Goolihatti Shekhar: ಜಿಲ್ಲೆಯಲ್ಲಿ ಪ್ರೋಟೋಕಾಲ್ ಸಂಸ್ಕೃತಿ ಹೆಚ್ಚಾಗುತ್ತಿದೆ
ಸಣ್ಣ ಪುಟ್ಟಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗಳಿಗೆಲ್ಲಾ ಪ್ರೋಟೋ ಕಾಲ್ ನೋಡ್ತಾ ಹೋದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಇತ್ತೀಚಿಗೆ ಜಿಲ್ಲೆಯಲ್ಲಿ ಪ್ರೋಟೋ ಕಾಲ್ ಸಂಸ್ಕೃತಿ ಹೆಚ್ಚಾಗಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
ಹೊಸದುರ್ಗ (ಜ.18): ಸಣ್ಣ ಪುಟ್ಟಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗಳಿಗೆಲ್ಲಾ ಪ್ರೋಟೋ ಕಾಲ್ (Protocol) ನೋಡ್ತಾ ಹೋದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಇತ್ತೀಚಿಗೆ ಜಿಲ್ಲೆಯಲ್ಲಿ ಪ್ರೋಟೋ ಕಾಲ್ ಸಂಸ್ಕೃತಿ ಹೆಚ್ಚಾಗಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದಕ್ಕೆಲ್ಲಾ ತಾಲೂಕಿನ ಅಧಿಕಾರಿಗಳು ಎದೆಗುಂದ ಬೇಡಿ, ನಾನಿದ್ದೇನೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಅಧಿಕಾರಿಗಳಿಗೆ ಆತ್ಮಸ್ಥೈರ್ಯ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಆಗಮಿಸಿ ತಾಲೂಕು ಆಡಳಿತದಿಂದ ನಡೆಯಬೇಕಿದ್ದ ಕಾರ್ಯಕ್ರಮವೊಂದು ಶಿಷ್ಠಾಚಾರ ಉಲ್ಲಂಘನೆಯಾಗಿದೆ ಎಂದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಎಸ್.ಲಿಂಗಮೂರ್ತಿ ಸಭೆಯಿಂದ ಹೊರನಡೆದ ನಂತರ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ನಂತರ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಆಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಹೊಸದುರ್ಗ-ಹಿರಿಯೂರು ರಸ್ತೆಯಲ್ಲಿಯೇ ನಡೆಯುತ್ತಿವೆ ಯಾಕೆ ಈ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
Children Death:ಬೆಳಗಾವಿ, ಚುಚ್ಚುಮದ್ದು ಪಡೆದ ಮಕ್ಕಳ ಸಾವಿನ ಸಮಗ್ರ ವರದಿ ಕೊಡಿ, ಬೊಮ್ಮಾಯಿ ಕಟ್ಟಪ್ಪಣೆ
ಇದಕ್ಕೆ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ರಸ್ತೆ ಪಕ್ಕದ ಜಮೀನಿನ ಮಾಲೀಕರು ಗಲಾಟೆಗೆ ಬರುತ್ತಾರೆ. ಹಾಗಾಗಿ ಕಾಮಗಾರಿಗೆ ನಡೆಸಲು ಆಗುತ್ತಿಲ್ಲ ಎಂದಾಗ ಶಾಸಕ ಗೂಳೀಹಟ್ಟಿಶೇಖರ್ ಪೊಲೀಸರನ್ನು ಇಟ್ಟುಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು. ಸಿಡಿಪಿಓ ಪವಿತ್ರ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ತಾಲೂಕಿನ 2 