ಉಡಾಫೆ ಮಾತು ಬಿಟ್ಟು ಜನ ಕೊಟ್ಟಿರೋ ಅಧಿಕಾರ ಸರಿಯಾಗಿ ನಿಭಾಯಿಸಲಿ: ಹೆಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ
ಸಿದ್ದರಾಮಯ್ಯ ಪರ 136 ಶಾಸಕರು, ಹೈಕಮಾಂಡ್ ಜೊತೆಗೆ ಕೆಲ ವಿಪಕ್ಷ ನಾಯಕರು ಸಿಎಂ ಪರ ಮಾತನಾಡುತ್ತಿದ್ದಾರೆ. ಹೀಗಾಗಿ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣ (ಅ.5): ಸಿದ್ದರಾಮಯ್ಯ ಪರ 136 ಶಾಸಕರು, ಹೈಕಮಾಂಡ್ ಜೊತೆಗೆ ಕೆಲ ವಿಪಕ್ಷ ನಾಯಕರು ಸಿಎಂ ಪರ ಮಾತನಾಡುತ್ತಿದ್ದಾರೆ. ಹೀಗಾಗಿ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸುಮ್ಮನೆ ಕೇಳಲಾಗಲ್ಲ. ಎಫ್‌ಐಆರ್ ದಾಖಲಾದವರು ರಾಜೀನಾಮೆ ಕೊಡುತ್ತಾರಾ ? ಎಂದು ಜಿ.ಟಿ.ದೇವೇಗೌಡ ಹೇಳಿದ್ದರು. ಈಗಲಾದರೂ ವಿಜಯೇಂದ್ರ, ಆರ್.ಅಶೋಕ್, ಕುಮಾರಸ್ವಾಮಿ ಅವರಿಗೆ ಅರ್ಥ ಆಗಿದೆ. ಕೇಸು, ಎಫ್‌ಐಆರ್ ಯಾರ್‍ಯಾರ ಮೇಲೆ ಇದೆ ಅರ್ಥ ಮಾಡಿಕೊಳ್ಳಲಿ ಎಂದರು.
ಸಿದ್ದರಾಮಯ್ಯರ ಪರೋಕ್ಷವಾಗಿ ಪ್ರಭಾವವಿದೆ ಎಂದು ದೂರು ಕೊಟ್ಟಿದ್ದಾರೆ. ನೇರವಾಗಿ ಅದರ ಹೊಣೆ ಹೊತ್ತ ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಇದರಲ್ಲಿದ್ದಾರೆ. ಅವರ ಹೆಸರಗಳು ತಳುಕು ಹಾಕಿಕೊಳ್ಳುತ್ತಿಲ್ಲ. ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಕೇಳಿ ಬರುತಿದೆ. ವಿಕ್ಷದ ನಾಯಕರೇ ಹೇಳಿದ ಮೇಲೆ ಅವರ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇಬ್ಬರೂ ಹುಚ್ಚರು: ಎನ್‌ಎಸ್ ಬೋಸರಾಜು ಕಿಡಿ
ಚಾಮುಂಡೇಶ್ವರಿ ಬಳಿ ಸಿಎಂ ಸಿದ್ದರಾಮಯ್ಯ ಅವರು ಒಂದು ವರ್ಷ ಕಾಲಾವಕಾಶ ಕೇಳಿದ ವಿಚಾರವಾಗಿ ಮುಂದಿನ ವರ್ಷ ದಸರಾ ನಿರ್ವಿಘ್ನವಾಗಿ ಮಾಡಲು ಅವಕಾಶ ಕೊಡವ್ವ ಎಂದು ಕೇಳಿಕೊಂಡಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಾನು ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಈಗ ಸಿಎಂ ಬದಲಾವಣೆ ಚರ್ಚೆ ಇಲ್ಲ. ಆರ್.ಅಶೋಕ್ ಮೊದಲು ರಾಜೀನಾಮೆ ಕೊಡಲಿ. ಅವರ ವಿಚಾರಕ್ಕೂ ಸಿದ್ದರಾಮಯ್ಯ ವಿಚಾರಕ್ಕೂ ವ್ಯತ್ಯಾಸವಿದೆ. ಮೊದಲು ವಿಪಕ್ಷ ನಾಯಕತ್ವಕ್ಕೆ ರಾಜೀನಾಮೆ ಕೊಡಲಿ. ಕಾನೂನು ಏನಿದೆ ಅದರ ಪ್ರಕಾರ ನಮ್ಮ ನಾಯಕರು ನಡೆದುಕೊಳ್ಳುತ್ತಾರೆ. ಅಶೋಕ್ ಏನಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.
50 ಕೋಟಿಗೆ ಜೀವ ಬೆದರಿಕೆ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲು!
ಚನ್ನಪಟ್ಟಣ ಉಪಚುನಾವಣೆಗೆ ಹಣಕ್ಕೆ ಬೇಡಿಕೆ ವಿಚಾರವಾಗಿ, ಎಫ್‌ಐಆರ್ ಆಗಿದೆ. ತನಿಖೆ ಆಗಲಿ. ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ. ನಮಗೂ ಗೊತ್ತಿದೆ. ಜನ ಕೊಟ್ಟಿರುವ ಜವಾಬ್ದಾರಿ ಕುಮಾರಸ್ವಾಮಿ ನಿಭಾಯಿಸಲಿ. ಉಡಾಫೆ ಮಾತುಗಳನ್ನು ಕುಮಾರಸ್ವಾಮಿ ಬಿಡಲಿ ಎಂದರು.