ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಅಂತ ಬಂದಾಗ ಯೂನಿಫಾರ್ಮ್‌ ಅನ್ನೋದು ಇರಬೇಕು ಎಂದು ಕೋಲಾರದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಹಿಜಾಬ್ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಸಂಬಂಧ  ಮಾತನಾಡಿದರು.

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಅ.13): ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಅಂತ ಬಂದಾಗ ಯೂನಿಫಾರ್ಮ್‌ ಅನ್ನೋದು ಇರಬೇಕು ಎಂದು ಕೋಲಾರದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಹಿಜಾಬ್ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಸಂಬಂಧ ಮಾತನಾಡಿದ ಅವರು, ವಿವಿಧ ಸಮುದಾಯ, ಧರ್ಮಗಳಿರುವ ದೇಶ ನಮ್ಮದು, ವಿವಿಧತೆ ಇದ್ದರೂ ಏಕತೆಯಲ್ಲಿ ಬದುಕುತ್ತಿರುವ ದೇಶ ಭಾರತ ಎಂದರು. 

ಅಲ್ಲದೆ ಒಂದು ಧರ್ಮದವರು ಮಾತ್ರ ಹಿಜಾಬ್ ಹಾಕಿಕೊಳ್ಳುತ್ತಾರೆ, ನಮಗೆ ಅವರ ಸಂಪ್ರದಾಯಗಳ ಕುರಿತು ಅಗೌರತೆ ಇಲ್ಲ, ಆದರೆ ಶಿಕ್ಷಣ ಅಂತ ಬಂದಾಗ ಯೂನಿಫಾಮಿಟಿ ಅನ್ನೋದು ಇರಬೇಕು ಎಂದು ಹೇಳಿದರು. ಅವರು ಹಿಜಾಬ್ ಬೇಕೆಂದು ಧರ್ಮಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಶಿಕ್ಷಣದ ಕೊರತೆಯಿಂದಾಗಿ ಹೀಗಾಗಿ ಅವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಇನ್ನು ನ್ಯಾಯಾಲಯ ಯಾವುದೇ ಆದೇಶ ಕೊಟ್ಟರು ಗೌರವಿಸಬೇಕು, ನ್ಯಾಯಾಲಯದ ಆದೇಶದ ವಿರುದ್ದ ಹೋದರೆ ನಾವು ದೇಶಕ್ಕೆ ಅಗೌರವ ತೋರಿಸಿದ ಹಾಗೆ ಹೀಗಾಗಿ ಹಿಜಾಬ್‌ಗಿಂತಲೂ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಬೇಕೆಂದರು. 

Kolar: ಅಕ್ರಮ ಜಾಗ ತೆರವುಗೊಳಿಸಿ ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ!

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ವಿಧಾ‌ನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕೋಲಾರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳ ಮತ್ತು ಹೆರಿಗೆ ವಾರ್ಡ್‌ಗಳಿಗೆ ಭೇಟಿ ನೀಡಿದ ತಂಡ, ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ ಸೇರಿದಂತೆ ಆಸ್ಪತ್ರೆಯಲ್ಲಿ ಸ್ವಚ್ಚತೆಯ ಕೊರತೆ ಕಂಡು ಬಂದ ಹಿನ್ನಲೆ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಇನ್ನು ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಸರ್ಕಾರದ ವತಿಯಿಂದ ನೀಡುವ ಆಹಾರ ಸರಿಯಾಗಿ ತಲುಪಿಲ್ಲದಿರುವುದು ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. 

ಹೆಚ್ಚುತ್ತಿರುವ ಕಾಂಗ್ರೆಸ್‌ ಶಾಸಕರ ದಬ್ಬಾಳಿಕೆ: ಬಿಜೆಪಿ ನಾಯಕರ ಆರೋಪ

ಅಲ್ಲದೆ ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆ ಹಾಗೂ ಸಿಬ್ಬಂದಿ ಕೊರತೆಯೂ ಸಹ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಕುಡಿಯುವ ನೀರು ಸೇರಿದಂತೆ ಸ್ವಚ್ಛತೆಯನ್ನ ಕಾಪಾಡಬೇಕೆಂದು ಎಚ್ಚರಿಕೆ ನೀಡಿದ್ರು. ಅಲ್ಲದೆ ನರಸಿಂಹ ರಾಜ ಒಡೆಯರ್ ಅವರ ಕುಟುಂಬ ಕರ್ನಾಟಕದಲ್ಲಿ ತಮ್ಮದೇ ಆದ ಕೊಡುಗೆಯನ್ನ ಕೊಟ್ಟಿದ್ದು ಆಸ್ಪತ್ರೆಯಲ್ಲಿ ಅವರ ಭಾವಚಿತ್ರವನ್ನ ಇಡುವುದರೊಂದಿಗೆ, ನರಸಿಂಹರಾಜ್ ಒಡೆಯರ್ ಎಂದು ನಾಪಫಲಕ ಹಾಕುವಂತೆ ಸೂಚಿಸಿದರು. ಇನ್ನು ಇದೇ ವೇಳೆ ಎಂಎಲ್‌ಸಿಗಳಾದ ತೇಜಸ್ವಿನಿ ಗೌಡ, ಹೇಮಲತಾ ಹಾಗೂ ಗೋವಿಂದರಾಜು ಅವರು ಹಾಜರಿದ್ದರು.