Corinavirus: ಬೊಮ್ಮಾಯಿ ಸಭೆಯ ಪ್ರಮುಖ ನಿರ್ಧಾರಗಳು, ವೀಕೆಂಡ್ ಕರ್ಫ್ಯೂ ಕತೆ ಏನು?

* ಕೊರೋನಾ  ಪರಿಸ್ಥಿತಿ ನಿಭಾಯಿಸಲು ಸಭೆ
* ವೀಕೆಂಡ್ ಕರ್ಫ್ಯೂಗೆ ವಿರೋಧದ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ
* ಶುಕ್ರವಾರ ಮತ್ತೊಂದು ಸುತ್ತಿನ ಸಭೆ
* ಆರೋಗ್ಯ ಸಚಿವ ಸುಧಾಕರ್ ಮಾಹಿತಿ

Karnataka weekend curfew extension Decision in next meeting Health Minister Dr K Sudhakar mah

ಬೆಂಗಳೂರು(ಜ. 17)  ಕೊರೋನಾ (Coronavirus) ಆತಂಕ ಮತ್ತು ಸದ್ಯದ ಪರಿಸ್ಥಿತಿ ನಿಯಂತ್ರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai)  ಕರೆದಿದ್ದ ಹೈವೋಲ್ಟೇಜ್ ಮೀಟಿಂಗ್ ಮುಕ್ತಾಯವಾಗಿದ್ದು ಮಹತ್ವದ  ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಪಾಸಿಟಿವ್ ಬಂದು ಹೋಮ್ ಐಸೋಲೆಷನ್ (Home isolation) ನಲ್ಲಿರುವರ ಮೇಲೆ ಹೆಚ್ಚಿನ‌ ನಿಗಾವಹಿಸಲು ಸೂಚನೆ ನೀಡಲಾಗಿದೆ ಎರಡನೇ ಡೋಸ್ ಕಡಿಮೆಯಾಗಿರುವ ಜಿಲ್ಲೆಗಳ ಜೊತೆ ವಿಡಿಯೋ ಸಂವಾದ ಮಾಡಿ ಲಸಿಕಾರಣ ಮಾಡಲು ಸೂಚಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳನ್ನ ಬಳಿಸಿಕೊಂಡು ಜನರಿಗೆ ಮಾರ್ಗದರ್ಶನ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

 ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಧರಿಸುವ ಬಗ್ಗೆ ಹೆಚ್ಚು ಪ್ರಚಾರ ಮಾಡಿ. ಹೇಗೆ ಸಲಹೆ ಕೋಟಿದೆ ಹಾಗೇ ಟೆಸ್ಟ್ ಮಾಡಿಕೊಂಡು ಹೋಗ್ತೀವಿ. ಬೇರೆ ನಗರಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ‌ ಇದೆ.. ಈ ಶುಕ್ರವಾರ ಮತ್ತೆ ಸಭೆ ಮಾಡ್ತೀವಿ. ಮುಂದಿನ ಕ್ರಮಕೈಗೊಳ್ಳುವ  ಶುಕ್ರವಾರ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದರು.

ಮದ್ಯ ಮಾರಾಟಕ್ಕೆ ಅವಕಾಶ ಕೊಡಿ, ಇಲ್ಲಾ ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ

ಹೋಟೆಲ್ ಉದ್ಯಮಿಗಳು ವೀಕೆಂಡ್ ಕರ್ಫ್ಯೂಗೆ ವಿರೋಧ ವಿಚಾರ ಸಹ ಚರ್ಚೆಯಾಯಿತು.   ಇದೆಲ್ಲದರ ಬಗ್ಗೆ ಶುಕ್ರವಾರ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸುಧಾಕರ್ ತಿಳಿಸಿದರು.

ನಮ್ಮಲ್ಲಿ ಗೊಂದಲ ಇಲ್ಲ: ನಮ್ಮಲ್ಲಿ  ಯಾವುದೇ ಗೊಂದಲ ಇಲ್ಲ. ನಾಲ್ಕು ಇಲಾಖೆಗಳು ಕೋವಿಡ್ ನಿರ್ವಹಣೆಗೆ ಸಂಬಂಧಿಸಿವೆ. 4 ಸಚಿವರಲ್ಲಿ ಯಾರಾದ್ರೂ ಮಾತಾಡಬಹುದು. ನಮ್ಮ ಹಿರಿಯ ಸಚಿವ ಅಶೋಕ್ ಅವರು ಇವತ್ತಿನ ಸಭೆ ಬಗ್ಗೆ ಮಾತಾಡಿದಾರೆ. ನಾನು ಕೆಲವು ಅಂಶಗಳ ಬಗ್ಗೆ ಮಾತಾಡಿದ್ದೇನೆ ಅಷ್ಟೇ. ಮಾಧ್ಯಮದವರು ಮಾತಾಡಲು ಹೇಳಿದ್ರು, ಮಾತಾಡಿದ್ದೇನೆ ಎಂದು ಸುಧಾಕರ್ ಹೇಳಿದರು. 

"

ಸಭೆಯ ಪ್ರಮುಖ ಅಂಶಗಳು

1.      ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಯಿತು.. ಹೆಚ್ಚು ಸಿಬ್ಬಂದಿ ನಿಯೋಜಿಸಲು ಸೂಚನೆ

2.     ಮುನ್ನೆಚ್ಚರಿಕೆ ಕ್ರಮಗಳಿಗೆ ಮೊದಲ ಆದ್ಯತೆ

3.     ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚಿಸಲಾಯಿತು. ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು.

4.     ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.

5.     ಔಷಧಿ ಕಿಟ್ ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚಿಸಿದರು.

6.     ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆಯಲು ಸಲಹೆ ನೀಡಿದರು.

7.      ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೇಕು. 

Latest Videos
Follow Us:
Download App:
  • android
  • ios