Hijab Controversy: ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸೋಮಣ್ಣ

*  ಸಿದ್ದರಾಮಯ್ಯ 'ಸುಡುಗಾಡು ಸಿದ್ದ' ಮಾಡಿದ್ದನ್ನ ನಾವು ಸರಿ ಮಾಡಿದ್ದೇವೆ
*  ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ
*  ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ
 

Minister V Somanna React on Hijab Controversy in Karnataka grg

ಮೈಸೂರು(ಫೆ.12):  ಹಿಜಾಬ್- ಕೇಸರಿ(Hijab-Saffron) ವಿವಾದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಂಘಟನೆಗಳಿಗೆ ವಸತಿ ಸಚಿವ ವಿ. ಸೋಮಣ್ಣ(V Somanna) ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರ್ ಯಾರು ಏನ್  ಮಾಡ್ತಿದ್ದಾರೆ ಅನ್ನೋದನ್ನ ಸರ್ಕಾರ ಗಂಭೀರವಾಗಿ  ಗಮನಿಸುತ್ತಿದೆ. ಇಲ್ಲಿ ಯಾರು ದೊಡ್ಡವರಲ್ಲ, ಎಲ್ಲರಗಿಂತ ದೇಶ ದೊಡ್ಡದು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದಂತಹ ಸಂಘಟನೆಗಳನ್ನು ಬಗ್ಗು ಬಡಿಯುವ ಕೆಲಸವನ್ನ ಸರ್ಕಾರ ಮಾಡಲಿದೆ ಅಂತ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಘಜಿನಿ ಮಹಮ್ಮದ್ 17 ಬಾರಿ ದಂಡೆತ್ತಿ ಬಂದ, ಅನೇಕ ರಾಜರು ದಾಳಿ ಮಾಡಿದರು. ಆದರೂ ಭಾರತ(India) ಭಾರತವಾಗಿಯೇ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ ಅಂತ ಹೇಳಿದ್ದಾರೆ. 

Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ

ಬಿಜೆಪಿ ಸರ್ಕಾರ(BJP Government) ಒಂದೂ ಮನೆ ನೀಡಿಲ್ಲ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸೋಮಣ್ಣ ಅವರು, ಸಿದ್ದರಾಮಯ್ಯ(Siddaramaiah) 'ಸುಡುಗಾಡು ಸಿದ್ದ' ಮಾಡಿದ್ದನ್ನ ನಾವು ಸರಿ ಮಾಡಿದ್ದೇವೆ. ಅವರ ಕಾಲದಲ್ಲಿ ಬರೀ ಘೋಷಣೆ ಆಗಿತ್ತು, ನಾವು ಮನೆ ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರವಾದ ಪ್ರಕ್ರಿಯೆಯಾಗಿದೆ. ರಾಜಕಾರಣಕ್ಕಾಗಿ(Politics) ನನ್ನ ಮೇಲೆ ಆರೋಪ ಮಾಡಬೇಡಿ. ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಅನ್ನುವುದಲ್ಲ ಜನರಿಗೆ ಮನೆ ಸಿಗಬೇಕು ಅಂತ ತಿಳಿಸಿದ್ದಾರೆ. 

ಸಿದ್ದರಾಮಯ್ಯ ಸಹ ಮನೆಯಿಂದು ತಂದು ಕೊಟ್ಟಿಲ್ಲ. ನಾನು ಸಹ ಮನೆಯಿಂದ ತಂದು ಕೊಡಲ್ಲ. ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್ ಮಾಡಿವುದನ್ನು ಬಿಡಿ ಅಂತ ಸಿದ್ದು ವಿರುದ್ಧ ಸೋಮಣ್ಣ ಗರಂ ಅಗಿದ್ದಾರೆ. 

ಹಿಜಾಬ್‌-ಕೇಸರಿ ಶಾಲು ವಿವಾದ, ಸಭೆ ಕರೆಯಿರಿ: ಸಭಾಪತಿ ಹೊರಟ್ಟಿ

ಹುಬ್ಬಳ್ಳಿ: ಹಿಜಾಬ್‌(Hijab) ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಕೂಡಲೇ ವಿವಿಧ ಪಕ್ಷಗಳ ಮುಖಂಡರು, ಪಾಲಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯಬೇಕು. ಈ ಮೂಲಕ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿSSLC) ವರೆಗೂ ಸಮವಸ್ತ್ರವಿದೆ. ಅದಕ್ಕೆ ಸಮಸ್ಯೆಯಿಲ್ಲ. ಪಿಯುಸಿ(PUC)ಹಾಗೂ ಕಾಲೇಜ್‌ಗಳಲ್ಲಿ(Colleges) ಸಮವಸ್ತ್ರಗಳ(Uniform) ಬಗ್ಗೆ ಆಯಾ ಕಾಲೇಜ್‌ಗಳು ನಿರ್ಧರಿಸುತ್ತವೆ. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೂಡಲೇ ಸಭೆ ಕರೆಯಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ನ್ಯಾಯಾಲಯದಲ್ಲಿ(Cpurt) ಪ್ರಕರಣವಿದೆ. ಅದು ತನ್ನ ತೀರ್ಪು ನೀಡುತ್ತದೆ. ಅದನ್ನು ಸರ್ಕಾರ ಅನುಷ್ಠಾನಗೊಳಿಸುತ್ತದೆ. ಆ ವಿಚಾರ ಬೇರೆ. ಕೋರ್ಟ್‌ ತೀರ್ಪು ಬರುವವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಕ್ಕೆ ಧಕ್ಕೆ ತರುವಂತಹ ಕೇಸರಿ ಶಾಲು, ಹಿಜಾಬ್‌ ಧರಿಸಬಾರದು ಎಂದರು. ಇದರಲ್ಲಿ ರಾಜಕೀಯವೂ(Politics) ನುಸುಳಿದೆ ಎಂಬ ಪ್ರಶ್ನೆಗೆ, ಇದು ಸಹಜ. ರಾಜಕೀಯ ನಡೆಯುತ್ತದೆ. ರಾಜಕೀಯವಾಗಿ ಬಳಸುವುದರಿಂದ ಏನೇನು ಅನಾಹುತಗಳಾಗುತ್ತವೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.

Hijab Row: ಮೌಲ್ವಿಗಳಿಂದ ಹಿಜಾಬ್‌ ಬಗ್ಗೆ ಶುಕ್ರವಾರದ ನಮಾಜ್ ಪ್ರವಚನ

ಬಿಜೆಪಿ ಸೇರುವ ಪ್ರಶ್ನೆ ಇಲ್ಲ:

ಸದ್ಯಕ್ಕೆ ಬಿಜೆಪಿ(BJP) ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ಹೊರಟ್ಟಿ, ಶಿಕ್ಷಕರ ಕ್ಷೇತ್ರಕ್ಕೆ ಆಯಾ ಪಕ್ಷ ಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಮೇ ತಿಂಗಳಲ್ಲಿ ಚುನಾವಣೆ ಇದೆ. ನನ್ನ ಚುನಾವಣೆ ವಿಚಾರದಲ್ಲಿ ಜಾತಿ ಪ್ರಶ್ನೆಯೇ ಬರುವುದಿಲ್ಲ. ಶಿಕ್ಷಕರ ಬೆಂಬಲ ನನಗಿದೆ. ಯಾವ ಪಕ್ಷಕ್ಕೂ ಹೋಗಬೇಕೆಂಬುದಿಲ್ಲ. ಕೆಲವರು ಸ್ನೇಹಿತರು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು. ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಇನ್ನೂ ಸಾಕಷ್ಟುಸಮಯಾವಕಾಶವಿದೆ. ಬಜೆಟ್‌ ಅಧಿವೇಶನದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಬಜೆಟ್‌ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪರಿಷತ್‌ನಲ್ಲಿ ಮಂಡನೆಯಾಗಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಮಸೂದೆಗಳು ಮಂಡನೆಯಾಗುತ್ತವೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪರಿಷತ್‌ನಲ್ಲಿ ಮಂಡನೆ ಆದರೂ ನೆಕ್‌ ಟು ನೆಕ್‌ ಫೈಟ್‌ ಇದೆ ಎಂದರು.
 

Latest Videos
Follow Us:
Download App:
  • android
  • ios