ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಜಾರಿ ಮಾಡುವುದಾಗಿ ಚೆಕ್‌ನಲ್ಲಿ ಸಹಿ ಮಾಡಿ ಭರವಸೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದವು ಎಂದು ಸಚಿವ ಎಚ್‌ಸಿ ಮಹದೇವಪ್ಪ ಹೇಳಿದರು.

ಚಾಮರಾಜನಗರ (ಮಾ.12):ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಜಾರಿ ಮಾಡುವುದಾಗಿ ಚೆಕ್‌ನಲ್ಲಿ ಸಹಿ ಮಾಡಿ ಭರವಸೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದವು ಎಂದು ಸಚಿವ ಎಚ್‌ಸಿ ಮಹದೇವಪ್ಪ ಹೇಳಿದರು.

ಚಾಮರಾಜನಗರದ ಹೆಗ್ಗವಾಡಿಯ ಅಂಬೇಡ್ಕರ್ ಮೈದಾನದಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ. ನರೇಂದ್ರ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಗೆದ್ದಿದ್ದಾರೆ. ಮಂಜುನಾಥ ಕೂಡ ಮುಂದಿನ ದಿನಗಳಲ್ಲಿ ನಮ್ಮ ಜೊತೆಗೆ ಇರ್ತಾರೆ ಎನ್ನುವ ಮೂಲಕ ಜೆಡಿಎಸ್ ಶಾಸಕ ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಸುಳಿವು ನೀಡಿದರು.

ಗ್ಯಾರಂಟಿ ಸಮಾವೇಶದ ಮಧ್ಯೆ ಹೊರನಡೆದ ಮಹಿಳೆಯರಿಗೆ ಗದರಿದ ಸಿಎಂ

ರಾಜ್ಯಸಭೆ ಚುನಾವಣೆ ವೇಳೆಯೂ ಜೆಡಿಎಸ್ ಗೆ ಮಂಜುನಾಥ್ ಕೈ ಕೊಟ್ಟು ಕಾಂಗ್ರೆಸ್ ಪರ ಮತ ಚಲಾಯಿಸ್ತಾರೆ ಅನ್ನೋ‌ ಗುಸು ಗುಸು ಹಬ್ಬಿತ್ತು. ಇದೀಗ ಗ್ಯಾರಂಟಿ ಸಮಾವೇಶದಲ್ಲಿ ಶಾಸಕ ಮಂಜುನಾಥ್ ನಮ್ಮ ಜೊತೆಗೆ ಇರ್ತಾರೆ ಎಂದಿರುವುದು ಕಾಂಗ್ರೆಸ್ ಸೇರುವುದು ಖಚಿತ ಎಂದಂತಾಗಿದೆ.

ವೇದಿಕೆ ಮೇಲೆ ಸಚಿವರಿಗೆ ಮುಖಭಂಗ:

ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಹೆಚ್‌ಸಿ ಮಹದೇವಪ್ಪ ಕ್ಷಣಕಾಲ ಮುಜುಗರಕ್ಕೀಡಾದ ಘಟನೆ ನಡೆಯಿತು.

ಕಾಂಗ್ರೆಸ್‌ ಉದ್ದೇಶಿಸಿ ದಲಿತ ಸಿಎಂ ಹೇಳಿಕೆ ನೀಡಿಲ್ಲ: ಸಚಿವ ಮಹದೇವಪ್ಪ

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ಬರ್ತಿದೆ ಅಲ್ವಾ? ಗೃಹಲಕ್ಷ್ಮೀ ಹಣ ಯಾರಾರು ಪಡೆಯುತ್ತಿದ್ದೀರಿ? ಹಣ ಪಡೆದ ಮಹಿಳೆಯರು ಕೈ ಎತ್ತಿ ಎಂದ ಸಚಿವ ಮಹದೇವಪ್ಪ. ಈ ವೇಳೆ ಗುಂಪಿನಲ್ಲಿ ನಿಂತ ಕೆಲ ಮಹಿಳೆಯರು ಇದೂವರೆಗೂ ಒಂದು ಪೈಸೆ ಹಣ ಬಂದಿಲ್ಲ ಎಂದು ಕೈಯಲ್ಲಿ ಆಧಾರ್‌ ಕಾರ್ಡ್ ತೋರಿಸಿದ ಮಹಿಳೆಯರು. ಮಹಿಳೆಯರ ಪ್ರತಿಕ್ರಿಯಿಗೆ ಸಚಿವ ಮಹದೇವಪ್ಪ ಮುಜುಗರ ಅನುಭವಿಸುವಂತಾಯಿತು.