Asianet Suvarna News Asianet Suvarna News

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ಮೂರು ಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಸುಳಿವು ಕೊಟ್ಟಿದ್ದಾರೆ.

Minister Dr Sudhakar hints Karnataka  Lock down Over Covid19 rbj
Author
Bengaluru, First Published Apr 11, 2021, 2:41 PM IST

ಬೆಂಗಳೂರು, (ಏ.11): ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಇಂದು (ಭಾನುವಾರ) ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರ ಜೊತೆ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ತಕ್ಷಣವೇ ಎಚ್ಚೆತ್ತುಕೊಂಡು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ ಲಾಕ್‍ಡೌನ್ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಲಾಕ್ ಡೌನ್ ವಿಚಾರವಾಗಿ ತಜ್ಞರು ಅಭಿಪ್ರಾಯ ಸಲ್ಲಿಸಿದ್ದಾರೆ. ಅವರು ವರದಿ ಕೊಡುವಂತೆ ಹೇಳಿದ್ದೇನೆ. ವರದಿಯನ್ನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಕ್ರಮ ಕೈಗೊಳ್ಳುತ್ತೇವೆ. ಅಧಿಕೃತ ವರದಿ ಬರುವವರೆಗೂ ನಾನು ಹೇಳುವುದು ತಪ್ಪಾಗಲಿದೆ ಎಂದರು.

ಏ.27ರ ವೇಳೆಗೆ ರಾಜ್ಯದಲ್ಲಿ ನಿತ್ಯ 20,000 ಕೇಸ್‌!

ಮಹಾರಾಷ್ಟ್ರದಲ್ಲಿ ಸಾರ್ವಜನಿಕರು ನಿಯಮಗಳನ್ನು ಪಾಲನೆ ಮಾಡದ ಕಾರಣ ಶುಕ್ರವಾರದಿಂದ ಸೋಮವಾರದವರಗೆ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಅಲ್ಲಿ ಒಂದೇ ಒಂದೂ ವಾಹನ ಸಂಚಾರಕ್ಕೂ ಅವಕಾಶ ಕೊಟ್ಟಿಲ್ಲ. ನಿಮ್ಮನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಅದೇ ರೀತಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ನಿಮ್ಮ ಕರ್ತವ್ಯ ಎಂದು ಸಲಹೆ ಮಾಡಿದರು.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾಗುವಂತ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರೆ ಸಾಮಾಜಿಕ ಅಂತ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಶುಚಿತ್ವ ಕಾ

ಮೇ ತಿಂಗಳಲ್ಲಿ 2ನೇ ಅಲೆ ಹೆಚ್ಚಳ
ಎರಡನೇ ಅಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಹೇಗೆ ನಿಯಂತ್ರಣ ಮಾಡಬೇಕು. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆಯಾಗಿದೆ. ಮುಂದೆ ಸೋಂಕಿತರ ಸಂಖ್ಯೆ ಎಷ್ಟು ಹೆಚ್ಚಾಗಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಪರಿಣಿತರು ಮಾಹಿತಿ ನೀಡಿದ್ದಾರೆ. ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಸಲಹೆಗಳನ್ನು ನೀಡುವುದಿಲ್ಲ. ಗುಂಪು ಸೇರುವ ಕಾರ್ಯಕ್ರಮಕ್ಕೆ ಕಡಿವಾಣ ಹಾಕಬೇಕು. ಅನವಶ್ಯಕವಾಗಿ ಜನ ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ಸುಧಾಕರ್ ಹೇಳಿದರು.

80 ರಿಂದ 120 ದಿನ ಅಲೆ ಇರಲಿದೆ. ಮೇ ತಿಂಗಳಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸೋಂಕು ಮೇ ಮೊದಲ ವಾರದಲ್ಲಿ ಹೆಚ್ಚಿದ್ದು, ಕೊನೆಯಲ್ಲಿ ಕಡಿಮೆಯಾಗಬಹುದು. ಮನೆಯಲ್ಲಿ ಐಸೋಲೇಟ್ ಆಗುವವರ ಮೇಲೆ ನಿಗಾ ಇಡಬೇಕಾಗಿದೆ ಹೇಳಿದರು.

Follow Us:
Download App:
  • android
  • ios