Kolar: ಅಕ್ರಮ ಜಾಗ ತೆರವುಗೊಳಿಸಿ ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ!
ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಮೇಲೆ ಪೊಲೀಸರ ಎದುರಲ್ಲೇ ಕಲ್ಲಿನಿಂದ ಹಲ್ಲೆಗೆ ಯತ್ನ ನಡೆದಿದೆ. ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಅ.12): ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಮೇಲೆ ಪೊಲೀಸರ ಎದುರಲ್ಲೇ ಕಲ್ಲಿನಿಂದ ಹಲ್ಲೆಗೆ ಯತ್ನ ನಡೆದಿದೆ. ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಹಶೀಲ್ದಾರ್ ದಯಾನಂದ್ ಅವರು ಗ್ರಾಮದ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಎಂದು ಪ್ರಶ್ನಿಸುವ ವೇಳೆ ಏಕಾಏಕಿ ಬಂದ ರವಿ ಸಿಂಗ್ ಅನ್ನೋ ವ್ಯಕ್ತಿ ಬೂದಿಕೋಟೆ ಪೊಲೀಸರ ಎದುರಲ್ಲೇ ತಹಶೀಲ್ದಾರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗುತ್ತಾನೆ.
ಸರ್ಕಾರಿ ಜಮೀನಿಗೆ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿರುವುದನ್ನು ತೆರವುಗೊಳಿ ಎಂದು ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಹೇಳಿದಕ್ಕೆ ರವಿ ಸಿಂಗ್ ಹಲ್ಲೆ ಮಾಡಲು ಮುಂದಾಗಿದ್ದಾನೆ ಅಂತ ಹೇಳಲಾಗ್ತಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ರವಿ ಸಿಂಗ್ ಕೈಯಲ್ಲಿದ್ದ ಕಲ್ಲು ಕಿತ್ತುಕೊಂಡು ಬಂಧನ ಮಾಡುವುದರಲ್ಲಿ ಯಶಸ್ವಿ ಆಗಿದ್ದಾರೆ. ಸಕನಹಳ್ಳಿ ಗ್ರಾಮದ ಸರ್ವೆ 29ರಲ್ಲಿ ರವಿ ಸಿಂಗ್ ಹಾಗೂ ಸುನಂದಮ್ಮ ಎಂಬುವರು ಅಕ್ರಮವಾಗಿ ಸರ್ಕಾರಿ ಜಮೀನಿಗೆ ಕಾಂಪೌಂಡ್ ನಿರ್ಮಿಸಿಕೊಂಡು ಇದ್ದರು.
ಹೆಚ್ಚುತ್ತಿರುವ ಕಾಂಗ್ರೆಸ್ ಶಾಸಕರ ದಬ್ಬಾಳಿಕೆ: ಬಿಜೆಪಿ ನಾಯಕರ ಆರೋಪ
ಈ ಸಂಬಂಧ ಜಿಲ್ಲಾ ಭೂಮಾಪನ ಅಧಿಕಾರಿಗಳಿಂದ ಸರ್ವೆ ನಡೆಸಿ ಒತ್ತುವರಿ ಸ್ಥಳವನ್ನು ತೆರವು ಮಾಡಲು ಒತ್ತುವರಿದಾರರಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು, ಆದ್ರೂ ಸಹ ಒತ್ತುವರಿದಾರರು ಸರ್ಕಾರಿ ಜಾಗವನ್ನು ತೆರವು ಮಾಡದ ಹಿನ್ನೆಲೆ ಸ್ಥಳಕ್ಕೆ ಖುದ್ದಾಗಿ ತಹಶೀಲ್ದಾರ್ ಭೇಟಿ ಕೊಟ್ಟು ತೆರುವು ಮಾಡಿಸಲು ಮುಂದಾಗಿದಕ್ಕೆ ರವಿ ಸಿಂಗ್ ಈ ಕೆಲಸ ಮಾಡಿದ್ದಾನೆ. ಸದ್ಯ ಬೂದಿಕೋಟೆ ಪೊಲೀಸರು ಬಂಧನ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೋಲಾರ: ದಯವಿಟ್ಟು ಯಾರು ಲವ್ ಮಾಡಬೇಡಿ ಅಂತ ಸ್ಟೇಟಸ್ ಹಾಕಿ ಆತ್ಮಹತ್ಯೆ
ಇನ್ನು ಕೆಲ ವರ್ಷಗಳ ಹಿಂದೆಯಷ್ಟೇ ಇದೆ ಬಂಗಾರಪೇಟೆ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಮೌಳಿ ಅನ್ನೋ ತಹಶೀಲ್ದಾರ್ ಜಮೀನು ವ್ಯಾಜ್ಯ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸುವಾಗ ಏಕಾಏಕಿ ತಹಸೀಲ್ದಾರ್ ಚಂದ್ರಮೌಳಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆ ಬಂಗಾರಪೇಟೆಯಲ್ಲಿ ತಹಶೀಲ್ದಾರ್ ಮೇಲೆ ಇಂದು ಹಲ್ಲೆಗೆ ಮುಂದಾಗಿದ್ದು,ಯಾವ ರೀತಿ ಕೆಲಸ ಮಾಡಬೇಕು, ಸರ್ಕಾರಿ ಜಮೀನು ಹೇಗೆ ಉಳಿಸಿಸಬೇಕು ಅನ್ನೋ ಭಯದಲ್ಲಿ ತಹಶೀಲ್ದಾರ್‌ಗಳು ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ.