Asianet Suvarna News Asianet Suvarna News

Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

*   ಜನ್ಮದಿನಾಂಕದ ಬದಲು ಜನ್ಮವರ್ಷ ಆಧರಿಸಿ ಲಸಿಕೆ ನೀಡಿಕೆ
*   2007ರ ಡಿ.31ರೊಳಗೆ ಜನಿಸಿದ ಮಕ್ಕಳು ಮಾತ್ರ ಲಸಿಕೆಗೆ ಅರ್ಹ
*   2008ರ ಜ.1ರಂದು ಜನಿಸಿದವರಿಗೆ ಲಸಿಕೆ ಇಲ್ಲ
 

Many Children Are Not Vaccinated Due to Government Criteria Confusion in Karnataka grg
Author
Bengaluru, First Published Feb 11, 2022, 5:26 AM IST

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಫೆ.11):  ಹುಟ್ಟಿದ ವರ್ಷದ ಆಧಾರದ ಮೇಲೆ ಶಾಲಾ-ಕಾಲೇಜು ಮಕ್ಕಳಿಗೆ (15-18 ವರ್ಷದೊಳಗಿನ) ಕೋವಿಡ್‌ ಲಸಿಕೆ(Covid Vaccine) ನೀಡಬೇಕೆಂಬ ಕೇಂದ್ರ ಸರ್ಕಾರ(Central Government) ಹೊರಡಿಸಿರುವ ಮಾರ್ಗಸೂಚಿ ಗೊಂದಲದಿಂದ ಕೂಡಿರುವ ಪರಿಣಾಮ ಆಯ್ದ ಸಾವಿರಾರು ಮಕ್ಕಳು(Children) ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಜನ್ಮ ದಿನಾಂಕದ(Date of Birth) ಬದಲು ಕೇವಲ ಜನ್ಮವರ್ಷ ಆಧರಿಸಿ ಲಸಿಕೆ ನೀಡುತ್ತಿರುವುದೇ

ಈ ಗೊಂದಲಕ್ಕೆ ಕಾರಣ.

ವಿಶೇಷವಾಗಿ 2007 ಡಿಸೆಂಬರ್‌ 31ರೊಳಗೆ ಜನಿಸಿದ ಮಕ್ಕಳು ಲಸಿಕೆ(Vaccine) ಪಡೆಯಲು ಅರ್ಹತೆ ಹೊಂದಿದ್ದರೆ, 2008 ಜನವರಿ ನಂತರ ಜನಿಸಿದ ಮಕ್ಕಳು ಲಸಿಕೆ ಪಡೆಯಲಾಗುತ್ತಿಲ್ಲ. ಇದರಿಂದಾಗಿ ರಾಜ್ಯಾದ್ಯಂತ(Karnataka) ಸಾವಿರಾರು ಮಕ್ಕಳಿಗೆ ಲಸಿಕೆ ನೀಡಲು ನಿರಾಕರಿಸಲಾಗುತ್ತಿದೆ. ಇತ್ತೀಚೆಗೆ ಕೊರೋನಾ ಮೂರನೇ ಅಲೆ(Corona 3rd Wave) ತೀವ್ರಗೊಂಡ ಸಂದರ್ಭದಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಲಾಗದೇ ಆತಂಕಗೊಂಡಿದ್ದರು.

Covid 3rd Wave : ಕೊರೋನಾದಿಂದ ಗುಣಮುಖರಾದ್ರೂ ಕೆಮ್ಮು, ಗಂಟಲು ಕಿರಿಕಿರಿ ತಪ್ಪಿಲ್ಲ..!

ಈ ಹಿಂದೆ ಕೇಂದ್ರ ಸರ್ಕಾರ 60, 45 ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಹುಟ್ಟಿದ ವರ್ಷ, ದಿನಾಂಕ ಪರಿಗಣಿಸಿ ಲಸಿಕೆ ನೀಡುತ್ತಿತ್ತು. ಪೋರ್ಟಲ್‌ನಲ್ಲಿಯೂ ಸಹ ನಿಗದಿಪಡಿಸಿದ ವಯಸ್ಸು ದಾಟಿದವರು ಮಾತ್ರ ನೋಂದಣಿಯಾಗುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗಿತ್ತು. ಆದರೆ ಈಗ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆ ನೀಡುವ ಅಭಿಯಾನದಲ್ಲಿ ಕೇವಲ ಹುಟ್ಟಿದ ವರ್ಷವನ್ನು ಪರಿಗಣಿಸಿರುವುದರಿಂದ ಒಂದೇ ತರಗತಿಯ ಕೆಲವು ಮಕ್ಕಳು ಲಸಿಕೆ ಪಡೆದುಕೊಂಡರೆ, ಇನ್ನೂ ಕೆಲವು ಮಕ್ಕಳು ಲಸಿಕೆ ನೀಡಿಕೆ ಪಡೆಯಲು ಆಗುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಗಳು, ಶಾಲಾ ಆಡಳಿತ ಮಂಡಳಿಗಳು ಈಗ ತಾನೇ 15 ವರ್ಷಕ್ಕೆ ಕಾಲಿಟ್ಟ(2008 ಜನವರಿ ತಿಂಗಳಲ್ಲಿ ಜನಿಸಿದ) ಮಕ್ಕಳಿಗೆ ಲಸಿಕೆ ನೀಡದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆಯುತ್ತೇವೆ: ಆರೋಗ್ಯಆಯುಕ್ತ

