Asianet Suvarna News Asianet Suvarna News

ಯತ್ನಾಳರೇ ಕೋವಿಡ್ ಭ್ರಷ್ಟರ ಮಾಹಿತಿಯನ್ನ ಜಸ್ಟಿಸ್ ಕುನ್ನಾ ತನಿಖಾ ಆಯೋಗಕ್ಕೆ ಕೊಡಿ: ಸಚಿವ ದಿನೇಶ್‌ ಗುಂಡೂರಾವ್

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಕೋವಿಡ್ ಭ್ರಷ್ಟಾಚಾರ ನಡೆದಿರುವ ಕುರಿತ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು ಜಸ್ಟಿಸ್ ಕುನ್ನಾ ತನಿಖಾ ಆಯೋಗಕ್ಕೆ ನೀಡಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

Minister Dinesh Gundu rao said covid scam information give to Justice Kunna Commission sat
Author
First Published Jan 10, 2024, 3:44 PM IST

ಬೆಂಗಳೂರು (ಜ.10): ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಕೋವಿಡ್ ಭ್ರಷ್ಟಾಚಾರ ನಡೆದಿರುವ ಕುರಿತ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು ಜಸ್ಟಿಸ್ ಕುನ್ನಾ ತನಿಖಾ ಆಯೋಗಕ್ಕೆ ನೀಡಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್‌-19 ನಿರ್ವಹಣೆ ಕಾರ್ಯದಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ತಮ್ಮ ಬಳಿಯಿರುವ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಬದಲು ನ್ಯಾಯಮೂರ್ತಿ ಕುನ್ನಾ ಅವರ ತನಿಖಾ ಆಯೋಗಕ್ಕೆ ಕೊಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಸಲಹೆ ನೀಡಿದ್ದಾರೆ.

ಕೋವಿಡ್ ನಲ್ಲಿ ಕಾಯಕ ಮರೆತು ಕಳಂಕದ ಕೆಲಸ ಮಾಡಿದ ಭ್ರಷ್ಟರ ಮಾಹಿತಿಯನ್ನ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೇಂದ್ರ ನಾಯಕರಿಗೆ ನೀಡಿದರೆ ಏನು ಪ್ರಯೋಜನವಿಲ್ಲ. ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ರೂ. ಕೋವಿಡ್ ಭ್ರಷ್ಟಾಚಾರ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ನಡೆದಿರುತ್ತಾ ಎಂದು ಪ್ರಶ್ನಿಸಿದ್ದಾರೆ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ಮಾಹಿತಿ, ದಾಖಲೆಗಳನ್ನ ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದಿದ್ದಾರೆ.

ಉದ್ಯಮಿಗಳಿಂದ 2000 ಕೋಟಿ ವಸೂಲಿಗೆ ತಂಡ: ಸಚಿವ ಖಂಡ್ರೆ

ಬಸವೇಶ್ವರರ ಅನುಯಾಯಿ ಎಂದು ಹೇಳಿಕೊಳ್ಳುವ ಬಸವನಗೌಡ ಯತ್ನಾಳ್ ಅವರು ಅಂತರಂಗ ಶುದ್ದಿ ಬಹಿರಂಗ ಶುದ್ದಿ‌ ಎರಡನ್ನೂ ಪಾಲಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ಕೇಂದ್ರ ನಾಯಕರಿಗಷ್ಟೇ ಮಾಹಿತಿ ನೀಡಿದ್ದೇನೆ ಎಂದರೆ, ಅದರಿಂದ ಪ್ರಯೋಜನವಿಲ್ಲ. ಕೋವಿಡ್ ವೇಳೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಶ್ರೇಷ್ಠ ಸಂದೇಶವನ್ನ ಪಾಲಿಸಬೇಕಿತ್ತು. ಆದರೆ, ಜನರ ಜೀವ ಉಳಿಸಲು ಹೋರಾಟ ನಡೆಯುತ್ತಿದ್ದಾಗ ಬರೀ ಕಳಂಕದ ಕೆಲಸದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಬಸವನಗೌಡರೇ ಜಗಜ್ಯೋತಿ ಬಸವೇಶ್ವರರು ಹೇಳಿದಂತೆ ಅಂತರಂಗ ಶುದ್ದಿಯ ಜೊತೆಗೆ ಬಹಿರಂಗ ಶುದ್ದಿಯೂ ಮುಖ್ಯ. ಕೋವಿಡ್ ವೇಳೆ ನಿಮ್ಮ ಬಿಜೆಪಿ ಸರ್ಕಾರ ಬಸವೇಶ್ವರರ ಶ್ರೇಷ್ಠ ಸಂದೇಶ ಕಾಯಕವೇ ಕೈಲಾಸ ಎಂಬ ವೈಚಾರಿಕತೆಯನ್ನ ಪಾಲಿಸಬೇಕಿತ್ತು.‌ ಆದರೆ, ಜನರ ಜೀವ ಉಳಿಸುವ ಹೋರಾಟ ನಡೆಯುತ್ತಿದ್ದಾಗ, ಬರೀ ಕಳಂಕದ ಕಾರ್ಯದಲ್ಲೇ ನಿರತರಾಗಿದ್ದು ಅತ್ಯಂತ ಅಮಾನವೀಯ.

ಬಿಎಸ್‌ವೈ ಅವಧಿಯಲ್ಲಿ 40,000 ಕೋಟಿ ರೂ. ಕೋವಿಡ್‌ ಹಗರಣ: ತನಿಖೆ ಮಾಡದೇ ಕೈತೊಳೆದುಕೊಂಡ್ರಾ ಆರೋಗ್ಯ ಸಚಿವರು!

ನಾಲ್ಕು ಗೋಡೆಯ ಮಧ್ಯೆ ನಿಮ್ಮ ಕೇಂದ್ರ ನಾಯಕರಿಗೆ ಭ್ರಷ್ಟಾಚಾರ ವಿವರಿಸಿದರೆ ಸಾಕೇ. ನಿಮ್ಮ ಪಕ್ಷದ ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ನಡೆದಿದೆಯಾ? ಇದರಲ್ಲಿ ಕೇಂದ್ರದವರಿಗೆ ಪಾಲು ಹೋಗಿಲ್ಲವೇ..? ಅದರ ಫಲ ನಿಮ್ಮ ಕಣ್ಮುಂದೆ ಕಾಣ್ತಿಲ್ಲವೇ..? 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ಬಗ್ಗೆ ನಿಮ್ಮ ಕೇಂದ್ರ ನಾಯಕರಿಗೆ ವಿವರಣೆ ನೀಡುವ ಬದಲು ನಾವು ರಚಿಸಿರುವ ತನಿಖಾ ಆಯೋಗದ ಮುಂದೆ ಬಂದು ಮಾಹಿತಿ ನೀಡಿ. ನಿಮ್ಮ ಬಳಿ ಇರುವ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ನೇತೃತ್ವದ ತನಿಖಾ ಆಯೋಗಕ್ಕೆ ಕೊಡಿ ಎಂದು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios