ಬೆಂಗಳೂರು, (ಜೂನ್. 24): ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚು ಹರಡುತ್ತಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ಎನ್ನುವ ಸುದ್ದಿ ಹರಿದಾಡುತ್ತಿದೆ.

"

ಮತ್ತೊಮ್ಮೆ ಲಾಕ್‌ಡೌನ್‌ ಮಾಡುವ ವಿಷಯದ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು (ಬುಧವಾರ) ಮಾಧ್ಯಮಗಳಿಗೆ  ಪ್ರತಿಕ್ರಿಯಿಸಿದ್ದು, ಲಾಕ್ ಡೌನ್ ವ್ಯಾಪಕವಾದ ಚರ್ಚೆ ಆಗುತ್ತಿದೆ, ಸಿಎಂ‌ ಕೂಡ ಎಲ್ಲ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದಾರೆ. ಲಾಕ್ ಡೌನ್ ಓಪನ್ ಆದ್ಮೇಲೆ ಏನೆಲ್ಲಾ ನಡೆಯುತ್ತಿದೆ ಅನ್ನೋದನ್ನ ಕೂಡ ಗಮನಿಸಲಾಗ್ತಿದೆ. ಮತ್ತೆ ಲಾಕ್‌ ಡೌನ್ ಮಾಡಬೇಕಾ ಅಥವಾ ಬೇಡವೇ ಅನ್ನೋದನ್ನ ಸಿಎಂ ನಿರ್ಧರಿಸುತ್ತಾರೆ ಎಂದು ಹೇಳಿದರು. 

ಮತ್ತೆ ಲಾಕ್‌ಡೌನ್‌ ಸುಳಿವು ಕೊಟ್ಟ ಸಚಿವ ಶ್ರೀರಾಮುಲು

ಲಾಕ್ ಡೌನ್ ಓಪನ್ ಆದ್ಮೇಲೆ ಎಲ್ಲಾ ಚಟುವಟಿಕೆಗಳು ಆರಂಭ ಆಗಿದ್ದು, ಆರ್ಥಿಕ ಚಟುವಟಿಕೆ ಆಕ್ಟಿವ್ ಆಗಿವೆ. ಈಗ ಲಾಕ್ ಡೌನ್ ಮಾಡಬೇಕು ಎಂದರೆ ಕೊರೋನಾ ಮ್ಯಾನೆಜ್ಮೆಂಟ್ ಕೂಡ ನೋಡಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಾ? ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕಾ ಅಥವಾ ಟಾಸ್ಕ್ ಫೋರ್ಸ್ ಕಮೀಟಿ ಜೊತೆ ಚರ್ಚೆ ಮಾಡಬೇಕಾ ಎನ್ನುವುದರ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಮತ್ತೊಮ್ಮೆ ಲಾಕ್‌ಡೌನ್‌ ಮಾಡಬೇಕಾ ಎಂಬ ವಿಷಯ ಸಾಮಾಜಿಕ ಜಾಲಕತಾಣಗಳಲ್ಲಿ ಮಾತ್ರವಲ್ಲ ಸರ್ಕಾರದ ಮಟ್ಟದಲ್ಲೂ ಸಹ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 

ಇನ್ನು ಈ ಬಗ್ಗೆ ನಾಳೆ (ಗುರುವಾರ) ನಡೆಯಲಿರುವ ಸಚಿವ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದ್ದು, ಏನು ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"