ಬೇಸಿಗೆಯ ರಜೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ: ಬರಪೀಡಿತ ಶಾಲೆಗಳಿಗೆ ಅನ್ವಯ

ರಾಜ್ಯದ 223 ಬರ ಪೀಡಿತ ತಾಲೂಕುಗಳ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 
 

Mid day meal for children even during summer vacation only for drought affected schools gvd

ಬೆಂಗಳೂರು (ಏ.07): ರಾಜ್ಯದ 223 ಬರ ಪೀಡಿತ ತಾಲೂಕುಗಳ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏ.11ರಿಂದ ಮೇ 28ರವರೆಗೆ ಒಟ್ಟು 41 ದಿನಗಳ ಕಾಲ ಮಧ್ಯಾಹ್ನ 12.30ರಿಂದ 2 ಗಂಟೆವರೆಗೆ ಊಟ ನೀಡಲಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಬೆಳಗ್ಗೆ 10 ಗಂಟೆಯಿಂದ 11.30 ಅವಧಿಯಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲಾ ಮಕ್ಕಳ ಮಾಹಿತಿ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿಬೇಕು. 

ಬಿಸಿಯೂಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಒಪ್ಪಿಗೆ ಪತ್ರ ಪಡೆಯಬೇಕು. ಬಿಸಿಯೂಟ ಕೇಂದ್ರಗಳಾಗಿ ಗುರುತಿಸಿದ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ, ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ.

ರಾಜ್ಯಕ್ಕೆ ಕೇಂದ್ರದಿಂದ 10 ವರ್ಷದಲ್ಲಿ 71.85 ಲಕ್ಷ ಕೋಟಿ ಅನುದಾನ ನಷ್ಟ: ಸಚಿವ ಕೃಷ್ಣ ಬೈರೇಗೌಡ

ಪೌಷ್ಟಿಕಾಂಶದ ಕೊರತೆ ನೀಗಿಸಲು ರಾಗಿ ಮಾಲ್ಟ್‌ ಯೋಜನೆ ಜಾರಿ: ಇಂದಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಇರುವುದನ್ನು ಗಮನಿಸಿದ ಕರ್ನಾಟಕ ಸರ್ಕಾರವು ತನ್ನ ಮಹತ್ವಾಕಾಂಕ್ಷೆ ಯೋಜನೆಯಾದ ಅಕ್ಷರ ದಾಸೋಹದ ಮೂಲಕ ವಿದ್ಯಾರ್ಥಿಗಳಿಗೆ ಅತೀ ಪೌಷ್ಟಿಕಾಂಶ ಹೊಂದಿದ ರಾಗಿಯಿಂದ ತಯಾರಿಸಿದ ರಾಗಿ ಮಾಲ್ಟನ್ನು ನೀಡುವ ಯೋಜನೆಗೆ ಚಾಲನೆ ನೀಡಿದ್ದು ಬಿಸಿ ಊಟ ಸೇವಿಸುವ ಮಕ್ಕಳಿಗೆ ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್. ಪಾಟೀಲರವರು ಹೇಳಿದರು.

ಸಿ.ಇ.ಎಸ್. ವಿದ್ಯಾಸಂಸ್ಥೆಯ ಅಧೀನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ, ಕರ್ನಾಟಕ ಸರಕಾರದ ಮಹಾತ್ವಕಾಂಕ್ಷಿ ಬಿಸಿಯೂಟದ ರಾಗಿಮಾಲ್ಟ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇದನ್ನು ಸವಿಯುವುದರೊಂದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢ ದೇಹ ಹಾಗೂ ಮನಸ್ಸನ್ನು ಹೊಂದಿ ಅಧ್ಯಯನದಲ್ಲಿ ತೊಡಗಬೇಕೆಂದು ವಾರದಲ್ಲಿ ೩ ದಿವಸ ಮಕ್ಕಳಿಗೆ ರಾಗಿ ಮಾಲ್ಟ್‌ ನೀಡುವ ಯೋಜನೆಯನ್ನು ಜಾರಿಗೆ ತಂದಿರುವುದು ಅತ್ಯಂತ ಉಪಯುಕ್ತವಾಗಿದೆ. ಇಂತಹ ಯೋಜನೆಗಳಿಂದ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.

ನಾಲ್ಕೂವರೆ ವರ್ಷಗಳ ಬಳಿಕ ವಿಶ್ವನಾಥ್, ಎಚ್.ಡಿ.ಕುಮಾರಸ್ವಾಮಿ ಭೇಟಿ

ಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಮಕ್ಕಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರಕಾರದ ಈ ವಿನೂತನ ಯೋಜನೆ ಜಾರಿಯಾಗಿದ್ದು, ಮಕ್ಕಳು ದೈಹಿಕವಾಗಿ ಸಬಲರಾಗಿ ಬೆಳೆಯಲು ಸಹಕಾರಿಯಾಗಿದೆ. ಇಂತಹ ಯೋಜನೆಗಳಿಂದ ಮಕ್ಕಳು ಪ್ರಯೋಜನ ಪಡೆದು ತಮ್ಮ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕೆಂದರು. ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯಾಯ ಪಿ.ಎಂ. ಡಮ್ಮಳ್ಳಿ, ಆರ್.ಹೆಚ್. ಪೂಜಾರ, ಬಿ.ವ್ಹಿ. ಸನ್ನೇರ, ಸಹಶಿಕ್ಷಕರುಗಳಾದ ಜಿ.ಎಸ್. ಗಂಗಾಧರ, ಕೆ.ಬಿ. ಜಗದೀಶ. ಪಿ.ಎಂ. ಸಂತೋಷಕುಮಾರ, ಜಿ.ಹೆಚ್. ಮತ್ತೂರ, ಎಂ.ಸಿ. ಮುದಿಗೌಡ್ರ, ಜಯಶ್ರೀ ಹಿರೇಮಠ, ಎಸ್.ಸಿ.ಗೀತಾವಾಣಿ, ಉಮಾ ಚನ್ನಗೌಡ್ರ, ಕುಮಾರ ಶಿರಳ್ಳಿ, ಎಸ್.ಎಸ್. ಸಣ್ಣಕ್ಕಿ, ಎಸ್.ಸಿ. ಯಡಚಿ, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios