Asianet Suvarna News Asianet Suvarna News

ಸಾಲ ಕೊಟ್ಟ ಉದ್ಯಮಿಗೆ ಎಂ.ಬಿ.ಪಾಟೀಲ್‌ 8 ಎಕರೆ ಭೂಮಿ ಮಂಜೂರು, ಲಜ್ಜೆಗೆಟ್ಟವರು ಯಾರು?: ಛಲವಾದಿ

ಬಾಗಮನೆ ಡೆವಲಪರ್ಸ್‌ಗೆ ಎಸ್‌ಇಝಡ್‌ನಲ್ಲಿ ಹೈಟೆಕ್ ಏರೋಸ್ಪೇಸ್ ಪಾರ್ಕಿಗೆ ಎಂಟು ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಸುಮಾರು 160 ಕೋಟಿ ರುಪಾಯಿ ಮೌಲ್ಯದ ಜಾಗ ಎಕರೆಗೆ 10 ಕೋಟಿ ರುಪಾಯಿ ಸಾಲ ನೀಡಿರುವುದಕ್ಕೆ ಪ್ರತಿಯಾಗಿ ಲಜ್ಜೆಗೆಟ್ಟವರು ಎಂದು ಟೀಕಿಸಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ 
 

MB Patil allotted 8 acres of land to the businessman who gave the loan says Chalavadi Narayanaswamy grg
Author
First Published Sep 3, 2024, 2:05 PM IST | Last Updated Sep 3, 2024, 2:05 PM IST

ಬೆಂಗಳೂರು(ಸೆ.03):  ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಚುನಾವಣಾ ವೆಚ್ಚಕ್ಕಾಗಿ ಬಾಗಮನೆ ಡೆವಲಪರ್ಸ್ ಅವರಿಂದ 4 ಕೋಟಿ ರು. ಸಾಲ ಪಡೆದು, ಇದಕ್ಕೆ ಪ್ರತಿಯಾಗಿ ಎಂಟು ಎಕರೆ ಜಾಗವನ್ನು ಮಂಜೂರು ಮಾಡಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದ್ದಾರೆ.  ನನ್ನನ್ನು ಶೆಡ್ ನಾರಾಯಣಸ್ವಾಮಿ ಎಂದರು. ಈಗ ಅವರೇನು? ಅವರಷ್ಟು ಕೀಳು ಮಟ್ಟಕ್ಕೆ ನಾನು ಇಳಿ ಯಲ್ಲ ಎಂದೂ ಛಲವಾದಿ ತೀಕ್ಷ್ಮವಾಗಿ ಹೇಳಿದ್ದಾರೆ. 

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಾಗಮನೆ ಡೆವಲಪರ್ಸ್‌ಗೆ ಎಸ್‌ಇಝಡ್‌ನಲ್ಲಿ ಹೈಟೆಕ್ ಏರೋಸ್ಪೇಸ್ ಪಾರ್ಕಿಗೆ ಎಂಟು ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಸುಮಾರು 160 ಕೋಟಿ ರುಪಾಯಿ ಮೌಲ್ಯದ ಜಾಗ ಎಕರೆಗೆ 10 ಕೋಟಿ ರುಪಾಯಿ ಸಾಲ ನೀಡಿರುವುದಕ್ಕೆ ಪ್ರತಿಯಾಗಿ ಲಜ್ಜೆಗೆಟ್ಟವರು ಎಂದು ಟೀಕಿಸಿದರು. 

ನಿಮ್ಮ ವಿಷಯ ಹೊರಹಾಕಿದರೆ ನಿದ್ದೆ ಮಾಡಲ್ಲ: ಸಚಿವ ಎಂಬಿಪಾಗೆ ಛಲವಾದಿ ತಿರುಗೇಟು

ಈಗ ಹೇಳಲಿ, ಲಜ್ಜೆಗೆಟ್ಟವರು ಯಾರು ಎಂದು ಹರಿಹಾಯ್ದರು. ಕೆಲವರನ್ನು ತೃಪ್ತಿಪಡಿಸುವ ಮತ್ತು ಜೇಬು ತುಂಬಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂಬುದಾಗಿ ರಾಜ್ಯದ ಜನತೆ ಟೀಕಿಸುತ್ತಿದ್ದಾರೆ. ಹೈದರಾಬಾದ್‌ನವರಿಗೆ 10 ಎಕರೆ ಜಾಗವನ್ನು ಬೆಂಗ ಳೂರಿನಲ್ಲಿ ಕೊಟ್ಟಿದ್ದಾರೆ. ಅವರಿಗೆ ಸಿಎ ನಿವೇಶನ ಹೇಗೆ ಕೊಡಲು ಸಾಧ್ಯ? ಇಲ್ಲಿನ ಜನರಿಗೆ ಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಸೇರಿದ 71 ಜನ ಹಣ ಕಟ್ಟಿ ನಾಲೈದು ವರ್ಷಗಳಿಂದ ಸಿಎ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಇನ್ನೂ 800 ಎಕರೆ ಭೂಮಿ 

ರಾಜ್ಯಪಾಲರು ವರದಿ ಕೇಳಿರುವುದು ಸಂತೋಷ: 

ಸಿದ್ದಾರ್ಥ ವಿಹಾರ ಟ್ರಸ್ಟ್ ಬಗ್ಗೆ ರಾಜ್ಯಪಾಲರು ವರದಿ ನೀಡಲಾಗಿದೆ. ನನ್ನನ್ನು ಕೇಳಿರುವುದು ಸಂತೋಷ. ನಾನು ಒಂದು ನಿವೇಶನ ವರದಿ ಕೇಳಿಲ್ಲ. 193 ನಿವೇಶನಗಳ ಕುರಿತು ವರದಿ ಕೇಳಿದ್ದೇನೆ. 2024ರ ಫೆ.5ರಂದು ತರಾತುರಿಯಲ್ಲಿ ಮಂಜೂರು ಮಾಡಿದ್ದಾರೆ. ಸಾಮಾಜಿಕ ಹೋರಾಟ ಗಾರ ದಿನೇಶ್ ಕಲ್ಲಹಳ್ಳಿ ಇದನ್ನು ಮೊದಲು ಹೊರತಂದಿದ್ದು, ಪ್ರತಿಪಕ್ಷದ ನಾಯಕನಾಗಿ ನಾನು ಹೋರಾಟ ಶುರು ಮಾಡಿದೆ ಎಂದು ಛಲವಾದಿ ತಿಳಿಸಿದರು.
ಜಾಗ ಇದೇ ವೇಳೆ ದಲಿತ ಎಂದು ಪದೇಪದೇ ಹೇಳಿ ಕೊಂಡು ಜಾತಿ ರಕ್ಷಣೆ ಪಡೆಯಲು ನಾನು ಸಿದ್ಧನಿಲ್ಲ. ಬಹಳ ನಿಂದನೆ ಮಾಡಿದ್ದಾರೆ. ಆದರೆ, ಜಾತಿ ನಿಂದನೆ ಮಾಡಿದ್ದಾಗಿ ನಾನು ಹೇಳಿಲ್ಲ. ನನ್ನ ಸ್ಥಾನವನ್ನು ನಿಂದಿಸಿದ್ದಾಗಿ ಹೇಳಿದ್ದೇನೆ. ಕಾಂಗ್ರೆಸ್ಸಿಗರು ನಿಂದಿಸಿದ ಕುರಿತು ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. 

Latest Videos
Follow Us:
Download App:
  • android
  • ios