Asianet Suvarna News Asianet Suvarna News

ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್

ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ ತುಳುನಾಡಿನ ನೆಲದ ಸಂಸ್ಕೃತಿ ಇದರಲ್ಲಿ ಹುಳುಕನ್ನು ಹುಡುಕುವುದು ಸರಿ ಅಲ್ಲ ಎಂದು ಕಾಂತಾರ ಸಿನೆಮಾ ಬಗ್ಗೆ ವಿವಾದ ಹುಟ್ಟುಹಾಕಿರುವ ನಟ ಚೇತನ್ಸ ವಿರುದ್ದ ಸಚಿವ ಸುನೀಲ್ ಕುಮಾರ್ , ಶಾಸಕ ಕೋಟ್ಯಾನ್‌ ಸೇರಿ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

minister Sunil Kumar angry against actor chetan statement about kantara movie gow
Author
First Published Oct 20, 2022, 1:31 PM IST

ನಟ ಚೇತನ್ ಕುಮಾರ್ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದು, ಇದು ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ನಟ ಚೇತನ್ ಗೆ ಟಾಂಗ್ ನೀಡಿರುವ ಸಚಿವ ಸುನೀಲ್ ಕುಮಾರ್  , ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ  ಬಗ್ಗೆ ಮಾತನಾಡಬಾರದು. ದೈವ ನರ್ತನ ಹಿಂದೂ ಸಂಸ್ಕ್ರತಿ ಭಾಗ. ಇದು ನಮ್ಮ ಸಂಸ್ಕ್ರತಿ ಭಾಗ ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದಿದ್ದಾರೆ.

ಜೊತೆಗೆ ದೈವ ನರ್ತಕರಿಗೆ ತಿಂಗಳಿಗೆ ಎರಡು ಸಾವಿರ ಮಾಸಾಶನ ನೀಡಲು ತೀರ್ಮಾನ ಮಾಡಲಾಗಿದೆ. ಕನ್ನಡ ಮತ್ತು ಸಾಂಸ್ಕೃತಿಕಯಡಿ ಜಾನಪದ ಅಕಾಡೆಮಿಯಿಂದ ಮಾಸಾಶನ ಸಿಗಲಿದೆ. ಅರವತ್ತು ವರ್ಷ ಮೇಲ್ಪಟ್ಟವರು ಅರ್ಜಿ  ಇದಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರಿಗೆ ಮಾಸಾಶನ ನೀಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ದೈವದ ಕೊಡಿಯಡಿಯಲ್ಲಿ ಎಲ್ಲರೂ ಸಮಾನರು: ಶಾಸಕ ಕೋಟ್ಯಾನ್‌
ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ ತುಳುನಾಡಿನ ಮಣ್ಣಿನ ಸತ್ವ ಇದರಲ್ಲಿ ಹುಳುಕನ್ನು ಹುಡುಕಿ ಸಮಾಜದಲ್ಲಿ ಓಡಕನ್ನು ಉಂಟುಮಾಡಲು ಪ್ರಯತ್ನ ಪಡುತ್ತಿರುವ ಚೇತನ್‌ ಎಂಬ ವ್ಯಕ್ತಿ ಮೊದಲು ತಮ್ಮನ್ನು ತಾವು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿಕೆ ನೀಡಿದ್ದಾರೆ.

ನಮ್ಮ ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ದೈವಾರಾಧನೆ ಎಂಬುದು ಸರ್ವವ್ಯಾಪಿ ಮತ್ತು ಸರ್ವಮಾನ್ಯ ಇದರಲ್ಲಿ ಕುಟುಂಬ, ಸಮುದಾಯ, ಸಮಾಜ ಎಲ್ಲರೂ ಒಟ್ಟಿಗೆ ಪಾಲ್ಗೊಂಡು ದೈವದ ಕೃಪಾಶೀರ್ವಾದ ಬೇಡುತ್ತಾರೆ. ದೈವದ ಕೊಡಿಯಡಿಯಲ್ಲಿ ಎಲ್ಲರೂ ಸಮಾನರು. ಒಂದು ದೈವದ ಕೆಲಸ ನಡೆಯಬೇಕಾದರೆ ಎಲ್ಲ ಸಮುದಾಯದವರ ಪಾಲು ಅದರಲ್ಲಿರಬೇಕು. ಹಾಗಿರುವಾಗ ಎಲ್ಲಿಂದಲೋ ದೂರದ ಅಮೆರಿಕದಿಂದ ಬಂದು ತನ್ನನ್ನು ಮೇಧಾವಿ ಎಂದು ತಾನೇ ಪರಿಗಣಿಸಿ ಬಾಯಿಗೆ ಬಂದ ಹಾಗೇ ಹೇಳಿಕೆ ನೀಡುವ ಚೇತನ್‌ ಅವರ ಮಾತುಗಳಿಗೆ ಧಿಕ್ಕಾರವಿದೆ. ಕಾಂತಾರ ಚಿತ್ರದ ಮೂಲಕ ರಿಷಬ್‌ ಶೆಟ್ಟಿಫಿಲ್ಮ್‌$್ಸ ಇಡೀ ಜಗತ್ತಿಗೆ ತೌಳವ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ವಿಶ್ವಮಾನ್ಯ ಚಿತ್ರದಲ್ಲೂ ಹುಳುಕನ್ನು ಹುಡುಕಿ ಸಮಾಜದಲ್ಲಿ ಕೆಟ್ಟವಾತಾವರಣ ಸೃಷ್ಟಿಸಲು ಯತ್ನಿಸುವ ಚೇತನ್‌ನ ಮಾತುಗಳು ಹೇಯ ಮತ್ತು ಖಂಡನೀಯ ಎಂದು ತಿಳಿಸಿದ್ದಾರೆ.

ವಿವಾದವೇನು?: ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಬಂದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಗಳಿಂದನೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ನಟ ಚೇತನ್ ಕುಮಾರ್, ರಿಷಬ್ ಹೇಳಿದ ಹಾಗೆ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಚೇತನ್ ಹುಟ್ಟುಹಾಕಿದ ಚರ್ಚೆ ಈಗ ಇದು ತುಳುನಾಡಿನ ನೆಲದ ಸಂಸ್ಕೃತಿಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಚೇತನ್ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.  

ಭೂತಕೋಲ ಹಾಗೂ ಹಿಂದೂ ದೈವಾರಾಧನೆ ಪ್ರಶ್ನಿಸಿದ ನಟ ಚೇತನ್‌ ವಿರುದ್ಧ ಹೆಚ್ಚಾಯ್ತು ಆಕ್ರೋಶ!

 ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ. ತುಳುನಾಡಿನ ಪ್ರತೀ ಹಿಂದೂಗಳ ‌ಮನೆಯಲ್ಲೂ ದೈವಾರಾಧನೆ ನಡೆಯುತ್ತೆ. ಮೊದಲು ನಾವು ದೈವವನ್ನ ನಂಬೋದು, ಆ ಮೇಲೆ ದೇವರನ್ನ. ದೈವಾರಾಧನೆಯ‌ನ್ನ ನಾವು ಅಷ್ಟು ನೀಯತ್ತಾಗಿ ಮಾಡ್ತೇವೆ ಅಂತ ಕಾಂತಾರ ಬರಹಗಾರ ಹಾಗೂ ಸಿನಿಮಾದ 'ಬುಲ್ಲಾ' ಪಾತ್ರಧಾರಿ ಶನಿಲ್ ಗುರು ಪ್ರತಿಕ್ರಿಯೆ ನೀಡಿದ್ದಾರೆ.

 

 ನಾವು ನಾಗರ ಪೂಜೆ ಮಾಡ್ತೀವಿ, ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯ; ಚೇತನ್ ಹೇಳಿಕೆಗೆ ಉಪೇಂದ್ರ ರಿಯಾಕ್ಷನ್

ಭೂತಾರಾಧನೆ (bhutaaradhane), ನಾಗಾರಾಧನೆ (Nagaradhane) ಏನು ಅಂತ ಈ‌ ಮಣ್ಣಲ್ಲಿ ಇರೋ ನಮಗೆ ಗೊತ್ತು. ಸಿನಿಮಾದ ಭಾಗವಾಗಿ ಅಲ್ಲದೇ ದೈವದ ಆರಾಧಕನಾಗಿ ನಾನು ಹೇಳ್ತಾ ಇದೀನಿ. ದೈವಕ್ಕೆ ಹಿಂದೆ ಮುಂದೆ ಹೇಳಿದವರು ಅನುಭವಿಸಿದ ಉದಾಹರಣೆ ಇದೆ. ನಮ್ಮ ಭಾವನೆ ಬಗ್ಗೆ ಮಾತನಾಡಿದ್ದಾರೆ, ಇದರ ಬಗ್ಗೆ ಬೇಸರವಿದೆ.‌ ಸಿನಿಮಾ (cinema) ಜಾಗತಿಕವಾಗಿ ಹಿಟ್ ಆಗುವಾಗ ಈ ರೀತಿ ಮಾತನಾಡ್ತಿದಾರೆ. ಅವರು ಹೇಳಿರೋದಕ್ಕೆ ಅವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಇದು ಸಿನಿಮಾದ ಬಗ್ಗೆ ಅಪಸ್ವರ, ಇದು ದೈವದ ಬಗ್ಗೆ ಅಲ್ಲ. ಸಿನಿಮಾದ ಬಗ್ಗೆ ‌ಮಾತನಾಡಿ ಅವರು ಪ್ರಚಾರ ತೆಗೋತಿದಾರೆ ಅಂದಿದ್ದಾರೆ. 

Follow Us:
Download App:
  • android
  • ios