ಹೊಸ ರೇಷನ್‌ ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಸಂತಸದ ಸುದ್ದಿ..!

ಕಳೆದ ಸರ್ಕಾರದ ಅವಧಿಯಲ್ಲೇ ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 57 ಸಾವಿರ ಕಾರ್ಡು ಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಮಾ.31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಈ ಕೆಲಸ ಮುಗಿದ ನಂತರ ಏಪ್ರಿಲ್‌ನಲ್ಲಿ ಮತ್ತೆ ಹೊಸ ಪಡಿತರ ಕಾರ್ಡುಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ 

Minister KH Muniyappa Talks Over New Ration Card in Karnataka grg

ವಿಧಾನಸಭೆ(ಫೆ.16):  ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ವರಿಗೆ ಸರ್ಕಾರ ಸಹಿ ಸುದ್ದಿ ನೀಡಿದ್ದು, ಬಾಕಿ ಇರುವ ಎಲ್ಲಾ 2.95 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಮಾ.31ರೊಳಗೆ ಎಲ್ಲ ಅರ್ಹರಿಗೂ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗು ವುದು. ನಂತರ ಏಪ್ರಿಲ್‌ನಲ್ಲಿ ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಕಲಾಪದಲ್ಲಿ ಪ್ರಶೋತ್ತರ ವೇಳೆ ನಾಲ್ಕು ಚಕ್ರ ವಾಹನವುಳ್ಳವರ ಪಡಿತರ ಚೀಟಿ ರದ್ದು ಪ್ರಕರಣ ಸಂಬಂಧ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೇಳಿದ ಪ್ರಶ್ನೆಗೆ ದನಿಗೂಡಿಸಿದ ವಿಪಕ್ಷನಾಯಕ ಆ‌ರ್.ಅಶೋಕ್‌ ಬಿಪಿಎಲ್‌ ಕಾರ್ಡ್ ಕೊಡುವುದನ್ನು ರಾಜ್ಯ ಸರ್ಕಾರನಿಲ್ಲಿಸಿದೆ. ಐದು ಗ್ಯಾರಂಟಿಗಳಿಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಬಾರದು ಎಂದು ಕೊಡುತ್ತಿಲ್ವಾ? ಎಂದು ಪ್ರಶ್ನಿಸಿದರು.

ಗುಡ್ ನ್ಯೂಸ್: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು 1 ದಿನದ ಅವಕಾಶ! ಯಾವಾಗ? ಇಲ್ಲಿದೆ ಮಾಹಿತಿ

ಇದಕ್ಕೆ ಉತ್ತರಿಸಿದ ಸಚಿವರು, ಕಳೆದ ಸರ್ಕಾರದ ಅವಧಿಯಲ್ಲೇ ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 57 ಸಾವಿರ ಕಾರ್ಡು ಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಮಾ.31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು. ಈ ಕೆಲಸ ಮುಗಿದ ನಂತರ ಏಪ್ರಿಲ್‌ನಲ್ಲಿ ಮತ್ತೆ ಹೊಸ ಪಡಿತರ ಕಾರ್ಡುಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದರು.

ಇನ್ನು, ನಯನಾ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದಲ್ಲಿ ಬಿಪಿಎಲ್ ಕಾರ್ಡು ಪಡೆಯಲು ನಾಲ್ಕು ಚಕ್ರ ಹೊಂದಿರಬಾರದು ಎಂಬ ಮಾನದಂಡ ಇತ್ತು. ಆ ವೇಳೆ ಮೂಡಿಗೆರೆಯಲ್ಲಿ 599 ಬಿಪಿಲ್ ಕಾರ್ಡುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಅದೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಆಗಿದೆ. ನಂತರ ಈ ಮಾನದಂಡವನ್ನು ಮತ್ತೆ ತೆಗೆದುಹಾಕಲಾಗಿದೆ. ಹಾಗಾಗಿ ಮುಂದೆ ಈ ಮಾನದಂಡದ ಕಾರಣಕ್ಕೆ ಎಪಿಎಲ್‌ಗೆ ಪರಿವರ್ತನೆಯಾಗಿರುವ ಕಾರ್ಡುಗ ಳನ್ನು ಬಿಪಿಎಲ್ ಆಗಿ ಪರಿವರ್ತಿಸಲಾಗುವುದು ಎಂದರು.

Latest Videos
Follow Us:
Download App:
  • android
  • ios