earthquake in Bengaluru rural: ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ದಿಢೀರ್ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3ರ ತೀವ್ರತೆ ದಾಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. .

Earthquake Near Bengaluru: ಬೆಂಗಳೂರುರಾಜಧಾನಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆ 2 ನಿಮಿಷಕ್ಕೆ ಕೆಲವು ಸೆಕೆಂಡುಗಳ ಕಾಲ ಭೂಕಂಪಿಸಿದ ಅನುಭವಾಗಿದೆ. ರಿಕ್ಟರ್ ಮಾಪಕದಲ್ಲಿ 3ರ ತೀವ್ರತೆಯ ಕಂಪನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವುದೇ ಹಾನಿಯಿಲ್ಲ

ಭೂಕಂಪನದ ತೀವ್ರತೆ ಕಡಿಮೆಯಿತ್ತು. ಹೀಗಾಗಿ, ಯಾವುದೇ ಹಾನಿ ಸಂಭವಿಸಿಲ್ಲ. ತಿಮ್ಮೋಜನಹಳ್ಳಿ ಗ್ರಾಮದಿಂದ ಉತ್ತರಕ್ಕೆ 500 ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಸುತ್ತಲಿನ 20-30 ಕಿ.ಮೀ ದೂರದವರೆಗೂ ಕಂಪನದ ಅನುಭವ ಆಗಿದೆ. ಭೂಮಿ ಮೇಲ್ಮೈನಿಂದ 10 ಕಿ.ಮೀ. ಆಳದಲ್ಲಿ ಭೂಕಂಪನ ಸೃಷ್ಟಿಯಾಗಿದೆ.

ಇದೊಂದು ಕಡಿಮೆ ತೀವ್ರತೆಯ ಭೂಕಂಪ. ಇಂತಹ ಭೂಕಂಪನ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಭೂಕಂಪನದ ಕೇಂದ್ರಬಿಂದು ‘ಭೂಕಂಪನ ವಲಯ-2’ರಲ್ಲಿ ಬರುತ್ತದೆ. ಈ ವಲಯದಲ್ಲಿ ತೀವ್ರತೆಯ ಪ್ರಮಾಣ ಕಡಿಮೆ ಇರುತ್ತದೆ. ಅಪಾಯವೂ ಕಡಿಮೆ. ಹೀಗಾಗಿ, ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.