ಈ ಸಮಸ್ಯೆಯ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌, ಈ ಸಮಸ್ಯೆ ಇರುವುದು ನಿಜ, ಹುಟ್ಟಿದ ವರ್ಷದ ಆಧಾರದಲ್ಲಿಯೇ ಲಸಿಕೆಯ ಫಲಾನುಭವಿಗಳನ್ನು ಗುರುತಿಸುವ ರೀತಿಯಲ್ಲಿ ಸಾಫ್ಟ್‌ವೇರ್‌ ವಿನ್ಯಾಸವಿದೆ. ಹುಟ್ಟಿದ ದಿನದ ಆಧಾರದಲ್ಲಿ ವಯಸ್ಸು ಲೆಕ್ಕ ಹಾಕಿ ಲಸಿಕೆ ಪಡೆಯಲು ಸಾಫ್ಟ್‌ವೇರ್‌ ಅವಕಾಶ ನೀಡುತ್ತಿಲ್ಲ. ನಾವು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ’ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಸಿಗದೆ 3ನೇ ಡೋಸ್‌, ಮಕ್ಕಳಿಗೆ ಸಮಸ್ಯೆ

ರಾಜ್ಯದಲ್ಲಿ ಕೋವ್ಯಾಕ್ಸಿನ್‌(Covaxin) ಲಸಿಕೆಯ ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ, ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್‌(Booster Dose) ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.

Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!

ಜನವರಿ 3ರಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡುವ ಅಭಿಯಾನ ಆರಂಭಿಸಿದ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ನೀಡಲು ಅನುಮತಿ ನೀಡಿತ್ತು. ಪ್ರಾರಂಭದಲ್ಲಿ ರಾಜ್ಯಾದ್ಯಂತ ಭಾರಿ ಉತ್ಸಾಹದಿಂದ ಮಕ್ಕಳ ಲಸಿಕೆ ಅಭಿಯಾನ ಆರಂಭಗೊಂಡಿತಾದರೂ ಎರಡನೇ ಡೋಸ್‌ ಪಡೆಯಲು ಮಕ್ಕಳು ಲಸಿಕಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಸುಮಾರು 8 ಲಕ್ಷ ಮಂದಿ ಮಕ್ಕಳು ಮೊದಲ ಡೋಸ್‌ ಪಡೆಯಲು ಬಾಕಿ ಇದ್ದಾರೆ.

ಜನವರಿ 3ರಿಂದ 12 ರೊಳಗೆ ಲಸಿಕೆ ಪಡೆದುಕೊಂಡ 17.64 ಲಕ್ಷ ಮಂದಿ ಮಕ್ಕಳು ಎರಡನೇ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ. ಆದರೆ ಫೆ.9ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕೇವಲ 7.10 ಲಕ್ಷ ಮಕ್ಕಳು ಮಾತ್ರ (ಶೇ. 40) ಎರಡನೇ ಡೋಸ್‌ ಪಡೆದಿದ್ದಾರೆ. ಕೆಲವು ಶಾಲೆಗಳಲ್ಲಿ ಒಂದು ಸುತ್ತಿನ ಎರಡನೇ ಡೋಸ್‌ ಲಸಿಕೆ ಅಭಿಯಾನ ನಡೆದಿದೆ. ಆದರೆ ಅಂದು ಲಸಿಕೆ ಪಡೆಯಲು ಸಾಧ್ಯವಾಗದವರು ಶಾಲೆ ಅಥವಾ ಮನೆಗೆ ಹತ್ತಿರದ ಲಸಿಕಾ ಕೇಂದ್ರಗಳಿಗೆ ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
 

Follow Us:
Download App:
  • android
  • ios