Asianet Suvarna News Asianet Suvarna News

ನಾಲ್ಕೂವರೆ ವರ್ಷಗಳ ಬಳಿಕ ವಿಶ್ವನಾಥ್, ಎಚ್.ಡಿ.ಕುಮಾರಸ್ವಾಮಿ ಭೇಟಿ

ಸರಿಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.
 

Lok Sabha Election 2024 HD Kumaraswamay Meet H Vishwanath gvd
Author
First Published Apr 7, 2024, 11:36 AM IST

ಕೆ.ಆರ್.ನಗರ (ಏ.07): ಸರಿಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಕೆ.ಆರ್.ನಗರದ ವಿಶ್ವನಾಥ್ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಕುಮಾರಸ್ವಾಮಿ, 'ವಿಶ್ವಣ್ಣ' ಎನ್ನುತ್ತಾ ವಿಶ್ವನಾಥ್ ಜೊತೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಬಳಿಕ, ಸುದ್ದಿಗೋಷ್ಠಿ ನಡೆಸಿದರು.ವಿಶ್ವನಾಥ್ ಮಾತನಾಡಿ, ರಾಜಕಾರಣ ನಿಂತ ನೀರಲ್ಲ. 

ಅದು ನಿರಂತರವಾಗಿ ಹರಿಯುವ ಗಂಗೆ. ನನಗೆ, ಕುಮಾರಸ್ವಾಮಿಗೆ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ನಡುವೆ ಈ ಹಿಂದೆ ಕೆಲವು ವಿಚಾರಗಳಲ್ಲಿ ದೊಡ್ಡ ಸಂಘರ್ಷವೇ ನಡೆದು ಹೋಗಿತ್ತು. ಈಗ ದೇಶದ ಹಿತ ಮತ್ತು ಜನರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬೇಕಿದ್ದು, ಎಲ್ಲರೂ ಒಂದಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು. ಕುಮಾರಸ್ವಾಮಿ ಗೆಲುವಿಗೆ ಶ್ರಮಿಸುವೆ ಎಂದರು.

3 ಸಂಸದರಿಂದ 5 ವರ್ಷದಲ್ಲಿ 55.88 ಕೋಟಿ ಅನುದಾನ: ಬಿಪ್ಯಾಕ್‌ನಿಂದ ವರದಿ

ಎಸ್. ಬಸವರಾಜು ಕಾರ್ಯಕ್ಕೆ ಮೆಚ್ಚುಗೆ: ನಗರದ ಪ್ರತಿಷ್ಠಿತ ವ್ಯಸನಮುಕ್ತ ಕೇಂದ್ರವಾದ ಬಸವಮಾರ್ಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದರು. ನಂತರ ಅವರು ಮಾತನಾಡಿ, ಬಸವರಾಜು ಅವರ ನೇತೃತ್ವದಲ್ಲಿ ಬಸವಮಾರ್ಗ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಶ್ರೇಷ್ಠ ಕಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆ 38ಕ್ಕೂ ಹೆಚ್ಚಿನ ಉಚಿತ ಕ್ಯಾಂಪ್ ಮಾಡಿದೆ. ಎಲ್ಲರೂ ನಮ್ಮವರೇ ಎನ್ನುವ ಆಶಯ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವ ಕೆಲಸಕ್ಕೆ ಶುಭವಾಗಲಿ, ರಾಜ್ಯದ ಎಲ್ಲ ಕುಟುಂಬಗಳು ಸುಖ, ಶಾಂತಿಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಸವಮಾರ್ಗ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ ನಾಮಪತ್ರ ಮಾನ್ಯ, 14 ತಿರಸ್ಕೃತ!

ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಸಿ.ಎನ್. ಮಂಜೇಗೌಡ, ಜೆಡಿಎಸ್ ನಾಯಕರಾದ ರವಿ ಕುಮಾರ್, ಪ್ರೇಮ ಶಂಕರೇಗೌಡ, ಬಸವಮಾರ್ಗ ಸಂಸ್ಥಾಪಕರಾದ ಎಸ್. ಬಸವರಾಜು, ಇಂಡಿಯನ್ ಟಿವಿ ಎಂಡಿ ಎಸ್. ವೆಂಕಟೇಶ್ ಕುಮಾರ್, ಸಿಇಒ ಎಸ್. ರಾಜು, ಅಭಿಮಾನಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios