Asianet Suvarna News Asianet Suvarna News

ಏಷ್ಯಾನೆಟ್‌ ಸುವರ್ಣನ್ಯೂಸ್‌ ಡಿಜಿಟಲ್‌ನ ನಿರುಪಮಾ ಕೆಎಸ್‌ಗೆ ಮೆಟಾ ಫೆಲೋಶಿಪ್

ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಡಿಜಿಟಲ್‌ನ ಹಿರಿಯ ಸಹಾಯಕ ಸಂಪಾದಕ ಸ್ಥಾನದಲ್ಲಿರುವ ನಿರುಪಮಾ ಕೆಎಸ್‌ ಅವರು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಫೆಲೋಶಿಪ್‌ಅನ್ನು ಬುಧವಾರ ಪಡೆದುಕೊಂಡಿದ್ದಾರೆ.
 

META Fellowship to Nirupama KS of Asianet Suvarna news Digital san
Author
First Published Nov 30, 2022, 10:32 PM IST

ನವದೆಹಲಿ (ನ.30): ಫ್ಯಾಕ್ಟ್‌ಚೆಕಿಂಗ್ ಹಾಗೂ ನ್ಯೂಸ್‌ ವೆರಿಫಿಕೇಶನ್‌ಗಾಗಿ  ಏಷ್ಯಾನೆಟ್‌ ಸುವರ್ಣನ್ಯೂಸ್‌ ಡಿಜಿಟಲ್‌ನ ಹಿರಿಯ ಸಹಾಯಕ ಸಂಪಾದಕರಾಗಿರುವ ನಿರುಪಮಾ ಕೆ.ಎಸ್‌  ಮೆಟಾ ಸಂಸ್ಥೆಯ ಫೆಲೋಶಿಪ್‌ ಪಡೆದಿದ್ದಾರೆ. ಮೆಟಾ ಸಂಸ್ಥೆಯು ಜಾಗರಣ್‌ ಹಾಗೂ ಇಂಟರ್ನೆಟ್‌ & ಮೊಬೈಲ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ  (IAMAI) ಸಹಯೋಗದಲ್ಲಿ ಈ ಫೆಲೋಶಿಪ್‌ ಪ್ರದಾನ ಮಾಡಿದೆ.  ಡಿಜಿಟಲ್‌ ನ್ಯೂಸ್‌ ಯುಗದಲ್ಲಿ ಸುದ್ದಿಯ ಫ್ಯಾಕ್ಟ್‌ಚೆಕಿಂಗ್ ಹಾಗೂ ವೆರಿಫಿಕೇಶನ್‌ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಫೆಲೋಶಿಪ್‌ ಮಾಹಿತಿಯ ನೈಜ ಸ್ವರೂಪ, ನಿಖರತೆಯನ್ನು ಕಾಪಾಡುವ, ಡಿಜಿಟಲ್‌ ಟೂಲ್ಸ್‌ಗಳ ಬಳಕೆ ಹಾಗೂ ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವ ತರಬೇತಿ ಒಳಗೊಂಡಿದೆ. ನಿರುಪಮಾ ಕೆ.ಎಸ್‌ ಜೊತೆಗೆ ಏಷ್ಯಾನೆಟ್‌ ಹಿಂದಿ ನ್ಯೂಸ್‌ಪೋರ್ಟಲ್‌ನ ಸಂಪಾದಕರಾಗಿರುವ ಸುಶೀಲ್‌ ಕುಮಾರ್‌ ಕೂಡಾ ಈ ಫೆಲೋಶಿಪ್‌ಗೆ ಭಾಜನರಾಗಿದ್ದಾರೆ. ದೆಹಲಿಯಲ್ಲಿರುವ ಮೆಟಾ ಸಂಸ್ಥೆಯ ಕಚೇರಿಯಲ್ಲಿ ಫೆಲೋಶಿಪ್‌ ಪ್ರದಾನ ಸಮಾರಂಭ ನಡೆಯಿತು.

Follow Us:
Download App:
  • android
  • ios