ಸಾವಿರ ಮಕ್ಕಳ ಜನನವಾಗಿದ್ದು ಅವುಗಳಲ್ಲಿ 3 ಮಕ್ಕಳು ಮಾತ್ರ ಸಾವನ್ನಪ್ಪಿವೆ. ತಾಲೂಕಿನಲ್ಲಿ 49 ಅಂಗನವಾಡಿ ಕೇಂದ್ರಗಳ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಪ್ರತಿ ತಿಂಗಳು 1.80 ಲಕ್ಷ ಹಣ ಬಾಡಿಗೆಗೆ ಹೋಗುತ್ತಿದೆ. ಹಾಗಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಬಿಇಓ ಜಯಪ್ಪ ಮಾತನಾಡಿ, ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಶೇ 99ರಷ್ಟುಲಸಿಕೆ ಹಾಕಲಾಗಿದೆ. ಇತ್ತೀಚಿಗೆ 6 ಶಾಲಾ ಮಕ್ಕಳು ಹಾಗೂ 7 ಜನ ಶಿಕ್ಷಕರು ಸೇರಿ ಒಟ್ಟು 13 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಸೂಕ್ತಕ್ರಮ ಕೈಗೊಳ್ಳಲಾಗಿದೆ ಎಂದರು. ವಿದ್ಯುತ್ ಲೈನ್ ಮಾಡಲು ರಸ್ತೆ ಬದಿ ಮರ ಕಡಿದರೆ ಪತ್ರಕರ್ತರು ಪ್ರಶ್ನಿಸುತ್ತಾರೆ. ಪ್ರಶ್ನೆ ಮಾಡದಂತೆ ನೀವೇ ಹೇಳಿ ಎಂದು ಶಾಸಕರಿಗೆ ಬೆಸ್ಕಾಂ ಎಇಇ ತಿರುಪತಿನಾಯ್‌್ಕ ಮನವಿ ಮಾಡಿದರು. ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಶ್ರೀನಿವಾಸರೆಡ್ಡಿ, ತಾಪಂ ಇಓ ವಿಶ್ವನಾಥ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ದಬ್ಬಾಳಿಕೆ ನಡೆಸುವುದನ್ನು ನಾನು ಸಹಿಸುವುದಿಲ್ಲ: ಜಿಲ್ಲೆಯಲ್ಲಿ ಯಾರೋ ಹಾಕಿದ್ದ ಅನುದಾನದ ಯಾವುದೋ ಸಣ್ಣ ಪುಟ್ಟಕೆಲಸಗಳ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಸದ ಹೆಸರನ್ನು ಕೆಳಗೆ ಮೇಲೆ ಹಾಕಲಾಗಿದೆ ಎಂದು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಯಾವುದೇ ಕಾಮಗಾರಿಗಳಿಗೆ ಚುನಾಯಿತ ಪ್ರತಿನಿಧಿಗಳ ಕೊಡುಗೆ ಇರಬೇಕು. ಆಗ ಅಲ್ಲಿ ತಂತಾನೆ ಗೌರವ ಸಿಗುತ್ತದೆ. ನಾನು ಅನುದಾನ ಹಾಕದ ಯಾವುದೇ ಕೆಲಸಗಳಿಗೆ ಕರೆದರೂ ನಾನು ಹೋಗುವುದಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.
Corinavirus: ಬೊಮ್ಮಾಯಿ ಸಭೆಯ ಪ್ರಮುಖ ನಿರ್ಧಾರಗಳು, ವೀಕೆಂಡ್ ಕರ್ಫ್ಯೂ ಕತೆ ಏನು?
ಕೆಡಿಪಿ ಸಭೆ ಆಡಳಿತಾತ್ಮಕ ಸಭೆಯಾಗಿದ್ದು, ಈ ಸಭೆಗೆ ಸಚಿವ ದರ್ಜೆಯ ಸ್ಥಾನಮಾನ ಇದೆಯೆಂದು ಯಾರು ಬೇಕಾದರೂ ಬರಲು ಅವಕಾಶವಿಲ್ಲ. ಸಭೆಯಲ್ಲಿ ನಿಗಮದ ಅಧ್ಯಕ್ಷರೊಬ್ಬರು ಬಂದು ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಾನು ಸಹಿಸುವುದಿಲ್ಲ. ಈ ಬಗ್ಗೆ ಸಭೆಯ ನಡಾವಳಿಯಲ್ಲಿ ದಾಖಲು ಮಾಡಿ ಸರ್ಕಾರಕ್ಕೆ ವರದಿ ನೀಡಿ ನನಗೊಂದು ಕಾಪಿ ಕೊಡಿ ಎಂದು ಶಾಸಕ ಗೂಳೀಹಟ್ಟಿಶೇಖರ್ ಇಓ ವಿಶ್ವನಾಥ್‌ಗೆ ತಾಕೀತು ಮಾಡಿದರು.