ಗ್ಯಾರಂಟಿ ಸಮಾವೇಶದ ಮಧ್ಯೆ ಹೊರನಡೆದ ಮಹಿಳೆಯರಿಗೆ ಗದರಿದ ಸಿಎಂ
ಸಿಎಎ ಜಾರಿ ಮಾಡೋದು ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ. ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವುದನ್ನ ಅನಂತ್ ಕುಮಾರ್ ಹೆಗ್ಡೆ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಾಮರಾಜನಗರ (ಮಾ.12): ಚಾಮರಾಜನಗರದ ಹೆಗ್ಗವಾಡಿಯ ಅಂಬೇಡ್ಕರ್ ಮೈದಾನದಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ವೇಳೆ ಕಾರ್ಯಕ್ರಮದ ಮಧ್ಯೆ ಎದ್ದು ಹೋದ ಮಹಿಳೆಯರಿಗೆ ಸಿಎಂ ಗದರಿದ ಘಟನೆ ನಡೆಯಿತು.
'ಸಭೆ ಮುಗಿಯುವ ಮುನ್ನವೆ ಯಾಕೆ ಎದ್ದು ಹೋಗ್ತಾಯಿದ್ದೀರಾ ಕುಳಿತುಕೊಳ್ಳಿ ಎಂದು ಗದರಿದರು. ಈ ವೇಳೆ ಎದ್ದು ಹೋಗಿದ್ದ ಮಹಿಳೆಯರು ಸಿಎಂ ಗದರುತ್ತಿದ್ದಂತೆ ಮತ್ತೆ ಆಸನಗಳತ್ತ ವಾಪಸ್ ಬಂದು ಕುಳಿತ ಮಹಿಳೆಯರು. ಅನಂತರ, 'ಎದ್ದು ಹೋಗಬಾರದು ಕಾರ್ಯಕ್ರಮ ಇನ್ನೂ ಒಂದೂವರೆ ಗಂಟೆಯಲ್ಲಿ ಮುಗಿಯುತ್ತೆ ಯಾರೂ ಹೋಗ್ಬೇಡಿ ಎಂದ ಸಿಎಂ.
ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಮಿಸ್ ಸಾಧ್ಯತೆ, ಭಾವುಕರಾಗಿ ಮಾತನಾಡಿದ ಪ್ರತಾಪ್ ಸಿಂಹ!
ಸಿಎಎ ಜಾರಿ ಬಿಜೆಪಿ ಅಜೆಂಡಾ:
ಸಿಎಎ ಜಾರಿ ಮಾಡೋದು ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ. ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವುದನ್ನ ಅನಂತ್ ಕುಮಾರ್ ಹೆಗ್ಡೆ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವನು(ಅನಂತಕುಮಾರ ಹೆಗ್ಡೆ) ಆರ್ಡಿನರಿ ಫೆಲೋ ಅಲ್ಲ, ಐದು ಸಾರಿ ಎಂಪಿಯಾಗಿದ್ದವನು. ಕೇಂದ್ರದ ಮಂತ್ರಿಯಾಗಿದ್ದವನು. ಅವನ ಹೇಳಿಕೆ ಪಕ್ಷದ ಹೇಳಿಕೆ ಆಗದೇ ಇರುತ್ತಾ? ಹಿಂದೊಮ್ಮೆ ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡೋಕೆ ಎಂದಿದ್ದ, ಈಗ ಅದನ್ನೇ ಹೇಳ್ತಿದ್ದಾನೆ ಎಂದು ಸಂಸದ ಅನಂತಕುಮಾರ ಹೆಗ್ಡೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದವನ ಮೇಲೆ ಬಿಜೆಪಿಯವ್ರು ಕ್ರಮ ಕೈಗೊಂಡ್ರಾ? ಇದು ಏನನ್ನು ಸೂಚಿಸುತ್ತದೆ? 2/3 ಮೆಜಾರುಟಿ ಕೊಟ್ರೆ ಸಂವಿಧಾನ ಬದಲಾವಣೆ ಮಾಡ್ತೀವಿ ಎಂದಿದ್ದಾನೆ. ಹೀಗಾಗಿ ಸಂವಿಧಾನ ಬದಲಾವಣೆ ಮಾಡೋದು ಇದು ಬಿಜೆಪಿ ಪಕ್ಷದ ಹಿಡನ್ ಅಜೆಂಡಾ. ಈ ಬಿಜೆಪಿಗರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು. ಚುನಾವಣೆಗೋಸ್ಕರ ಸಿಎಎ ಜಾರಿ ಮಾಡಿದ್ದಾರೆ. ಧರ್ಮದ ಆಧಾರದ ಮೇಲೆ ಪೌರತ್ವ ಕೊಡೋದಕ್ಕೆ ನನ್ನ ವಿರೋಧವಿದೆ ಎಂದರು.
ಲಕ್ಷ್ಮಣ ಸವದಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
ತಮಿಳನಾಡಿಗೆ ಕದ್ದು ಮುಚ್ಚಿ ನೀರು ಬಿಟ್ಟಿರೋ ಆರೋಪ ಕುರಿತಂತೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ನೀರಿದ್ದರೇ ಅಲ್ವ ನೀರು ಬಿಡೋದಕ್ಕೆ? ನೀರು ಬಿಡ್ತಿದ್ದೇವೆ ಎಂಬುದು ಸುಳ್ಳು. ಒಂದು ಹನಿ ನೀರು ಕೊಡಲ್ಲ. ನಮಗೆ ಕುಡಿಯುವ ನೀರು ಇಟ್ಟುಕೊಳ್ಳದೆ ನೀರು ಕೊಡೋ ಪ್ರಶ್ನೆನೆ ಇಲ್ಲ. ಕೇಂದ್ರದವರು, ತಮಿಳುನಾಡಿನವರು ಕೇಳಿದ್ರೂ ನೀರು ಕೊಡಲ್ಲ. ಇದೆಲ್ಲ ಬಿಜೆಪಿಯವರು ಸೃಷ್ಟಿಸಿದ ಸುಳ್ಳು ಎಂದು ಕಿಡಿಕಾರಿದರು. ಇದೇ ವೇಳೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾವನೋ ದಾರಿಯಲ್ಲಿ ಹೋಗೋನು ಹೇಳಿದ್ರೆ ಪ್ರಯೋಜನವಿಲ್ಲ. ಯದುವೀರ್‌ಗೆ ನಾನು ಬಿಜೆಪಿಯಿಂದ ನಿಲ್ಲೋಕೆ ಹೇಳಿದ್ನಾ? ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾನೆ ಎಂದು ಬಿಜೆಪಿಯವರು ಬದಲಾವನೆ ಮಾಡುತ್ತಿರಬಹುದು. ಯದುವೀರ್ ಹೆಸರು ಇನ್ನೂ ಬಂದಿಲ್ಲ, ಅದು ನನಗೆ ಗೊತ್ತಿಲ್ಲ ಎಂದರು. ಬಿಜೆಪಿ ಯಾರನ್ನ ಅಭ್ಯರ್ಥಿ ಮಾಡ್ತಾರೋ ಅದು ಪ್ರಶ್ನೆನೇ ಅಲ್ಲ, ನಾವು ಬಿಜೆಪಿಯನ್ನ ಸೋಲಿಸಬೇಕು ಅಷ್ಟೇ ಎಂದರು.