ನಮ್ಮೆಲ್ಲರ ತಾಯಿ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ಏಕೆ ಹೋರಾಟ..? ಡಿಕೆಶಿಗೆ ತಿರುಗೇಟು
- ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಸದ್ದು
- ಕೈ ನಾಯಕ ಡಿಕೆ ಶಿವಕುಮಾರ್‌ಗೆ ಸಚಿವ ಸುಧಾಕರ್ ತಿರುಗೇಟು
ಚಿಕ್ಕಬಳ್ಳಾಪುರ (ಆ.08): ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಸದ್ದಾಗುತ್ತಿದ್ದು, ಈ ವಿಚಾರವಾಗಿ ಕೈ ನಾಯಕ ಡಿಕೆ ಶಿವಕುಮಾರ್‌ಗೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ನಂದಿಗಿರಿಧಾಮದಲ್ಲಿಂದು ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಇಂದಿರಾ ಕ್ಯಾಂಟಿನ್ ಹೆಸರು ಬದಲಿಸಿದರೆ ಹೋರಾಟ ಮಾಡುತ್ತೇವೆ ಅಂತ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನಿಲ್ಲ ಎಂದಿದ್ದಾರೆ.
ನಾವು ಬಳೆ ತೊಟ್ಟು ಕೂತಿಲ್ಲ, ಮುಂದೆ ಏನಾಗುತ್ತೋ ನೋಡ್ಲಿ: ಡಿಕೆಶಿ ಸವಾಲು
ನಮ್ಮೆಲ್ಲರ ತಾಯಿ ಅನ್ನಪೂರ್ಣೇಶ್ವರಿ. ಇಂದಿರಾ ಗಾಂಧಿ ಸೇರಿದಂತೆ ಎಲ್ಲರಿಗೂ ಅನ್ನಪೂರ್ಣೇಶ್ವರಿ ತಾಯಿಯೇ ಹಾಗಾಗಿ ಅಂತಹ ಅನ್ನಪೂರ್ಣೇಶ್ವರಿ ಹೆಸರು ಇಡುವಂತೆ ಸಿಟಿ ರವಿ ಹೇಳಿದ್ದಾರೆ. ಇದರಲ್ಲಿ ಹೋರಾಟ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.
ನಮ್ಮೆಲ್ಲರ ತಾಯಿ ಹೆಸರು ಇಡುವಾಗ ಯಾಕೆ ಹೋರಾಟ ಮಾಡಬೇಕು? ನಮ್ಮ ಸರ್ಕಾರ ಅದರ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ದ್ಯಾನ್ ಚಂದ್ ಖೇಲ್ ರತ್ನ ಹೆಸರು ಬದಲಾವಣೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿ ಈಗಲಾದರೂ ದ್ಯಾನ್ ಚಂದ್ ಅವರ ಹೆಸರು ಇಟ್ಟಿದ್ದಾರೆ ಸಂತೋಷ. ಅಪ್ಪಟ ದೇಶಪ್ರೇಮಿ ದೈತ್ಯ ಆಟಗಾರನ ಹೆಸರು ಇಡುವುದು ತಪ್ಪಾಗಿ ಕಾಣುವುದು ಕ್ಷಮೆಗೆ ಅರ್ಹವಲ್ಲ ಎಂದರು.