Asianet Suvarna News Asianet Suvarna News

ಪಾರ್ಲಿಮೆಂಟ್ ಮಾದರಿ ಅಂಬೇಡ್ಕರ್ ಕಂಚಿನ ಭವ್ಯ ಪ್ರತಿಮೆ ಅನಾವರಣಗೊಳಿಸಿದ ಸಚಿವ ಆನಂದ್ ಸಿಂಗ್!

ವಿಜಯನಗರ ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾರ್ಲಿಮೆಂಟ್ ಮಾದರಿ ಕಂಚಿನ ಭವ್ಯ ಪ್ರತಿಮೆಯನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ರಾತ್ರಿ ಅನಾವರಣಗೊಳಿಸಿದರು. 

Minister Anand Singh Unveils Dr BR Ambedkar Bronze Statue At Hospete gvd
Author
First Published Mar 25, 2023, 8:45 AM IST

ಹೊಸಪೇಟೆ (ಮಾ.25): ವಿಜಯನಗರ ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾರ್ಲಿಮೆಂಟ್ ಮಾದರಿ ಕಂಚಿನ ಭವ್ಯ ಪ್ರತಿಮೆಯನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ರಾತ್ರಿ ಅನಾವರಣಗೊಳಿಸಿದರು. ಡಾ.ಬಾಬಾ ಸಾಹೇಬ್ ರ ಪ್ರತಿಮೆ ಅನಾವರಣಗೊಳ್ಳುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಜೈ ಭೀಮ ಎಂದು ಜಯಘೋಷ ಮೊಳಗಿಸಿದರು. 

ಭೀಮ‌ ನಮನ ಸಲ್ಲಿಸಿದ ಜನರು, ಜೈ ಭೀಮ ಎಂದು ಜಯಘೋಷ ಮೊಳಗಿಸಿದರು. ಪಂಜಾಬ್ ಹೊರತುಪಡಿಸಿದರೆ ದೇಶದಲ್ಲೇ ಎರಡನೇ ಈ ಮಾದರಿ ಪ್ರತಿಮೆಯಾಗಿದ್ದು, ರಾಜ್ಯದಲ್ಲೇ ಮೊದಲನೆಯದ್ದಾಗಿದೆ.  ಪಾರ್ಲಿಮೆಂಟ್ ಕಟ್ಟಡದ ಮೇಲೆ 12.6 ಅಡಿ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಗೊಳಿಸಿದ ಆನಂದ ಸಿಂಗ್ ಅವರು ಎಲ್ಲರಿಗೂ ಭೀಮ ನಮನ ಸಲ್ಲಿಸಿದರು. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಸ್ವಂತ ಹಣದಲ್ಲಿ‌ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. 

ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ: ಕಾನೂನು ತಜ್ಞರು ಏನಂತಾರೆ?

ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಕಲಾಕೇಂದ್ರಗಳ ಮಕ್ಜಳು ಅಂಬೇಡ್ಕರ್ ಕುರಿತು ನೃತ್ಯ ಪ್ರದರ್ಶಿಸಿದರು.‌ ಕಲಾವಿದರು ಭೀಮ ಗೀತೆಗಳನ್ನು ಹಾಡಿದರು. ತಮಟೆ ಬಾರಿಸುವ ಮೂಲಕ‌ ವೇದಿಕೆ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಮಾಜಿ ಸಚಿವ ಎಚ್.‌ಆಂಜನೇಯ ಚಾಲನೆ ನೀಡಿದರು. ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ,  ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೌರ ಕಾರ್ಮಿಕರಾದ ಜೋಗಳಪ್ಪ, ತಿಮ್ಮಕ್ಕ ಅವರ ಪಾದಪೂಜೆಯನ್ನು ಯುವ ಮುಖಂಡ ಸಿದ್ದಾರ್ಥ ಸಿಂಗ್ ಮಾಡುವ ಮೂಲಕ ಗೌರವಿಸಿದರು.

ಬಿಎಸ್‌ವೈ ನಿವಾಸದಲ್ಲಿ ಅಮಿತ್‌ ಶಾ ಉಪಾಹಾರ: ರಾಜಕೀಯ ಸಂದೇಶ ರವಾನೆ

ಮಾಜಿ ಸಚಿವ ಎಚ್. ಆಂಜನೇಯ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ, ಹುಡಾ ಅಧ್ಯಕ್ಷ ಅಶೋಕ ಜೀರೆ,  ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಮಾನಯ್ಯ, ತಾರಿಹಳ್ಳಿ ಜಂಬುನಾಥ, ವೆಂಕಟೇಶ, ಮೇಶಾಕ್ ಅಂಕಾಳಿ, ಟೈಗರ್ ಪಂಪಣ್ಣ, ನಿಂಬಗಲ್ ರಾಮಕೃಷ್ಣ, ಸಿದ್ದಾರ್ಥ ಸಿಂಗ್, ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್, ಉತ್ತಂಗಿ ಕೊಟ್ರೇಶ, ಶ್ರೀನಿವಾಸ, ಮಾರೆಣ್ಣ, ಭರತಕುಮಾರ, ಯಲ್ಲಪ್ಪ ಭಂಡಾರದಾರ, ಟಿಂಕರ್ ರಫೀಕ್‌ ಮತ್ತಿತರರಿದ್ದರು.

Follow Us:
Download App:
  • android
  • ios