ಲೋಕಸಭಾ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳನ್ನ ಹುಡುಕುವುದು ಪಕ್ಷಕ್ಕೆ ದೊಡ್ಡ ಸವಾಲು -ಸತೀಶ್ ಜಾರಕಿಹೊಳಿ

ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು.

Minister Satish jarkiholi reaction about Loksabha election 2024 at Belagavi rav

ಬೆಂಗಳೂರು (ಫೆ.3): ರಾಜ್ಯದ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರೂ ಗೆಲ್ಲಬಹುದಾದ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ವೀಕ್ಷಕರಿಗೆ ಸೂಚನೆ ನೀಡಿದ್ದಾರೆ. ದುರ್ಬಲ ಅಭ್ಯರ್ಥಿಗಳು ಇರುವ ಕ್ಷೇತ್ರಗಳಿಗೆ ಇತರೆ ಪಕ್ಷಗಳಿಂದ ನಾಯಕರನ್ನು ಕರೆತಂದು ಆದರೂ ಗೆಲುವ ಸಾಧಿಸುವ ಉದ್ದೇಶವಿದೆ ಎಂದು ಹೇಳಿದರು.

ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ‌ ದೇವಾಲಯ ತೊಳೆದ್ರು ; ಜಾತಿ ವ್ಯವಸ್ಥೆ ಬಗ್ಗೆ ಈಶ್ವರಾನಂದಪುರಿಶ್ರೀ ಬೇಸರ

ಜಿಲ್ಲಾ ಸಚಿವರು ಮತ್ತು ಸಚಿವರ ನೇತೃತ್ವದ ಜಿಲ್ಲಾ ವೀಕ್ಷಕರ ತಂಡಗಳು ತಮ್ಮ ತಮ್ಮ ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ಹೈಕಮಾಂಡ್ ಈ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಫೆ.10ರಂದು ಪಟ್ಟಿ ಕುರಿತು ಚರ್ಚೆ ನಡೆಸಲು ಸಭೆ ಕರೆಯುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಮೊದಲ ಪಟ್ಟಿ ಘೋಷಣೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಬೆಳಗಾವಿ ಜಿಲ್ಲೆಯ ಎರಡೂ ಸ್ಥಾನಗಳಲ್ಲಿ ಹಲವು ಆಕಾಂಕ್ಷಿಗಳಿದ್ದು, ಪ್ರತಿ ಸ್ಥಾನಕ್ಕೆ ಕನಿಷ್ಠ 2-3 ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ. ‘ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೇಂದ್ರ ನಾಯಕರು  ತೆಗೆದುಕೊಳ್ಳುತ್ತಾರೆಂದು ಹೇಳಿದರು.

ಚುನಾವಣೆ ವೇಳೆ ಮತದಾರರಿಗೆ ಉಚಿತ ಭಾಗ್ಯಗಳ ಆಮಿಷ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಸಿಎಂ ಡಿನ್ನರ್ ಮೀಟಿಂಗ್ ಕುರಿತು ಮಾತನಾಡಿ, ನಾಲ್ಕು ತಿಂಗಳ ಹಿಂದೆ ಊಟಕ್ಕೆ ಕರೆದಿದ್ದರು. ಲೋಕಸಭೆ ಅಭ್ಯರ್ಥಿಗಳ ಹೆಸರು ಕೊಡಬೇಕು. ಉಸ್ತುವಾರಿ ಜಿಲ್ಲೆ ಹಾಗೂ ತಮ್ಮ ಜಿಲ್ಲೆಯ ಹೆಸರು ಸಹ ಸಚಿವರು ಕೊಡಬೇಕು ಎಂದು ಸೂಚಿಸಿದ್ದರು. ನಿನ್ನೆ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಕೊಡಲಾಗಿದೆ. 15 ಕ್ಷೇತ್ರಗಳಲ್ಲಿ ಸಿಂಗಲ್ ನೇಮ್ ಇವೆ. ಆದ್ದರಿಂದ ಸಿಂಗಲ್ ನೇಮ್ ಘೋಷಣೆ ಮಾಡ್ತಾರೆ. ಚಿಕ್ಕೋಡಿ ಹೆಸರುಗಳು ಶಿಫಾರಸು ಆಗಿವೆ. ಅಂತಿಮವಾಗಿ ಸಿಎಂ, ಡಿಸಿಎಂ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios