪ್ರಕರಣದ ಎ1 ಆರೋಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಜಾಮೀನು ರದ್ದುಗೊಳಿಸುವಂತೆ ಸಲ್ಲಿಕೆ ಮಾಡಲಾದ ಅರ್ಜಿಯನ್ನು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ.ಕೆ.ನಟರಾಜನ್ ಅವರು ಶಾಸಕರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಕಳೆದ ಬಾರಿ ಬಂಧನದ ವಾರೆಂಟ್‌ ಇದ್ದರೂ 6 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ಕಣ್ತಪ್ಪಿಸಿಕೊಂಡು ಜಾಮೀನು ಸಿಕ್ಕಿದ ಮೇಲೆ ವಿರುಪಾಕ್ಷಪ್ಪ ಬಂದಿದ್ದರು. ಈಗಲೂ ಕೂಡ ಬಂಧನ ವಾರೆಂಟ್‌ ಹಿಡಿದು ಹೋಗುವ ಲೋಕಾಯುಕ್ತ ಪೊಲೀಸರಿಗೆ ಮಾಡಾಳು ವಿರುಪಾಕ್ಷಪ್ಪ ಸಿಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios